Allu Arjun Interim Bail: ನಟ ಅಲ್ಲು ಅರ್ಜುನ್ ಗೆ ಮಧ್ಯಂತರ ಜಾಮೀನು

ಭಾಗ್ಯನಗರ (ತೆಲಂಗಾಣ) – ಇಲ್ಲಿಯ ‘ಸಂಧ್ಯಾ’ ಟಾಕಿಸ್‌ನ ಹೊರಗೆ ನಡೆದಿರುವ ಕಾಲ್ತುಳಿತದ ಪ್ರಕರಣದಲ್ಲಿ ನಟ ಅಲ್ಲೂ ಅರ್ಜುನ್ ಇವರನ್ನು ಪೊಲೀಸರು ಬಂಧಿಸಿದ್ದರು. ಅದರ ನಂತರ ಅವರಿಗೆ ೧೪ ದಿನದ ನ್ಯಾಯಾಲಯ ಬಂಧನ ವಿಧಿಸಲಾಗಿತ್ತು. ಜಾಮೀನು ಪಡೆಯುವದಕ್ಕಾಗಿ ಅಲ್ಲೂ ಅರ್ಜುನ್ ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರಿಂದ ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಅಲ್ಲೂ ಅರ್ಜುನ್ ‘ಪುಷ್ಪ 2’ ಈ ಚಲನಚಿತ್ರ ಪ್ರದರ್ಶನಗೊಂಡಿದೆ. ಈ ಹಿಂದೆ ಭಾಗ್ಯನಗರದ ‘ಸಂಧ್ಯಾ’ ಥಿಯೇಟರ್‍‌ನಲ್ಲಿ ಈ ಚಲನಚಿತ್ರ ತೋರಿಸಲಾಗಿತ್ತು. ಆ ಸಮಯದಲ್ಲಿ ಅವರನ್ನು ನೋಡಲು ಜನಜಂಗುಳಿ ಆಗಿತ್ತು. ಆ ಸಮಯದಲ್ಲಿ ನಡೆದಿರುವ ಕಾಲ್ತುಳಿತದಲ್ಲಿ ಓರ್ವ ಮಹಿಳೆಯು ಸಾವನ್ನಪ್ಪಿದ್ದು ಆಕೆಯ ಹುಡುಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಘಟನೆಯ ಕುರಿತು ಚಿಕ್ಕಡಪಲ್ಲಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. (ಈ ಘಟನೆಗೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇರುವ ಪೊಲೀಸರು ಮತ್ತು ಸರಕಾರ ಅಷ್ಟೇ ಜವಾಬ್ದಾರವಾಗಿದೆ ! – ಸಂಪಾದಕರು) ‘ಸಂಧ್ಯಾ’ ಥಿಯೇಟರ್‍‌ನಲ್ಲಿ ಅಲ್ಲೂ ಅರ್ಜುನ್ ಉಪಸ್ಥಿತರಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿಲ್ಲ, ಎಂದು ಪೊಲೀಸರ ಹೇಳಿಕೆ ಆಗಿದೆ ಹಾಗೂ ಇದರ ಮಾಹಿತಿ ಪೊಲೀಸರಿಗೆ ನೀಡಲಾಗಿದೆ ಎಂದು ಅಲ್ಲು ಅರ್ಜುನ ಇವರ ಹೇಳಿಕೆ ಆಗಿದೆ.

ಅಲ್ಲೂ ಅರ್ಜುನ್ ಇವರು ಡಿಸೆಂಬರ್ ೧೧ ರಂದು ಉಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿ ಪೊಲೀಸರು ದಾಖಲಿಸಿರುವ ದೂರು ರದ್ದು ಪಡಿಸಲು ಆಗ್ರಹಿಸಿದ್ದರು. ಅವರು, ‘ಈ ಘಟನೆಯಲ್ಲಿ ಮಹಿಳೆಯು ಸಾವನ್ನಪ್ಪಿರುವುದು, ಇದು ದುಃಖಕರವಾಗಿದೆ. ಚಲನಚಿತ್ರದ ಪ್ರದರ್ಶನದ ಪ್ರಯುಕ್ತ ನಾನು ಥಿಯೇಟರ್‍‌ಗೆ ಹೋಗುವುದು ಸಹಜವಾಗಿದೆ. ಈ ಹಿಂದೆಯೂ ಕೂಡ ನಾನು ಅನೇಕ ಚಲನಚಿತ್ರಗೃಹಕ್ಕೆ ಹೋಗಿದ್ದೇನೆ; ಆದರೆ ಇಂತಹ ಘಟನೆ ಎಂದೂ ಘಟಿಸಿಲ್ಲ. ನನ್ನ ಮೇಲೆ ದೂರು ದಾಖಲಿಸುವುದು, ಇದು ನ್ಯಾಯಾಲಯ ಪ್ರಕ್ರಿಯೆಯ ದುರುಪಯೋಗವಾಗಿದೆ. ಈ ಪ್ರಕರಣದಿಂದ ನನ್ನ ಪ್ರತಿಷ್ಠೆ ಮತ್ತು ಗೌರವಕ್ಕೆ ಧಕ್ಕೆ ಬರುವ ಸಾಧ್ಯತೆ ಇದೆ.’ ಎಂದು ಹೇಳಿದ್ದಾರೆ.