ಮ್ಯಾನ್ಮಾರ್ ನಲ್ಲಿ ರೋಹಿಂಗ್ಯಾ 99 ಹಿಂದೂಗಳನ್ನು ಹತ್ಯೆಗೈದ ಘಟನೆಯು ಅಂತರರಾಷ್ಟ್ರೀಯ ಅಪರಾಧವಾಗಬಹುದು ! – ವಿಶ್ವಸಂಸ್ಥೆ

ನ್ಯೂಯಾರ್ಕ್ (ಅಮೇರಿಕಾ) – 2017 ರಲ್ಲಿ ಮ್ಯಾನ್ಮಾರ್ ನಲ್ಲಿ ರೋಹಿಂಗ್ಯಾ ಮುಸಲ್ಮಾನ ಸಂಘಟನೆಯಾದ ‘ಅರಾಕನ ರೆವಲ್ಯೂಷನ್ ಆರ್ಮಿ’ ಮತ್ತು ಮ್ಯಾನ್ಮಾರ್ ಸೈನ್ಯದ ನಡುವಿನ ಹೋರಾಟದಲ್ಲಿ ರೋಹಿಂಗ್ಯಾಗಳು 99 ಹಿಂದೂಗಳ ಹತ್ಯೆ ಮಾಡಿದ್ದರು. ಈ ಹತ್ಯೆಯನ್ನು ಅಂತಾರಾಷ್ಟ್ರೀಯ ಅಪರಾಧ ಎಂದು ಪರಿಗಣಿಸಬಹುದು ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮ್ಯಾನ್ಮಾರ್ ನಲ್ಲಿ ನಡೆದ ಹಿಂಸಾಚಾರದ ಬಗ್ಗೆ ವಿಶ್ವಸಂಸ್ಥೆ ತನಿಖೆ ನಡೆಸುತ್ತಿದೆ. ಇದಕ್ಕಾಗಿ ಸ್ವತಂತ್ರ ವ್ಯವಸ್ಥೆಯನ್ನು (ಇನ್ಡಿಪೆನ್ಡಂಟ್ ಇನ್ವೆಸ್ಟಿಗೆಶನ ಫಾರ್ ಮ್ಯಾನ್ಮಾರ್ – ಐ.ಐ.ಎಂ.ಎಂ.) ಸ್ಥಾಪಿಸಲಾಗಿದೆ. ಈ ವ್ಯವಸ್ಥೆಯ ಮುಖ್ಯಸ್ಥರು ಮೇಲಿನ ಮಾಹಿತಿಯನ್ನು ನೀಡಿದ್ದಾರೆ.

ಐ. ಐ. ಎಂ. ಎಂ.ನ ಮುಖ್ಯಸ್ಥರಾದ ನಿಕೋಲಸ್ ಕೌಮಜಿಯನ ಅವರನ್ನು ಪತ್ರಕರ್ತರು 2018 ರ ಅಮ್ನೆಸ್ಟಿ ಇಂಟರ್ನ್ಯಾಶನಲ್ ಎಂಬ ಮಾನವಾಧಿಕಾರ ಸಂಘಟನೆಯು ಹಿಂದೂಗಳ ಹತ್ಯೆಗಳ ಕುರಿತು ತಯಾರಿಸಿರುವ ವರದಿಯ ಬಗ್ಗೆ ಕೇಳಿದಾಗ, ಅವರು 99 ಜನರ ಹತ್ಯೆಯ ಘಟನೆ ಗಂಭೀರವಾಗಿದೆ. ಆ ಬಗ್ಗೆ ಗಮನ ಹರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ನಮಗೆ ಮ್ಯಾನ್ಮಾರ್ ನಲ್ಲಿ ತನಿಖೆ ನಡೆಸಲು ಅನುಮತಿ ದೊರೆತಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತವು ಈ ಬಗೆಗಿನ ಕ್ರಮಕ್ಕೆ ಮನವಿ ಮಾಡಿದೆಯೇ ? ಅಥವಾ ಅಂತರಾಷ್ಟ್ರೀಯ ಮಟ್ಟದಲ್ಲಿ ಇದರ ಬಗ್ಗೆ ಧ್ವನಿ ಎತ್ತಿದೆಯೇ ?