ರಾಮಜನ್ಮಭೂಮಿಯ ತೀರ್ಪಿನ ನಂತರ ಪುರಿ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಇವರ ಪ್ರತಿಪಾದನೆ !

ಸರ್ವೋಚ್ಚ ನ್ಯಾಯಾಲಯವು ಸುನ್ನೀ ವಕ್ಫ್ ಬೋರ್ಡ್‌ಗೆ ೫ ಎಕರೆ ಭೂಮಿಯನ್ನು ನೀಡುವುದು ದುರ್ದೈವವೇ ಆಗಿದೆ. ಭವಿಷ್ಯದಲ್ಲಿ ಈ ಭೂಮಿಯು ಭಯೋತ್ಪಾದಕರ ಮುಖ್ಯ ತಾಣ ವಾಗಿ ರೂಪಾಂತರವಾಗುವುದು, ‘ದೇಶಹಿತದ ದೃಷ್ಟಿಯಲ್ಲಿ ಇದು ಅಪಾಯಕಾರಿಯಾಗಿ ಪರಿಣಮಿಸಲಿದೆ ಹಾಗೂ ಇದರಿಂದಾಗಿ ಮುಂಬರುವ ಕಾಲದಲ್ಲಿ ಅಶಾಂತಿ ಉದ್ಭವಿಸಲಿದೆ

ಸ್ವಾತಂತ್ರ್ಯವೀರ ಸಾವರ್ಕರರ ವಿಷಯದ ಸಮ್ಮೇಳನಕ್ಕಾಗಿ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಸ್ಥಳ ಕೊಡಲು ನಕಾರ !

ರಾಜಸ್ಥಾನದ ಕಾಂಗ್ರೆಸ್ ಸರಕಾರವು ಈ ಹಿಂದೆಯೇ ಪಠ್ಯಪುಸ್ತಕದಲ್ಲಿನ ಸ್ವಾತಂತ್ರ್ಯವೀರ ಸಾವರ್ಕರರಿಗೆ ಸಂಬಂಧಿಸಿದ ಪಾಠಗಳಲ್ಲಿ ಅವರ ಹೆಸರಿನ ಮೊದಲು ಬರೆಯುತ್ತಿದ್ದ ‘ವೀರ ಈ ಶಬ್ದವನ್ನು ತೆಗೆದಿತ್ತು. ಈಗ ರಾಜಸ್ಥಾನ ವಿಶ್ವ ವಿದ್ಯಾಲಯವು ಸ್ವಾತಂತ್ರ್ಯವೀರ ಸಾವರ್ಕರರಿಗೆ ಸಂಬಂಧಿಸಿದ ಸಮ್ಮೇಳನಕ್ಕಾಗಿ ಸ್ಥಳವನ್ನು ನೀಡಲು ನಿರಾಕರಿಸಿದೆ.

೨೦೧೬ ರ ವರದಿಗನುಸಾರ ಭಾರತದಲ್ಲಿ ಮಹಿಳೆಯರಿಗಿಂತ ಪುರುಷರ ಆತ್ಮಹತ್ಯೆಯ ಪ್ರಮಾಣ ಹೆಚ್ಚು !

೨೦೧೬ ರಲ್ಲಿ ವಿವಾಹದ ಸಮಸ್ಯೆ, ಕಾಯಿಲೆ, ಆಸ್ತಿಯ ವಿವಾದ ಹಾಗೂ ಪ್ರೇಮ ಸಂಬಂಧ ಇತ್ಯಾದಿಗಳಿಂದಾಗಿ ಆತ್ಮಹತ್ಯೆಯ ಅತೀ ಹೆಚ್ಚು ಘಟನೆಗಳನ್ನು ನೋಂದಾಯಿಸಲಾಗಿದೆ. ಪರೀಕ್ಷೆಯಲ್ಲಿ ಅನುತ್ತೀರ್ಣ, ಹಣದ ಕೊರತೆ, ನಿರುದ್ಯೋಗ, ಮತ್ತು ಬಡತನ ಇತ್ಯಾದಿಗಳಿಂದ ಆತ್ಮಹತ್ಯೆಯ ಘಟನೆಗಳು ಕಡಿಮೆಯಾಗಿವೆ.

‘ಯುನೆಸ್ಕೊದಲ್ಲಿ ಪಾಕಿಸ್ತಾನವು ಅಯೋಧ್ಯೆಯ ತೀರ್ಪಿನ ಅಂಶವನ್ನು ಮಂಡಿಸಿದೊಡನೆ ಭಾರತದಿಂದ ಖಂಡತುಂಡ ಉತ್ತರ !

ಭಾರತವು ಜಮ್ಮು-ಕಾಶ್ಮೀರದಿಂದ ಕಲಂ ೩೭೦ ರದ್ದುಗೊಳಿಸಿದ ನಂತರ ಪಾಕಿಸ್ತಾನವು ಭಾರತದ ವಿರುದ್ಧ ಸತತ ಸುಳ್ಳು ಪ್ರಚಾರ ಮಾಡುತ್ತಿದೆ. ಆದರೆ ಅದರಲ್ಲಿ ಅದಕ್ಕೆ ಇಂದಿನ ತನಕ ಯಶಸ್ಸು ಸಿಕ್ಕಿಲ್ಲ. ಪ್ರತಿಬಾರಿ ಭಾರತದಿಂದ ಪಾಕಿಸ್ತಾನಕ್ಕೆ ಖಂಡತುಂಡ ಉತ್ತರ ನೀಡಲಾಗಿದೆ. ಕೆಲವು ದಿನಗಳ ಹಿಂದೆ ಭಾರತದ ಸರ್ವೋಚ್ಚ ನ್ಯಾಯಾಲಯವು ಐತಿಹಾಸಿಕ ತೀರ್ಪನ್ನು ನೀಡಿತು.

ಪಾನಿಪತ್ ಚಲನಚಿತ್ರದಲ್ಲಿ ಮುಸಲ್ಮಾನ ರಾಜರನ್ನು ಅತ್ಯಾಚಾರಿಯೆಂದು ತೋರಿಸಲು ಇತಿಹಾಸದಲ್ಲಿ ಬದಲಾವಣೆ ಮಾಡಲಾಗಿದೆ (ಅಂತೆ) – ಪಾಕಿಸ್ತಾನ ಮಂತ್ರಿ ಫವಾದ ಚೌಧರಿ

ಪಾನಿಪತ್ ಈ ಹಿಂದಿ ಚಲನಚಿತ್ರದಲ್ಲಿ ಮುಸಲ್ಮಾನ ರಾಜರನ್ನು ಅತ್ಯಾಚಾರಿ ಎಂದು ತೋರಿಸಲು ಇತಿಹಾಸದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಪಾಕಿಸ್ತಾನದ ವಿಜ್ಞಾನ ಮತ್ತು ಔದ್ಯೋಗಿಕ ಮಂತ್ರಿ ಫವಾದ ಚೌಧರಿಯವರು ಟ್ವೀಟ್ ಮೂಲಕ ಆರೋಪಿಸಿದ್ದಾರೆ.

ಮತಾಂಧನಿಂದ ಹಿಂದೂ ಯುವತಿಯನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಯುವತಿಯ ಮೃತದೇಹವನ್ನು ಸೀಮೆ ಎಣ್ಣೆ ಸುರಿದು ಸುಟ್ಟರು !

ಇಲ್ಲಿನ ನವಾಗಢದಲ್ಲಿ ಅನ್ವರ ಖಾನ್ ಎಂಬವನು ಸುನಿತಾ ಕುಶಾವಾಹ ಎಂಬ ಯುವತಿಯನ್ನು ಹತ್ಯೆ ಮಾಡಿದ ನಂತರ ಪೊಲೀಸರಿಗೆ ಶರಣಾಗಿದ್ದಾನೆ. ಸುನೀತಾಳಿಗೆ ಅನ್ವರನ ಸಹೋದರ ಜಮೀಲನಲ್ಲಿ ಪ್ರೇಮವಿತ್ತು. ಅವರು ಯಾರಿಗೂ ತಿಳಿಯದಂತೆ ವಿವಾಹವಾದರು ಹಾಗೂ ಒಟ್ಟಿಗೆ ವಾಸಿಸುತ್ತಿದ್ದರು.

ಕಾಶ್ಮೀರದಲ್ಲಿನ ಹಿಂಸಾಚಾರ ‘ಜಮಾತ-ಎ-ಇಸ್ಲಾಮೀಗೆ ಸಂಬಂಧಿತ ಭಯೋತ್ಪಾದಕರಿಂದಲೇ ಆಗಿದೆ ! – ಅಮೇರಿಕಾದ ಶಾಸಕ ಜಿಮ್ ಬಾಂಕ್ಸ್

ಕಾಶ್ಮೀರದಲ್ಲಿನ ಹೆಚ್ಚಿನ ಹಿಂಸಾಚಾರವು ‘ಜಮಾತ-ಎ-ಇಸ್ಲಾಮೀ ಎಂಬ ಪ್ರತ್ಯೇಕತಾವಾದಿ ಸಂಘಟನೆಗೆ ಸಂಬಂಧಿತ ಭಯೋತ್ಪಾದಕ ಸಂಘಟನೆಗಳೇ ನಡೆಸಿವೆ. ‘ಜಮಾತ-ಎ-ಇಸ್ಲಾಮೀಯ ಈ ಅತ್ಯಂತ ತೀವ್ರಗಾಮಿ ಸಂಘಟನೆಯಾಗಿದೆ.