ಲೋಕಸಭೆಯಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜಯಶಂಕರ್ ಅವರ ಹೇಳಿಕೆ
ನವ ದೆಹಲಿ – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಲವು ಹಿಂಸಾಚಾರದ ಅನೇಕ ಘಟನೆಗಳು ನಡೆದಿವೆ. ಈ ಘಟನೆಗಳನ್ನೂ ನಾವು ಪರಿಶೀಲಿಸಿದ್ದೇವೆ. ಇತ್ತೀಚೆಗೆ ನಮ್ಮ ವಿದೇಶಾಂಗ ಕಾರ್ಯದರ್ಶಿ ಢಾಕಾಗೆ ಹೋಗಿದ್ದರು. ಅಲ್ಲಿನ ಸಭೆಯಲ್ಲೂ ಈ ಸೂತ್ರವನ್ನು ಚರ್ಚಿಸಲಾಯಿತು. ಬಾಂಗ್ಲಾದೇಶ ಅಲ್ಪಸಂಖ್ಯಾತರ ರಕ್ಷಣೆಗೆ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸುತ್ತೇವೆ, ಎಂದು ಭಾರತದ ವಿದೇಶಾಂಗ ಸಚಿವರು ಡಾ. ಎಸ್. ಜಯಶಂಕರ ಇವರು ಲೋಕಸಭೆಯಲ್ಲಿ ಸಂಸದ ಅಸಾದುದ್ದೀನ ಓವೈಸಿ ಕೇಳಿದ ಪ್ರಶ್ನೆಗೆ ಉತ್ತರಿಸಿದರು. (ಒಬ್ಬ ಹಿಂದೂ ಸಂಸದನಲ್ಲ, ಬದಲಾಗಿ ಅಸಾದುದ್ದೀನ್ ಓವೈಸಿಯಂತಹ ಸಂಸದರು ಇಂತಹ ಪ್ರಶ್ನೆಯನ್ನು ಕೇಳುತ್ತಾರೆ, ಎಂತಹ ನಾಚಿಕೆಗೇಡು ! – ಸಂಪಾದಕರು)
ಹಾಗೆಯೇ ಮ್ಯಾನ್ಮಾರ್ ವಿಷಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವ ಡಾ. ಜಯಶಂಕರ್, ‘ಭಾರತ ಸರಕಾರ ಮ್ಯಾನ್ಮಾರ್ ಜತೆಗಿನ ಒಪ್ಪಂದವನ್ನು ಪರಿಶೀಲಿಸುತ್ತಿದೆ. ಈ ಒಪ್ಪಂದದ ಅಡಿಯಲ್ಲಿ ಜನರು ಪರಸ್ಪರ ಗಡಿ ದಾಟಲು ಅನುಮತಿಸಲಾಗಿದೆ; ಆದರೆ ಸದ್ಯ ಭಾರತ ಇದನ್ನು ನಿಷೇಧಿಸಿದೆ’ ಎಂದು ಹೇಳಿದರು.
ಹಸೀನಾ ಹೇಳಿಕೆಯಿಂದ ಭಾರತ ಅಂತರ ಕಾಯ್ದುಕೊಂಡಿದೆ
ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಅವರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ ನಂತರ ಸಂಸತ್ತಿನ ಸ್ಥಾಯಿ ಸಮಿತಿಗೆ, ಬಾಂಗ್ಲಾದೇಶದ ಮಧ್ಯಂತರ ಸರಕಾರವನ್ನು ಟೀಕಿಸುವ ಶೇಖ್ ಹಸೀನಾ ಅವರ ಹೇಳಿಕೆಯನ್ನು ಭಾರತ ಬೆಂಬಲಿಸುವುದಿಲ್ಲ, ಎಂದು ಹೇಳಿದರು. ಹಸೀನಾ ಹೇಳಿಕೆಯಿಂದ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ಬಾಂಗ್ಲಾದೇಶದೊಂದಿಗಿನ ಭಾರತದ ಸಂಬಂಧ ಯಾವುದೇ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ಇವು ಎರಡೂ ದೇಶಗಳ ನಾಗರಿಕರನ್ನು ಆಧರಿಸಿವೆ. ಶೇಖ್ ಹಸೀನಾ ತನ್ನ ಹೇಳಿಕೆಯನ್ನು ಮಂಡಿಸಲು ವೈಯಕ್ತಿಕ ಸಾಧನವನ್ನು ಬಳಸುತ್ತಿದ್ದರು. ಭಾರತವು ಅವರಿಗೆ ಯಾವುದೇ ಉಪಕರಣಗಳನ್ನು ನೀಡಿಲ್ಲ. ಭಾರತ ಸರಕಾರವು ಹಸೀನಾ ಅವರಿಗೆ ರಾಜಕೀಯ ಚಟುವಟಿಕೆ ನಡೆಸಲು ಯಾವುದೇ ಸೌಲಭ್ಯಗಳನ್ನು ಒದಗಿಸುವುದಿಲ್ಲವೆಂದು ಹೇಳಿದ್ದಾರೆ.
ಅಮೇರಿಕಾ ರಾಷ್ಟ್ರಪತಿ ಬಿಡೆನ್ ಬಾಂಗ್ಲಾದೇಶದ ಪರಿಸ್ಥಿತಿಯ ಮೇಲೆ ನಿಗಾ ವಹಿಸಿದ್ದಾರೆ ! – ಅಮೇರಿಕಾ
ಅಮೇರಿಕಾ ಸರಕಾರದ ಸಲಹೆಗಾರ ಜಾನ್ ಕಿರ್ಬಿ ಇವರು, ಅಧ್ಯಕ್ಷ ಬಿಡೆನ್ ಬಾಂಗ್ಲಾದೇಶದ ಪರಿಸ್ಥಿತಿಯ ಮೇಲೆ ನಿಗಾವಹಿಸಿದ್ದಾರೆ ಹಾಗೂ ಅಲ್ಪಸಂಖ್ಯಾತರ ಭದ್ರತೆಯನ್ನು ಖಾತ್ರಿಪಡಿಸುವಂತೆ ಮಧ್ಯಂತರ ಸರಕಾರಕ್ಕೆ ತಿಳಿಸಿದ್ದಾರೆ. ಶೇಖ್ ಹಸೀನಾ ದೇಶವನ್ನು ತೊರೆದ ನಂತರ, ಬಾಂಗ್ಲಾದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿತು. ಈ ಪರಿಸ್ಥಿತಿಯನ್ನು ಎದುರಿಸಲು ಬಾಂಗ್ಲಾದೇಶದ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ನಾವು ಸಹಾಯ ಮಾಡುತ್ತಿದ್ದೇವೆ ಎಂದು ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
ಸಂಪಾದಕೀಯ ನಿಲುವು
|