ವಿಶ್ವಸಂಸ್ಥೆಯಲ್ಲಿ ಇಸ್ರೇಲ್-ಹಮಾಸ್ ಸಂಘರ್ಷದ ಚರ್ಚೆ ನಡೆಯುತ್ತಿರುವಾಗಲೇ ಕಾಶ್ಮೀರದ ರಾಗ ಎಳೆದ ಪಾಕಿಸ್ತಾನ

ಪಾಕಿಸ್ತಾನದ ಟಿಪ್ಪಣಿಗೆ ಉತ್ತರ ನೀಡುವುದೂ ಅಯೋಗ್ಯ ! – ಭಾರತ

ಎಡಗಡೆಯಿಂದ ಆರ್. ರವೀಂದ್ರ ಮತ್ತು ಮುನೀರ್ ಅಕ್ರಂ

ನ್ಯೂಯಾರ್ಕ್ (ಅಮೇರಿಕಾ) – ಪಾಕಿಸ್ತಾನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮತ್ತೆ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದೆ. ಇಸ್ರೇಲ್-ಹಮಾಸ್ ಯುದ್ಧದ ಹಿನ್ನೆಲೆಯ ಪರಿಷತ್ತಿನಲ್ಲಿ ಚರ್ಚೆಗಳು ನಡೆಯುತ್ತಿದ್ದಾಗ ಪಾಕಿಸ್ತಾನ ಕಾಶ್ಮೀರದ ರಾಗವನ್ನು ಎಳೆದಾಗ ಭಾರತವು `ನಾವು ಅದನ್ನು ನಿರ್ಲಕ್ಷಿಸುತ್ತಿದ್ದೇವೆ’ ಎಂಬ ನಿಲುವನ್ನು ತೆಗೆದುಕೊಂಡಿತು. ಈ ಸಮಯದಲ್ಲಿ ಭಾರತದ ಪ್ರತಿನಿಧಿ ಆರ್. ರವೀಂದ್ರ ಪಾಕಿಸ್ತಾನದ ಹೆಸರು ಹೇಳದೇ, ಭಾರತದ ಕೇಂದ್ರಾಡಳಿತ ಪ್ರದೇಶ (ಕಾಶ್ಮೀರ) ಕುರಿತು ಒಂದು ನಿಯೋಗ ಟಿಪ್ಪಣಿ ಮಾಡಿದೆ. ಈ ಪ್ರದೇಶವು ಭಾರತದ ಅಖಂಡ ಮತ್ತು ಅವಿಭಾಜ್ಯ ಅಂಗವಾಗಿದೆ. ನಾನು ಈ ಟಿಪ್ಪಣಿಗಳನ್ನು ನಿರ್ಲಕ್ಷಿಸುತ್ತೇನೆ; ಏಕೆಂದರೆ ಅವರು ಅದಕ್ಕೆ ಅರ್ಹರಾಗಿದ್ದಾರೆ. ಸಮಯದ ಆವಶ್ಯಕತೆಯನ್ನು ಪರಿಗಣಿಸಿ ಅಂತಹ ಟಿಪ್ಪಣಿಗಳಿಗೆ ಪ್ರತ್ಯುತ್ತರ ನೀಡಲು ಆ ವಿಷಯವನ್ನು ಮತ್ತಷ್ಟು ಬೆಳೆಸಲು ನಾನು ಬಯಸುವುದಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಜಿಹಾದಿ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯ ಪರಿಷತ್ತಿನಲ್ಲಿ ತೀಕ್ಷ್ಣವಾದ ಪ್ರತ್ಯುತ್ತರ ನೀಡುವುದರೊಂದಿಗೆ, ಭಾರತವು ಇಸ್ರೇಲ್‌ನಂತೆ ಸೆಟೆದು ನಿಂತು ಸಂಪೂರ್ಣ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು !