ಭಾರತದ ಆದೇಶದ ನಂತರ ಕೆನಡಾ ತನ್ನ 41 ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ !

ಪ್ರತ್ಯುತ್ತರವಾಗಿ ನಾವು ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲವೆಂದು ಕೆನಡಾದ ಹೇಳಿಕೆ

ಒಟಾವಾ (ಕೆನಡಾ) – ಭಾರತವು ಕೆಲವು ವಾರಗಳ ಹಿಂದೆ ಕೆನಡಾದಲ್ಲಿರುವ ಅದರ ರಾಯಭಾರ ಕಚೇರಿಯ ೬೨ ಅಧಿಕಾರಿಗಳಲ್ಲಿ ೪೧ ಅಧಿಕಾರಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ತಿಳಿಸಿತ್ತು. ಅದರಂತೆ ಕೆನಡಾ ತನ್ನ ಅಧಿಕಾರಿಗಳನ್ನು ಅಧಿಕೃತವಾಗಿ ಹಿಂದಕ್ಕೆ ಕರೆಸಿಕೊಂಡಿದೆ. ಭಾರತವು ಈ ಅಧಿಕಾರಿಗಳು ದೇಶವನ್ನು ಬಿಡಲು ಅಕ್ಟೋಬರ ೧೦ರವರೆಗೆ ಸಮಯವನ್ನು ನೀಡಿದ್ದರು; ಆದರೆ ಕೆನಡಾ ಮತ್ತು ಭಾರತದ ನಡುವೆ ರ‍್ಚೆ ನಡೆದಿತ್ತು. ಇದರಿಂದ ಏನಾದರೂ ಮರ‍್ಗ ಕಂಡು ಬರಬಹುದು ಎನ್ನುವ ಅಪೇಕ್ಷೆಯಿತ್ತು; ಆದರೆ ಈ ರ‍್ಚೆ ವಿಫಲವಾಯಿತು. ಭಾರತದ ಮೇಲೆ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಹತ್ಯೆಯ ಆರೋಪವನ್ನು ಮಾಡಿದ ನಂತರ ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಭಾರತ ಈ ಕೋರಿಕೆಯನ್ನು ಮಾಡಿತ್ತು. ಕೆನಡಾದ ವಿದೇಶಾಂಗ ವ್ಯವಹಾರಗಳ ಸಚಿವೆ ಮೆಲಾನಿ ಜೋಲಿ ಅವರು ಅಧಿಕಾರಿಗಳನ್ನು ಹಿಂದಕ್ಕೆ ಕರೆಸಲು ಮಾಹಿತಿಯನ್ನು ನೀಡಿದ್ದರು. ಅವರು ಮಾತನಾಡಿ, ಕೆನಡಾ ಪ್ರತ್ಯುತ್ತರವಾಗಿ ಯಾವುದೇ ಕ್ರಮವನ್ನು ಕೈಕೊಳ್ಳುವುದಿಲ್ಲವೆಂದು ತಿಳಿಸಿದ್ದರು. ಕೆನಡಾದಲ್ಲಿರುವ ಮಾಜಿ ಅಧಿಕಾರಿಯೊಬ್ಬರು, ಭಾರತವು ಕೆನಡಾದ ಅಧಿಕಾರಿಗಳನ್ನು ದೇಶವನ್ನು ತೊರೆಯುವಂತೆ ಕೇಳಿರುವುದು ಸಾಮಾನ್ಯ ಘಟನೆಯಲ್ಲ. ಇಂತಹ ಘಟನೆ ಹಿಂದು ೪೦ ರಿಂದ ೫೦ ರ‍್ಷಗಳಲ್ಲಿ ನಡೆದಿರಲಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೆನಡಾ ಯಾವ ಸೂತ್ರಗಳ ಆಧಾರದ ಮೇಲೆ ಪ್ರತ್ಯುತ್ತರವಾಗಿ ಭಾರತದ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ ? 

ಕೆನಡಾ ತಪ್ಪನ್ನು ಮಾಡಿರುವುದರಿಂದ ಈಗ ಕೆನಡಾ ತನ್ನ ದೇಶದಲ್ಲಿ ವಾಸಿಸುತ್ತಿರುವ ಖಲಿಸ್ತಾನ ಭಯೋತ್ಪಾದಕರನ್ನು ಭಾರತದ ವಶಕ್ಕೆ ಒಪ್ಪಿಸಬೇಕು !