NATO Type Muslim Army: ಪಾಕಿಸ್ತಾನ ಸಹಿತ 20 ಕ್ಕೂ ಹೆಚ್ಚು ಇಸ್ಲಾಮಿಕ್ ದೇಶಗಳಿಂದ ಸ್ವತಂತ್ರ ಸೇನಾ ಸಂಘಟನೆ ಸ್ಥಾಪನೆ !

ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲು ಪ್ರಾರಂಭ

ನವ ದೆಹಲಿ – ಪಾಕಿಸ್ತಾನ ಸಹಿತ ಏಷ್ಯಾ ಮತ್ತು ಆಫ್ರಿಕಾದ 20 ಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳು ಒಟ್ಟಾಗಿ ‘ನ್ಯಾಟೋ’ (30 ಕ್ಕೂ ಹೆಚ್ಚು ದೇಶಗಳ ಸೇನಾ ಸಂಘಟನೆ) ನಂತಹ ಸ್ವತಂತ್ರ ‘ಮುಸ್ಲಿಂ ನ್ಯಾಟೋ’ (ಸೇನಾ ಸಂಘಟನೆ) ಸ್ಥಾಪಿಸಲಿವೆ. ಈ ಗುಂಪಿನಲ್ಲಿ ಪ್ರಮುಖ ಸದಸ್ಯರಾಗಿ ಸೌದಿ ಅರೇಬಿಯಾ, ಪಾಕಿಸ್ತಾನ, ಟರ್ಕಿ, ಈಜಿಪ್ಟ್, ಯುನೈಟೆಡ್ ಅರಬ್ ಎಮಿರೇಟ್ಸ್, ಜೋರ್ಡಾನ, ಬಹ್ರೇನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಮಲೇಷ್ಯಾ ದೇಶಗಳು ಸೇರಿವೆ. ಸಹ ಸದಸ್ಯರಾಗಿ ಅಜರ್ಬೈಜಾನ, ಕಝಾಕಿಸ್ತಾನ, ಉಜ್ಬೇಕಿಸ್ತಾನ, ತುರ್ಕಮೆನಿಸ್ತಾನ ಮತ್ತು ಬ್ರುನೈ ದೇಶಗಳು ಭಾಗವಹಿಸಬಹುದು. ಇಂಡೋನೇಷ್ಯಾ, ಇರಾನ, ಇರಾಕ, ಓಮನ, ಕತಾರ, ಕುವೈತ, ಮೊರಾಕ್ಕೊ, ಅಲ್ಜೇರಿಯಾ, ಟ್ಯುನೀಶಿಯಾ ಮತ್ತು ಲಿಬಿಯಾ ಪ್ರಮುಖ ಪಾಲುದಾರ ರಾಷ್ಟ್ರಗಳು ಅವರನ್ನು ಬೆಂಬಲಿಸಬಹುದು. ಈ ಗುಂಪಿನ ಮುಖ್ಯ ಉದ್ದೇಶ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುವುದು, ಮುಸ್ಲಿಂ ಏಕತೆಯನ್ನು ಉತ್ತೇಜಿಸುವುದಾಗಿದೆ.

ಈ ಹಿಂದೆಯೂ ಡಿಸೆಂಬರ್ 2015 ರಲ್ಲಿ, ‘ಇಸ್ಲಾಮಿಕ್ ಮಿಲಿಟರಿ ಕೌಂಟರ್ ಟೆರರಿಸಂ ಕೊಲಿಶನ್’ ಎಂಬ ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ಇದು ಏಷ್ಯಾ ಮತ್ತು ಆಫ್ರಿಕಾ ಖಂಡದ 42 ಮುಸ್ಲಿಂ ರಾಷ್ಟ್ರಗಳನ್ನು ಒಳಗೊಂಡಿತ್ತು. ಭಯೋತ್ಪಾದನೆಯ ವಿರುದ್ಧ ಹೋರಾಡಲು ಅಥವಾ ಸಂಘಟನೆಯನ್ನು ಸ್ಥಾಪಿಸಲಾಗಿತ್ತು. ಈ ಸಂಘಟನೆ ಈಗಲೂ ಕಾರ್ಯನಿರ್ವಹಿಸುತ್ತಿದೆ.

ಭಾರತ ಮತ್ತು ಮುಸ್ಲಿಂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗಲಿದೆ !

ಈ ‘ಮುಸ್ಲಿಂ ನ್ಯಾಟೋ’ದಿಂದಾಗಿ ಭಾರತ ಮತ್ತು ಮುಸ್ಲಿಂ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಗುಂಪು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಸಹಾಯ ಮಾಡುವ ಮೂಲಕ ಭಾರತೀಯ ಉಪಖಂಡದ ಸ್ಥಳೀಯ ರಾಜಕೀಯ, ರಾಜನೀತಿ ಮತ್ತು ಸಾಮರಸ್ಯದ ಸಮತೋಲನವನ್ನು ಭಂಗಗೊಳಿಸಲು ಪ್ರಯತ್ನಿಸಬಹುದು. ಈ ಗುಂಪು ಕಾಶ್ಮೀರದ ವಿಚಾರದಲ್ಲಿ ಮೂಗು ತೂರಿಸಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಸಂಪಾದಕೀಯ ನಿಲುವು

ಇಂದು ವಿಶ್ವಾದ್ಯಂತ ಭಯೋತ್ಪಾದನೆಗೆ ಜಿಹಾದಿ ಭಯೋತ್ಪಾದಕರು ಜವಾಬ್ದಾರರಾಗಿದ್ದಾರೆ. ಮುಸ್ಲಿಂ ದೇಶಗಳ ಸ್ವತಂತ್ರ ಸೇನಾ ಸಂಘಟನೆಯ ಸದಸ್ಯ ದೇಶಗಳ ಹೆಸರನ್ನು ನೋಡಿದರೆ, ಅದರಲ್ಲಿ ಅರ್ಧಕ್ಕಿಂತ ಹೆಚ್ಚು ದೇಶಗಳು ನೇರವಾಗಿ ಅಥವಾ ಪರೋಕ್ಷವಾಗಿ ಭಯೋತ್ಪಾದನೆಗೆ ಸೊಪ್ಪು ಹಾಕುತ್ತಿರುತ್ತಾರೆ. ಆದ್ದರಿಂದ, ಈ ಸಂಘಟನೆಗೆ ಮೊಟ್ಟ ಮೊದಲು ತಮ್ಮ ಸದಸ್ಯ ರಾಷ್ಟ್ರಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಹಾಗೆ ಅದು ಎಂದಿಗೂ ಮಾಡುವುದಿಲ್ಲ; ಆದ್ದರಿಂದ ಈ ಸೇನಾ ಸಂಘಟನೆಯನ್ನು ಸ್ಥಾಪಿಸುವ ಘೋಷಣೆಯೆಂದರೆ, ಕೇವಲ ತೋರಿಕೆಯಾಗಿದೆ !