ಇರಾನ್ ಗೆ ಎಚ್ಚರಿಕೆ ನೀಡಿರುವ ಅಮೇರಿಕಾ !
ವಾಷಿಂಗ್ಟನ್ (ಅಮೇರಿಕಾ) – ನಮಗೆ ಇರಾನಿನೊಂದಿಗೆ ಯಾವುದೇ ವಿವಾದ ಬೇಕಿಲ್ಲ; ಆದರೆ ಇರಾನ್ ಅಥವಾ ಇರಾನ್ ನ ವತಿಯಿಂದ ಬೇರೆ ಯಾರಾದರೂ ಅಮೇರಿಕಾದ ನಾಗರೀಕರ ಮೇಲೆ ದಾಳಿ ಮಾಡಿದರೆ ಅಮೇರಿಕಾವು ಸುಮ್ಮನಿರುವುದಿಲ್ಲ. ಅಮೇರಿಕಾವು ಆ ದಾಳಿಗೆ ದೃಢತೆ ಹಾಗೂ ತತ್ಪರತೆಯಿಂದ ಪ್ರತ್ಯುತ್ತರ ನೀಡುವುದು, ಎಂದು ಅಮೆರಿಕಾದ ವಿದೇಶಾಂಗ ಸಚಿವರಾದ ಆಂಟನಿ ಬ್ಲಿಂಕನ್ ರವರು ವಿಶ್ವ ಸಂಸ್ಥೆಯ ಸುರಕ್ಷಾ ಪರಿಷತ್ತಿನಲ್ಲಿ ಎಚ್ಚರಿಕೆ ನೀಡಿದ್ದಾರೆ. ಈ ಪರಿಷತ್ತಿನಲ್ಲಿ ಇಸ್ರೇಲ್ ಪ್ಯಾಲೆಸ್ಟೈನ್ ನಡುವಿನ ಯುದ್ಧದ ಬಗ್ಗೆ ನಡೆಯುತ್ತಿದ್ದ ಚರ್ಚೆಯಲ್ಲಿ ಅಮೆರಿಕವು ಈ ಎಚ್ಚರಿಕೆಯನ್ನು ನೀಡಿದೆ. ಇನ್ನೊಂದು ಕಡೆ ಇರಾನ್ ಅಮೇರಿಕಾದ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದೆ.
(ಸೌಜನ್ಯ – Face the Nation)
ಈ ಸಂದರ್ಭದಲ್ಲಿ ಬ್ಲಿಂಕನ್ ರವರು ಅಮೇರಿಕಾದ ವತಿಯಿಂದ ಎಲ್ಲ ರಾಷ್ಟ್ರಗಳಿಗೆ ಕರೆ ನೀಡಿದರು. ಅವರು `ಈ ಯುದ್ಧದಲ್ಲಿ ಅಮೆರಿಕ ಅಥವಾ ಇಸ್ರೇಲ್ ಗೆ ಸಹಾಯ ಮಾಡುವ ಇತರ ಯಾವುದೇ ದೇಶಗಳ ವಿರುದ್ಧ ಹೊಸ ರಣರಂಗವನ್ನು ತೆರೆಯುವ ಬಗ್ಗೆ ಯೋಚಿಸುವ ದೇಶಗಳಿಗೆ ಇತರ ಎಲ್ಲಾ ದೇಶಗಳು ಸೇರಿ ಒಂದು ಸಂಯುಕ್ತ ಸಂದೇಶವನ್ನು ನೀಡಬೇಕು. ಬೆಂಕಿಗೆ ಎಣ್ಣೆ ಸುರಿಯುವ ಪ್ರಯತ್ನ ಮಾಡಬಾರದು ಎಂಬುದರ ಎಚ್ಚರಿಕೆಯನ್ನು ಈ ದೇಶಗಳಿಗೆ ನೀಡಬೇಕು, ಎಂದು ಹೇಳಿದರು.