ಆಂಧ್ರಪ್ರದೇಶದಲ್ಲಿ ‘ನನ್’ ಪ್ರಶಿಕ್ಷಣ ಪಡೆಯುವ ಕ್ರೈಸ್ತ ಹುಡುಗಿಯು ಕಾನ್ವೆಂಟ್ ನಲ್ಲಿ ಮಗುವಿಗೆ ಜನ್ಮ ನೀಡಿದಳು !

  • ಹುಡುಗಿಯಿಂದ ನವಜಾತ ಶಿಶುವಿನ ಹತ್ಯೆ

  • ಹುಡುಗಿಯ ಜೊತೆ ಸಂಬಂಧ ಹೊಂದಿದ್ದ ಪ್ರಶಿಕ್ಷಣಾರ್ಥಿ ಪಾದ್ರಿಯ ಬಂಧನ

ಅಮರಾವತಿ (ಆಂಧ್ರಪ್ರದೇಶ) – ಏಲೂರು ಇಲ್ಲಿಯ ‘ಸೇಂಟ್ ಜೋಸೆಫ್ ಕಾನ್ವೆಂಟ್ ಹಾಸ್ಟೆಲ್’ ನಲ್ಲಿ ‘ನನ್’ ಪ್ರಶಿಕ್ಷಣ ಪಡೆಯುವ ಅಪ್ರಾಪ್ತ ಕ್ರೈಸ್ತ ಹುಡುಗಿ ಒಂದು ಮಗುವಿಗೆ ಜನ್ಮ ನೀಡಿದಳು. ಅದರ ನಂತರ ಆಕೆ ಮಗುವಿನ ಹತ್ಯೆ ಮಾಡಿದಳು. ಈ ವಸತಿ ಗೃಹ ಏಲೂರಿನ ‘ಡೈಯೋಸೇಸಿಸ್’ ಈ ಚರ್ಚ ಆಡಳಿತ ಸಂಸ್ಥೆಯ ವತಿಯಿಂದ ನಡೆಸಲಾಗುತ್ತದೆ. ಈ ಪ್ರಕರಣದಲ್ಲಿ ಆಂಧ್ರ ಪ್ರದೇಶ ಪೊಲೀಸರು ಓರ್ವ ಪ್ರಶಿಕ್ಷಣಾರ್ಥಿ ಪಾದ್ರಿಯನ್ನು ವಶಕ್ಕೆ ಪಡೆದಿದ್ದಾರೆ. ಆ ಪಾದ್ರಿಯು ಸಂತ್ರಸ್ತ ಪ್ರಶಿಕ್ಷಣಾರ್ಥಿ ನನ್ ಜೊತೆಗೆ ಸಂಬಂಧ ಹೊಂದಿದ್ದನು.

೧. ಈ ವಿಷಯವಾಗಿ ಒಂದು ವಾರ್ತೆಯ ಪ್ರಕಾರ ‘ನನ್’ ಪ್ರಶಿಕ್ಷಣ ಪಡೆಯಲು ಈ ಕ್ರೈಸ್ತ ಹುಡುಗಿ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯವಳಾಗಿದ್ದು ಆಕೆ ಸೇಂಟ್ ಜೋಸೆಫ್ ಕಾನ್ವೆಂಟ್ ನಲ್ಲಿ ಎರಡನೆಯ ವರ್ಷದ ವಿದ್ಯಾರ್ಥಿನಿ ಆಗಿದ್ದಾಳೆ.

೨. ಡಿಸೆಂಬರ್ ೮, ೨೦೨೪ ರಂದು ಆಕೆ ವಸತಿಗೃಹದಲ್ಲಿ ಮಗುವಿಗೆ ಜನ್ಮ ನೀಡಿದಳು ಮತ್ತು ತಕ್ಷಣ ಮಗುವನ್ನು ಕಿಡಕಿಯಿಂದ ಹೊರ ಎಸೆದು ಹತ್ಯೆ ಮಾಡಿದಳು.

೩. ಈ ಘಟನೆಯ ಮಾಹಿತಿ ದೊರೆಯುತ್ತಲೇ ಪೊಲೀಸರು ಮತ್ತು ಮಹಿಳಾ ಬಾಲಕಲ್ಯಾಣ ಇಲಾಖೆಯ ಅಧಿಕಾರಿ ಘಟನಾ ಸ್ಥಳಕ್ಕೆ ತಲುಪಿದರು. ಪೊಲೀಸ ಅಧಿಕಾರಿ ರಮಣ ಇವರ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆಸಿದರು.

೪. ಈ ಘಟನೆಯಿಂದ ಕಾನ್ವೆಂಟ್ ವಸತಿಗೃಹದಲ್ಲಿನ ಆಡಳಿತದ ನಿರ್ಲಕ್ಷತನ ಬಹಿರಂಗವಾಗಿದೆ.

ಸಂಪಾದಕೀಯ ನಿಲುವು

  • ಚರ್ಚ್ ನಿಂದ ನಡೆಸಲಾಗುತ್ತಿರುವ ಸಂಸ್ಥೆಗಳು ಇವು ಅನಾಚಾರದ ಕೇಂದ್ರಗಳಾಗಿವೆ, ಇದು ಇದರ ಇನ್ನೊಂದು ಉದಾಹರಣೆ !
  • ಜಗತ್ತಿನಾದ್ಯಂತ ಪಾದ್ರಿಗಳು ಹುಡುಗಿಯರ ಲೈಂಗಿಕ ಶೋಷಣೆ ನಡೆಸುತ್ತಿರುವ ಅನೇಕ ಘಟನೆಗಳು ಬೆಳಕಿಗೆ ಬಂದಿವೆ. ಭಾರತದಲ್ಲಿ ಕೂಡ ಇಂತಹ ಘಟನೆಗಳು ಬೆಳಕಿಗೆ ಬರುತ್ತೇವೆ; ಆದರೆ ಯಾವಾಗಲೂ ಹಿಂದೂ ಅರ್ಚಕರು ಮತ್ತು ಸಂತರನ್ನು ‘ಖಲನಾಯಕ’ ಎಂದು ಬಣ್ಣಿಸುವಲ್ಲಿ ಮಗ್ನವಾಗಿರುವ ಪ್ರಸಾರ ಮಾಧ್ಯಮಗಳು ಇಂತಹ ಘಟನೆಗಳಿಗೆ ಪ್ರಸಿದ್ಧಿ ನೀಡುವುದಿಲ್ಲ, ಇದನ್ನು ತಿಳಿಯಿರಿ !