Superstition Girl Killed : ನೆಲ್ಲೂರು (ಆಂಧ್ರಪ್ರದೇಶ) ಇಲ್ಲಿ ಮೂಡನಂಬಿಕೆಯಿಂದ ಜೀವ ಕಳೆದುಕೊಂಡ ೮ ವರ್ಷದ ಹುಡುಗಿ

ಬ್ರೈನ್ ಟ್ಯೂಮರ್ ಆಗಿರುವ ಹಿಂದೂ ಹುಡುಗಿಯ ಪೋಷಕರು ಚಿಕಿತ್ಸೆಗಾಗಿ ಆಕೆಯನ್ನು ೪೦ ದಿನ ಚರ್ಚ್ ನಲ್ಲಿ ಇಟ್ಟಿದ್ದರಿಂದ ಸಾವು !

ನೆಲ್ಲೂರು (ಆಂಧ್ರಪ್ರದೇಶ) – ಜಿಲ್ಲೆಯಲ್ಲಿನ ಬಾಲಾಜಿ ರಾವಪೇಟ್, ಕಾಳುವೈ ಮಂಡಳ ಇಲ್ಲಿಯ ಒಂದು ಸಂಕುಲದಲ್ಲಿ ವಾಸಿಸುವ ಭಾಗ್ಯಶ್ರೀ ಎಂಬ ಓರ್ವ ೮ ವರ್ಷದ ಹುಡುಗಿಗೆ ಬ್ರೈನ್ ಟ್ಯೂಮರ್ ಆಗಿತ್ತು. ಸಂತ್ರಸ್ತೆಯ ಪೋಷಕರು ಆಕೆಗೆ ಚಿಕಿತ್ಸೆಗಾಗಿ ಕೊಂಡೊಯ್ಯುವ ಬದಲು ಚರ್ಚ್‌ಗೆ ಕರೆದುಕೊಂಡು ಹೋದರು. ಒಟ್ಟು ೪೦ ದಿನ ಸಂತ್ರಸ್ತೆಯನ್ನು ಚಿಕಿತ್ಸೆಗಾಗಿ ಆಕೆಯ ಕುಟುಂಬದವರು ಚರ್ಚ್‌ನಲ್ಲೇ ಇದ್ದರು. ಆ ಸಮಯದಲ್ಲಿ ಕುಟುಂಬದವರು ಆಕೆಯ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿದರು; ಆದರೆ ಅದರಿಂದ ಎಳ್ಳಷ್ಟು ಪ್ರಯೋಜನವಾಗಲಿಲ್ಲ. ಕೊನೆಗೆ ಡಿಸೆಂಬರ್ ೯ ರಂದು ಸಂತ್ರಸ್ತ ಹುಡುಗಿ ಚರ್ಚ್ ನಲ್ಲಿಯೇ ಅಸುನೀಗಿದಳು.

ಭಾಗ್ಯಶ್ರೀಗೆ ನಿರಂತರ ತಲೆ ನೋವು ಮತ್ತು ವಾಂತಿಯ ಆಗುತ್ತಿತ್ತು, ಆದ್ದರಿಂದ ಚಿಕಿತ್ಸೆಗಾಗಿ ತಾಯಿ ಲಕ್ಷ್ಮಿ ಮತ್ತು ತಂದೆ ಲಕ್ಷ್ಮಯ್ಯ ಇವರು ಆಕೆಗೆ ಅನೇಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು; ಆದರೆ ತಂದೆ ತಾಯಿಗೆ ಹುಡುಗಿಯ ಶಸ್ತ್ರ ಚಿಕಿತ್ಸೆ ಮಾಡಿಸುವ ಸಾಮರ್ಥ್ಯ ಇಲ್ಲದ್ದರಿಂದ ಅವರ ಸಂಬಂಧಿಕರ ಬಳಿ ಸಹಾಯ ಕೇಳಿದರು. ಅವರ ಹೇಳಿದಂತೆ ಚಿಕಿತ್ಸೆಗಾಗಿ ಹುಡುಗಿಯನ್ನು ಅದುರೂಪಲ್ಲಿಯ ಚರ್ಚ್‌ಗೆ ಕರೆದುಕೊಂಡು ಹೋದರು. ‘ದೇವರಿಗೆ ಪ್ರಾರ್ಥನೆ ಮಾಡಿದರೆ ಹುಡುಗಿಯ ಆರೋಗ್ಯ ಸರಿ ಆಗುವುದು’, ಎಂದು ಅವರಿಗೆ ಹೇಳಲಾಯಿತು. ಚರ್ಚ್‌ನಲ್ಲಿ ೪೦ ದಿನ ಹುಡುಗಿಯನ್ನು ಇರಿಸಲಾಗಿತ್ತು. ಅದರೆ ಚಿಕಿತ್ಸೆಯ ಕೊರತೆಯಿಂದ ಆಕೆ ಸಾವನ್ನಪ್ಪಿದಳು.

ಸಂಪಾದಕೀಯ ನಿಲುವು

ಈ ರೀತಿಯ ಘಟನೆ ದೇವಸ್ಥಾನದಲ್ಲಿ ಘಟಿಸಿದ್ದರೆ, ಪ್ರಗತಿ (ಅಧೋಗತಿ) ಪರರು ಮತ್ತು ಅಂನಿಸದಂತಹ ಸಂಘಟನೆಗಳಿಂದ ಆಕಾಶ ಪಾತಾಳ ಬಂದು ಮಾಡುತ್ತಾ ಮತ್ತು ಹಿಂದುಗಳ ವಿರುದ್ಧ ಕಿಡಿ ಕಾರುತ್ತಿದ್ದರು. ಆದರೆ ಈ ಘಟನೆ ಚರ್ಚ್‌ನಲ್ಲಿ ಆಗಿದ್ದರಿಂದ ಎಲ್ಲರೂ ಶಾಂತವಾಗಿದ್ದಾರೆ !