ಕೆನಡಾದಲ್ಲಿ ಚರ್ಚ್ ನಡೆಸುವ ಶಾಲೆಯೊಂದರ ಆವರಣದಲ್ಲಿ ಹೂಳಿದ್ದ ೨೧೫ ಮಕ್ಕಳ ಶವಗಳು ಪತ್ತೆ !

ಇಲ್ಲಿನ ಕ್ಯಮೆಲೂಪ್ಸ್ ಇಂಡಿಯನ್ ರೆಸಿಡೆನ್ಶಿಯಲ್ ಶಾಲಾ ಮೈದಾನದಲ್ಲಿ ೨೧೫ ಮಕ್ಕಳ ಶವಗಳನ್ನು ಹೂಳಿರುವ ಮಾಹಿತಿಯು ಬೆಳಕಿಗೆ ಬಂದಿದೆ. ನೆಲದೊಳಗಿನ ವಸ್ತುಗಳನ್ನು ಹುಡುಕುವ ರಾಡಾರ್‌ನಲ್ಲಿ ಈ ಶವಗಳು ಪತ್ತೆಯಾಗಿವೆ. ಈ ಶಾಲೆ ಒಂದು ಕಾಲದಲ್ಲಿ ಕೆನಡಾದ ಅತಿದೊಡ್ಡ ಶಾಲೆಯಾಗಿತ್ತು. ಇಲ್ಲಿ ಇನ್ನೂ ಹೆಚ್ಚಿನ ಮೃತದೇಹಗಳು ಪತ್ತೆಯಾಗಬಹುದು

೨೦೨೫ ರ ತನಕ ಭಾರತ ಮತ್ತು ಪಾಕಿಸ್ತಾನದ ನಡುವೆ ದೊಡ್ಡ ಯುದ್ಧ !

೨೦೨೫ ರ ವೇಳೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ದೊಡ್ಡ ಯುದ್ಧವಾಗುವ ಸಾಧ್ಯತೆ ಇದೆ ಎಂದು ಅಮೇರಿಕಾದ ನ್ಯಾಶನಲ್ ಇಂಟಲಿಜನ್ಸ್ ಕೌನ್ಸಿಲ್ ಹೇಳಿದೆ. ಈ ಸಂಸ್ಥೆಯು ‘ಗ್ಲೋಬಲ್ ಟ್ರೆಂಡ್ಸ್ ರಿಪೋರ್ಟ್’ ಅಮೇರಿಕಾದ ಸರಕಾರಕ್ಕೆ ಸಲ್ಲಿಸಿದ್ದು, ಅದರಲ್ಲಿ ಇದನ್ನು ಉಲ್ಲೇಖಿಸಿದೆ.

ಶಾಲೆಗಳಲ್ಲಿ ‘ಸ್ವಸ್ತಿಕ’ ಚಿಹ್ನೆ ಧಾರ್ಮಿಕ ದ್ವೇಷದ ಪ್ರತೀಕವಾಗಿದೆ ಎಂದು ಕಲಿಸುವಂತೆ ಒತ್ತಾಯಿಸುವ ಮಸೂದೆ ಹಿಂಪಡೆ !

ವಿದೇಶದ ಹಿಂದೂಗಳು ಇಂತಹ ಅವಮಾನದ ಬಗ್ಗೆ ಜಾಗರೂಕರಾಗಿ ಅದನ್ನು ವಿರೀಧಿಸುತ್ತಾರೆ ಹಾಗೂ ಅದರಲ್ಲಿ ಗೆಲುವು ಸಾಧಿಸುತ್ತಾರೆ; ಆದರೆ ಬಹುಸಂಖ್ಯಾತ ಹಿಂದೂಗಳ ದೇಶದಲ್ಲಿ ಅನೇಕ ಬಾರಿ ಹಿಂದೂಗಳೇ ತಮ್ಮ ಧರ್ಮವನ್ನು ಅವಮಾನಿಸುತ್ತಾರೆ ಹಾಗೂ ಇತರ ಹಿಂದೂಗಳು ಅದನ್ನು ವಿರೋಧಿಸುವುದಿಲ್ಲ, ಇದು ಹಿಂದೂಗಳಿಗೆ ನಾಚಿಕೆಯ ಸಂಗತಿಯಾಗಿದೆ !