ನವ ದೆಹಲಿ – ಪೌರತ್ವ ತಿದ್ದುಪಡಿ ಕಾಯ್ದೆ (‘ಸಿಎಎ’) ಅಡಿಯಲ್ಲಿ ಮೊದಲ ಹಂತದ ಪೌರತ್ವ ಪ್ರಮಾಣಪತ್ರಗಳನ್ನು ಮೇ 15 ರಂದು ನೀಡಲಾಯಿತು. ಕೇಂದ್ರ ಗೃಹ ಕಾರ್ಯದರ್ಶಿ ಅಜಯ ಕುಮಾರ ಭಲ್ಲಾ ಅವರು ನವದೆಹಲಿಯಲ್ಲಿ 14 ಅರ್ಜಿದಾರರಿಗೆ ಪೌರತ್ವ ಪ್ರಮಾಣಪತ್ರಗಳನ್ನು ನೀಡಿದರು. ಗೃಹ ಸಚಿವಾಲಯದ ಪ್ರಕಾರ, ಇತರ ಹಲವಾರು ಅರ್ಜಿದಾರರಿಗೆ ಇ-ಮೇಲ್ ಮೂಲಕ ಡಿಜಿಟಲ್ ಸಹಿ ಮಾಡಿದ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ಗೃಹ ಕಾರ್ಯದರ್ಶಿಗಳು ಅರ್ಜಿದಾರರನ್ನು ಅಭಿನಂದಿಸುತ್ತಾ ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಮುಖ ಅಂಶಗಳ ಮೇಲೆ ಬೆಳಕು ಚೆಲ್ಲಿದರು.
ಈ ಕಾಯಿದೆಯ ಅಡಿಯಲ್ಲಿ, ಡಿಸೆಂಬರ್ 31, 2014 ರವರೆಗೆ ಧಾರ್ಮಿಕ ಕಿರುಕುಳ ಅಥವಾ ಅವರ ಭಯದಿಂದ ಭಾರತಕ್ಕೆ ಬಂದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿನ ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರೈಸ್ತರು, ಈ ಸಮುದಾಯದ ವ್ಯಕ್ತಿಗಳು ಭಾರತೀಯ ಪೌರತ್ವಕ್ಕಾಗಿ ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಪೋರ್ಟಲ್ ಮೂಲಕ ಮಾಡಲಾಗಿದೆ. ಅಧಿಕಾರ ಸಮಿತಿಯಿಂದ ಮಾಡಿದ ಪರಿಶೀಲನೆ ನಂತರ 14 ಅರ್ಜಿದಾರರಿಗೆ ಪೌರತ್ವ ನೀಡಲು ನಿರ್ಧರಿಸಲಾಯಿತು. ಡಿಸೆಂಬರ್ 2019 ರಲ್ಲಿ ‘ಸಿಎಎ’ ಜಾರಿಗೆ ಬಂದಿತ್ತು.