ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದ ಠಾಣೆದಾರ ಇವರ ಹೇಳಿಕೆ

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿನ ಭಾರತೀಯ ಮೂಲದ ಸಂಸದ ಶ್ರೀ. ಠಾಣೆದಾರ ಇವರು ಹಮಾಸ್ ಭಯೋತ್ಪಾದಕ ಸಂಘಟನೆಯನ್ನು ಜಗತ್ತಿನಿಂದಲೇ ಶಾಶ್ವತವಾಗಿ ನಾಶ ಮಾಡುವುದು ಆವಶ್ಯಕವಾಗಿದೆ ಎಂದು ಹೇಳಿದರು. ಠಾಣೆದಾರ ಇವರು ಹಮಾಸದ ವರ್ಣನೆ ‘ಪೈಶಾಚಿಕ ಭಯೋತ್ಪಾದಕ ಸಂಘಟನೆ’ ಎಂದು ಮಾಡಿದರು. ಅಕ್ಟೋಬರ್ ೭ ರಂದು ಹಮಾಸ್ ನ ಭಯೋತ್ಪಾದಕರು ಇಸ್ರೇಲ್ ಗಡಿಯಲ್ಲಿ ನುಗ್ಗಿ ಅಮಾಯಕ ಜನರನ್ನು ಗುರಿ ಮಾಡಿದರು. ಹಾಮಾಸದ ಭಯೋತ್ಪಾದಕರು, ಮಹಿಳೆಯರು, ಚಿಕ್ಕ ಮಕ್ಕಳು ಮತ್ತು ವೃದ್ಧರನ್ನು ಕೂಡ ಬಿಡಲಿಲ್ಲ. ೧ ಸಾವಿರದ ೪೦೦ ಜನರ ಜೀವ ತೆಗೆದರು. ಅದಕ್ಕೆ ಪ್ರತ್ಯುತ್ತರ ಎಂದು ಇಸ್ರೇಲ್ ಸೈನ್ಯ ಗಾಜಾ ಪಟ್ಟಿಯಲ್ಲಿ ಬಾಂಬ್ ಎಸೆಯುತ್ತಿದೆ. ಠಾಣೆದಾರ ಇವರು, ಹಮಾಸ್ ನ ಭಯೋತ್ಪಾದಕರನ್ನು ಕೇವಲ ಗಾಜಾ ಪಟ್ಟಿಯಿಂದ ಓಡಿಸುವುದು ಸಾಲದು, ಹೀಗೆ ಮಾಡಿದರೆ ಅವರು ಮತ್ತೆ ಎಲ್ಲರೂ ಒಟ್ಟಾಗಿ ಸೇರುತ್ತಾರೆ. ಅವರನ್ನು ಶಾಶ್ವತವಾಗಿ ನಾಶ ಮಾಡಬೇಕು ಎಂದು ಹೇಳಿದರು.
(ಸೌಜನ್ಯ – ANI)
ಅಮೆರಿಕ: ಧರ್ಮದತ್ತ ಒಲವು ತೋರುತ್ತಿರುವ ಜೆನ್-ಜ಼ಿ ಹುಡುಗರು!
ಬ್ರಿಟನ್ ಸಚಿವ ಸಂಪುಟದಲ್ಲಿ ಭಾರತೀಯ ಮೂಲದ ಕನಿಷ್ಕ ನಾರಾಯಣ ಮತ್ತು ಲಿಜಾ ನಂದಿ ಅವರಿಗೆ ಸ್ಥಾನ
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.
ಅಮೆರಿಕದಲ್ಲಿ ಭಾರತ ವಿರೋಧಿ ಖಾಲಿಸ್ತಾನಿಗಳನ್ನು ಕೆಣಕಿದರೆ ಶಿಕ್ಷೆ!
ಜೆನೆರಿಕ್ ಔಷಧಗಳ ಮೇಲೆ ಶೇ.೨೦೦ ರಷ್ಟು ಆಮದು ಸುಂಕ ! – ಟ್ರಂಪ್ ಅವರ ಘೋಷಣೆ : Tax on Indian Drugs
ನೇಪಾಳದ ಹೊಸ ₹1 ನಾಣ್ಯದಿಂದ ವಿವಾದಿತ ನಕ್ಷೆ ತೆರವು : Nepal New Coin Map