
ಒಠಾವಾ (ಕೆನಡಾ) – ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಹಿಂದೂಗಳಿಗೆ ನವರಾತ್ರಿಯ ಶುಭಾಶಯಗಳನ್ನು ಕೋರಿದ್ದಾರೆ. ಪ್ರಧಾನಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ನವರಾತ್ರಿ ಹಿಂದೂ ಧರ್ಮದ ಅತ್ಯಂತ ಪ್ರಮುಖ ಮತ್ತು ಪವಿತ್ರ ಹಬ್ಬವಾಗಿದೆ. ಈ ಹಬ್ಬವು ಮಹಿಷಾಸುರನ ಮೇಲೆ ಶ್ರೀ ದುರ್ಗಾದೇವಿಯ ವಿಜಯ ಸಾಧಿಸುವುದನ್ನು ನೆನಪಿಸುತ್ತದೆ. ನವರಾತ್ರಿ ಹಬ್ಬವನ್ನು ಸ್ತ್ರೀ ಶಕ್ತಿಯ ಉತ್ಸವವಾಗಿಯೂ ಆಚರಿಸಲಾಗುತ್ತದೆ. (ನವರಾತ್ರಿಯ ಸಮಯದಲ್ಲಿ ಟ್ರೂಡೊ ಖಲಿಸ್ತಾನಿ ಭಯೋತ್ಪಾದಕರನ್ನು ನಿರ್ನಾಮ ಮಾಡಿದರೆ, ಅದು ಕೆಟ್ಟದ್ದರ ವಿರುದ್ಧ ವಿಜಯವನ್ನು ಸಂಕೇತಿಸುತ್ತದೆ, ಆಗ ಅದು ನಿಜವಾದ ಅರ್ಥದಲ್ಲಿ ನವರಾತ್ರಿಯ ಶುಭಾಶಯವಾಗುವುದು ! – ಸಂಪಾದಕರು)
ಜಸ್ಟಿನ್ ಟ್ರುಡೊ ಇವರು, ನವರಾತ್ರಿ ಉತ್ಸವವು ಹಿಂದೂ ಸಮುದಾಯದ ಸಂಸ್ಕೃತಿ ಮತ್ತು ಕೆನಡಾದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ರಚನೆಗೆ ಹಿಂದೂಗಳು ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಲು ನಮಗೆ ಅವಕಾಶ ನೀಡುತ್ತದೆ ಎಂದು ಹೇಳಿದರು.

ನೇಪಾಳದ ೧ ರೂಪಾಯಿಯ ಹೊಸ ನಾಣ್ಯದಿಂದ ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ತೋರಿಸಲಾಗಿದ್ದ ನಕ್ಷೆಯನ್ನು ತೆಗೆದುಹಾಕಿದೆ
ಭಾರತದ ಬಾಂಗ್ಲಾದೇಶ ಗಡಿಯ ಸಮೀಪ ಅಮೆರಿಕದ ಸೈನಿಕರೊಂದಿಗೆ ಬಾಂಗ್ಲಾದೇಶ ಸೇನೆಯ ಜಂಟೀ ಸಮರಾಭ್ಯಾಸ
‘ಭಾರತಕ್ಕೆ ಬಲವಂತವಾಗಿ ಜನರನ್ನು ನಮ್ಮ ದೇಶಕ್ಕೆ ಕಳುಹಿಸಲು ಬಿಡುವುದಿಲ್ಲ!’(ಅಂತೆ)
ರಷ್ಯಾದ ರಾಯಭಾರಿಯನ್ನು ಕರೆಸಿ ತೀವ್ರ ವಿರೋಧಿಸಿದ ಭಾರತ !
ರಷ್ಯಾ: ಕಳೆದ ೬ ತಿಂಗಳುಗಳಲ್ಲಿ ೪೪ ಟನ್ ಚಿನ್ನ ಮಾರಾಟ!
ಪಾಕಿಸ್ತಾನಕ್ಕೆ ನೀಡಲಾಗುವ ಆರ್ಥಿಕ ನೆರವು ಮತ್ತು ಪಾಕಿಸ್ತಾನಿಗಳಿಗೆ ನೀಡಲಾಗುವ ವೀಸಾವನ್ನು ತಡೆಹಿಡಿಯಬೇಕು!