ಅಮೇರಿಕಾದಲ್ಲಿರುವ ಹಿಂದೂಗಳಿಗೆ ಭದ್ರತೆ ಒದಗಿಸಿ ! – ಅಮೇರಿಕಾದ ಸಂಸದರ ಬೇಡಿಕೆ

ಅಮೇರಿಕಾ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿ ಹಿಂದೂಗಳ ವಿರುದ್ಧ ದ್ವೇಷದ ಘಟನೆಗಳು ಹೆಚ್ಚಾಗುತ್ತಿವೆ. ಹಿಂದೂ ಮತ್ತು ಅವರ ಆಸ್ತಿ-ಪಾಸ್ತಿಗಳನ್ನು ಗುರಿ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಹಿಂದೂಗಳ ಸಂಘಟನೆಗಳು ಅಮೇರಿಕಾದ ಕ್ಯಾಪಿಟಲ್ ಹಿಲ್ ನಲ್ಲಿ `ನ್ಯಾಶನಲ್ ಹಿಂದೂ ಎಡ್ವೊಕೆಸಿ ಡೆ ಆನ್ ದಿ ಹಿಲ್’ ಕಾರ್ಯಕ್ರಮದ ಆಯೋಜನೆ ಮಾಡಿತ್ತು.

ಇಸ್ಲಾಂ ದೇಶ ಟರ್ಕಿ ಜಗತ್ತಿನ ಎಲ್ಲಕ್ಕಿಂತ ಅಧಿಕ ಸ್ವೇಚ್ಛಾಚಾರಿ !

ಟರ್ಕಿ ಜನರು ೧೪ ಕ್ಕಿಂತಲೂ ಹೆಚ್ಚಿನ ಜನರೊಂದಿಗೆ ಲೈಂಗಿಕ ಸಂಬಂಧ ಇಟ್ಟುಕೊಳ್ಳುತ್ತಾರೆ. ಹಾಗೂ ಆಸ್ಟ್ರೇಲಿಯಾ, ಇಟಲಿ, ಅಮೇರಿಕಾ, ಕೆನಡಾ ಇಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇದರ ಪ್ರಮಾಣ ೧೦ ಕ್ಕಿಂತ ಅಧಿಕ !

ಖಲಿಸ್ತಾನಿ ಬೆಂಬಲಿಗರ ಮೇಲೆ ಕೆನಡಾದ ಭಾರತೀಯ ವಂಶಸ್ಥ ಸಂಸದ ಚಂದ್ರ ಆರ್ಯರಿಂದ ಟೀಕೆ

ಕೆನಡಾದಲ್ಲಿ ಜುಲೈ 8 ರಂದು ಖಲಿಸ್ತಾನಿ ಬೆಂಬಲಿಗರು `ಕಿಲ್ ಇಂಡಿಯಾ’ ಹೆಸರಿನ ಮೆರವಣಿಗೆಯನ್ನು ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಕೆಲವು ದಿನಗಳ ಹಿಂದೆ ಅವರಿಂದ ಒಂದು ಭಿತ್ತಿಪತ್ರ ಪ್ರಸಾರವಾಗಿತ್ತು. ಅದರಲ್ಲಿ ಭಾರತೀಯ ರಾಯಭಾರಿಗಳು ಖಲಿಸ್ತಾನಿ ಭಯೋತ್ಪಾದಕರ ಕೊಲೆಗಾರರಾಗಿದ್ದಾರೆಂದು ಆರೋಪಿಸಿದ್ದಾರೆ.

ಅಮೇರಿಕಾದಲ್ಲಿ ಕುಖ್ಯಾತ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನುನ ಅಪಘಾತದಲ್ಲಿ ಮೃತ್ಯು ಆಗಿರುವ ದಾವೆ !

ನಿಷೇಧಿತ ‘ಸಿಖ್ ಫಾರ್ ಜಸ್ಟಿಸ್’ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಗುರುಪತವಂತ ಸಿಂಹ ಪನ್ನು ಇವನು ಅಮೆರಿಕಾದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಸಮಾಚಾರವಿದೆ. ಅಮೇರಿಕಾದಲ್ಲಿನ ಹೆದ್ದಾರಿ ಸಂಖ್ಯೆ ೧೦೧ ನಲ್ಲಿ ಘಟಿಸಿರುವ ಘಟನೆ ಎಂದು ಹೇಳಲಾಗುತ್ತಿದೆ.

ಅಮೆರಿಕಾದ “ಶ್ವೇತ ಭವನ”ದಲ್ಲಿ ಮಾದಕ ಪದಾರ್ಥ ‘ಕೊಕೇನ್ ‘ಪತ್ತೆ !

ಜೂನ್ 2 ರಂದು ರಾತ್ರಿ ಅಮೆರಿಕಾದ ರಾಷ್ಟ್ರಾಧ್ಯಕ್ಷರ ನಿವಾಸ ಮತ್ತು ಕಾರ್ಯಲಯವಿರುವ ‘ಶ್ವೇತ ಭವನ’ದಲ್ಲಿ ಬಿಳಿಯ ಪುಡಿ ಸಿಕ್ಕಿರುವುದು ಕಂಡು ಬಂದಿದೆ. ಅನಂತರ ಸಂಪೂರ್ಣ ಶ್ವೇತ ಭವನವನ್ನು ಮುಚ್ಚಿ ತನಿಖೆ ಮಾಡಲಾಯಿತು. ಪ್ರಾಥಮಿಕ ತನಿಖೆಯಿಂದ ಈ ಪುಡಿ ‘ಕೊಕೇನ’ ಮಾದಕ ಪದಾರ್ಥ ಎಂದು ತಿಳಿದು ಬಂದಿದೆ.

ಸ್ಯಾನ್ ಫ್ರಾನ್ಸಿಸ್ಕೋ (ಅಮೇರಿಕಾ) ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೇಲೆ ಪುನಃ ಖಲಿಸ್ತಾನಿಯರಿಂದ ದಾಳಿ !

ಭಾರತೀಯ ರಾಯಭಾರಿ ಕಚೇರಿಯ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ನಡೆಸಿ ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಅಗ್ನಿಶಾಮಕ ದಳದವರು ಬೆಂಕಿಯನ್ನು ಹತೋಟಿಗೆ ತಂದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಜೀವಹಾನಿಯಾಗಲಿಲ್ಲ. ಮಾರ್ಚ್ ೨೦೨೩ ರಲ್ಲಿಯೂ, ಖಲಿಸ್ತಾನಿಯವರು ಇದೇ ರಾಯಭಾರ ಕಚೇರಿಯ ಮೇಲೆ ದಾಳಿ ಮಾಡಿದ್ದರು.

ಟೆಕ್ಸಾಸ್ (ಅಮೆರಿಕಾ) ನಲ್ಲಿ ಗುರು ಪೂರ್ಣಿಮೆಯ ದಿನ ೧೦ ಸಾವಿರ ಜನರಿಂದ ಶ್ರೀಮದ್ಭಗವದ್ಗೀತೆಯ ಸಾಮೂಹಿಕ ಪಠಣ !

ಆಲನ್ ಈಸ್ಟ್ ಸೆಂಟರ್ ನಲ್ಲಿ ಜುಲೈ 3 ರಂದು ಗುರುಪೂರ್ಣಿಮೆಯ ನಿಮಿತ್ತ ೧೦ ಸಾವಿರ ಜನರು ಸಾಮೂಹಿಕವಾಗಿ ಶ್ರೀಮದ್ಭಗವದ್ಗೀತೆಯನ್ನು ಪಠಿಸಿದರು. ಈ ವೇಳೆ ೭೫೦ ಕ್ಕೂ ಹೆಚ್ಚು ಮಂತ್ರಗಳನ್ನು ಪಠಣ ಮಾಡಲಾಯಿತು. ‘ಯೋಗ ಸಂಗೀತ ಟ್ರಸ್ಟ್ ,ಅಮೆರಿಕಾ’ ಮತ್ತು ‘ಎಸ್.ಜಿ.ಎಸ್. ಗೀತಾ ಫೌಂಡೇಶನ್’ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಾನುಷ್ಯನಿಂದ ಭೂಗರ್ಭದ ನೀರಿನ ಬೃಹತ್ ನೀರಾವರಿಯಿಂದಾಗಿ ಭೂಮಿಯ ಅಕ್ಷ (ಎಕ್ಸಿಸ್) ಬದಲಾಗುತ್ತಿದೆ ! – ಸಂಶೋಧನೆ

ಅತಿಯಾದ ನೀರಾವರಿಯಿಂದಾಗಿ ವಿಶ್ವಮಟ್ಟದಲ್ಲಿ ಸಮುದ್ರದ ಮಟ್ಟ ಏರಿಕೆ !

ಅಮೆರಿಕಾದ ಶಾಲೆಗಳಲ್ಲಿ ಹಿಂದಿ ಭಾಷೆ ಕಲಿಸಲು ಪ್ರಸ್ತಾವನೆ !

ಭಾರತದೊಂದಿಗೆ ವ್ಯಾಪಾರವನ್ನ ಹೆಚ್ಚಿಸಲು ಹಿಂದಿ ಭಾಷೆ ಕಡ್ಡಾಯವಾಗಿದೆ. ಹಾಗಾಗಿ ‘ಇಂಡಿಯನ್ ಅಮೆರಿಕನ್ ಇಂಪ್ಯಾಕ್ಟ್’ ಮತ್ತು ‘ಏಷ್ಯಾ ಸೊಸೈಟಿ’ ಸಂಘಟನೆಗಳ ೧೦೦ ಮಂದಿ ಅಮೆರಿಕಾದ ಶಾಲೆಗಳಲ್ಲಿ ಹಿಂದಿ ಭಾಷೆಯನ್ನು ಕಲಿಸುವ ಪ್ರಸ್ತಾವನೆಯನ್ನು ಅಮೆರಿಕದ ಅಧ್ಯಕ್ಷ ಜೋ ಬಾಯಡೆನ್ ಅವರ ಮುಂದಿಟ್ಟಿದ್ದಾರೆ.

ಮೆಕ್ಸಿಕೋ ದೇಶದಲ್ಲಿ ಅತಿಯಾದ ಉಷ್ಣತೆಯಿಂದ 100 ಜನರ ಸಾವು

ದೇಶದಲ್ಲಿ ತೀವ್ರ ಉಷ್ಣತೆಯ ಗಾಳಿಯಿಂದ ಕಳೆದ 2 ವಾರಗಳಲ್ಲಿ 100 ಜನರು ಸಾವನ್ನಪ್ಪಿದ್ದಾರೆ. ಈ ಜನರು ಅತಿಸಾರದಿಂದ ಸಾವನ್ನಪ್ಪಿದ್ದಾರೆ ಎಂದು ಬೆಳಕಿಗೆ ಬಂದಿದೆ. ಉಷ್ಣತೆಯ ಗಾಳಿಯಿಂದಾಗಿ ದೇಶದ ಕೆಲವು ಸ್ಥಳಗಳಳ್ಲಿ ತಾಪಮಾನ 50 ಡಿಗ್ರಿ ಸೆಲ್ಷಿಯಸ್ ಗಿಂತ ಹೆಚ್ಚಾಗಿದೆ.