ಇಸ್ರೇಲನ್ನು ಗುಟರೆಸರವರು ಪರೋಕ್ಷವಾಗಿ ಟೀಕಿಸಿದ್ದರು !
ನ್ಯೂಯಾರ್ಕ್ (ಅಮೇರಿಕಾ) – ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಆಂಟೋನಿಯೊ ಗುಟರೆಸರವರ ರಾಜೀನಾಮೆಗಾಗಿ ಇಸ್ರೇಲ್ ಒತ್ತಾಯಿಸಿದೆ. ಗುಟರೆಸರವರು `ಹಮಾಸ್ ಕಾರಣವಿಲ್ಲದೆ ಇಸ್ರೇಲ್ ಮೇಲೆ ದಾಳಿ ಮಾಡುತ್ತಿರಲಿಲ್ಲ. ಪ್ಯಾಲೆಸ್ತೇನ್ ನ ಪ್ರಜೆಗಳು ಕಳೆದ 56 ವರ್ಷಗಳಿಂದ ಪಾರತಂತ್ರ್ಯವನ್ನು ಅನುಭವಿಸುತ್ತಿದ್ದಾರೆ. ಇಸ್ರೇಲ್ ಮೇಲಿನ ಹಮಾಸ್ ನ ದಾಳಿಯನ್ನು ಸಮರ್ಥಿಸಲು ಸಾಧ್ಯವಿಲ್ಲ; ಆದರೆ ಪ್ಯಾಲೆಸ್ತೇನ್ ಪ್ರಜೆಗಳಿಗೆ ಇಸ್ರೇಲ್ ನೀಡಿರುವ ‘ಸಾಮೂಹಿಕ ಶಿಕ್ಷೆ’ಯನ್ನೂ ಬೆಂಬಲಿಸಲಾಗದು, ಎಂದು ಹೇಳಿದ್ದರು.
The @UN Secretary-General, who shows understanding for the campaign of mass murder of children, women, and the elderly, is not fit to lead the UN.
I call on him to resign immediately.
There is no justification or point in talking to those who show compassion for the most…
— Ambassador Gilad Erdan גלעד ארדן (@giladerdan1) October 24, 2023
ವಿಶ್ವಸಂಸ್ಥೆಯ ಇಸ್ರೇಲ್‌ನ ರಾಯಭಾರಿ ಗಿಲಾರ್ಡ್ ಇರ್ಡನ ರವರು, ಮಕ್ಕಳು, ಮಹಿಳೆಯರು ಮತ್ತು ವೃದ್ಧರ ಸಾಮೂಹಿಕ ಹತ್ಯೆಗಳ ಬಗ್ಗೆ ಗುಟರೆಸ ರವರು ತೋರಿಸಿರುವ “ತಿಳುವಳಿಕೆ”ಯಿಂದ ಅವರು ಈ ಪದವಿಯಲ್ಲಿದ್ದು ನೇತೃತ್ವ ನಡೆಸಲು ಅನರ್ಹರಾಗಿದ್ದಾರೆ. ಅವರು ತಕ್ಷಣ ರಾಜೀನಾಮೆ ನೀಡಬೇಕು, ಅವರೊಂದಿಗೆ ಚರ್ಚಿಸಿ ಪ್ರಯೋಜನವಿಲ್ಲ ಎಂದರು.