ಬಾಂಗ್ಲಾದೇಶದ ಪರಿಸ್ಥಿತಿಯನ್ನು ಪರಿಹರಿಸದಿದ್ದರೆ, ದಕ್ಷಿಣ ಏಷ್ಯಾದ ಪ್ರದೇಶದ ಸ್ಥಿರತೆ ಮತ್ತು ಶಾಂತಿಗೆ ಅಪಾಯವಿದೆ ! – ‘ನೊಬೆಲ್ ಶಾಂತಿ ಪ್ರಶಸ್ತಿ’ ವಿಜೇತ ಕೈಲಾಶ್ ಸತ್ಯಾರ್ಥಿ

‘ನೊಬೆಲ್ ಶಾಂತಿ ಪ್ರಶಸ್ತಿ’ ವಿಜೇತ ಕೈಲಾಶ್ ಸತ್ಯಾರ್ಥಿ ಇವರಿಂದ ಎಚ್ಚರಿಕೆ

ಮುಂಬಯಿ – ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಮತ್ತು ಧಾರ್ಮಿಕ ಸ್ಥಳಗಳ ಧ್ವಂಸವು ಅಸಂಖ್ಯಾತ ಜನರನ್ನು ಭಯಭೀತರನ್ನಾಗಿ ಮಾಡಿದೆ. ಅವರ ಮೂಲಭೂತ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ. ಈ ಅಸ್ಥಿರ ಪರಿಸ್ಥಿತಿಯನ್ನು ತಕ್ಷಣವೇ ಪರಿಹರಿಸದಿದ್ದರೆ, ಇದರ ಪರಿಣಾಮಗಳು ಬಾಂಗ್ಲಾದೇಶ ಸೇರಿದಂತೆ ಇತರ ದೇಶಗಳಿಗೆ ಹರಡುತ್ತವೆ. ಇದರಿಂದ ಇಡೀ ದಕ್ಷಿಣ ಏಷ್ಯಾ ಪ್ರದೇಶದಲ್ಲಿ ಸ್ಥಿರತೆ ಮತ್ತು ಶಾಂತಿಗೆ ಧಕ್ಕೆ ಉಂಟಾಗಲಿದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಎಚ್ಚರಿಸಿದ್ದಾರೆ.

 

ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, “ಅಲ್ಪಸಂಖ್ಯಾತರ ದಮನ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯು ನಮ್ಮ ಸಾಮೂಹಿಕ ವಿವೇಕತೆಯ ಮೇಲಿನ ದಾಳಿಯಾಗಿದೆ. ಆದ್ದರಿಂದ, ಯಾವುದೇ ವಿಳಂಬವಿಲ್ಲದೆ ಬದಲಾಗುತ್ತಿರುವ ಈ ಪರಿಸ್ಥಿತಿಗೆ ಗಮನ ಕೊಡಬೇಕಾದ ತುರ್ತು ಅಗತ್ಯವಿದೆ.” ಎಂದು ಹೇಳಿದ್ದಾರೆ.