ಕೆನಡಾದಲ್ಲಿ ಒಂದೇ ರಾತ್ರಿಯಲ್ಲಿ ೩ ಹಿಂದೂ ದೇವಸ್ಥಾನಗಳಲ್ಲಿ ಕಳವು !

ಕೆನಡಾದ ಪೊಲೀಸರ ನಿಷ್ಕ್ರಿಯತೆ !

ಓಟಾವ (ಕೆನಡಾ) – ಕೆನಡಾದ ಒಂಟಾರಿಯ ಪ್ರದೇಶದಲ್ಲಿನ ೩ ದೇವಸ್ಥಾನಗಳಲ್ಲಿ ಒಂದೇ ರಾತ್ರಿ ಕಳ್ಳತನ ಆಗಿದೆ. ಈ ಪ್ರಕರಣದಲ್ಲಿ ಪೊಲೀಸರು ಓರ್ವ ಅನುಮಾನಾಸ್ಪದನನ್ನು ಹುಡುಕುತ್ತಿದ್ದಾರೆ. ಪೊಲೀಸರಿಗೆ ಕಳ್ಳನ ಬಗ್ಗೆ ಮಾಹಿತಿ ನೀಡುವವರಿಗೆ ೨ ಸಾವಿರ ಕೆನಡಾದ ಡಾಲರ್ (ಸುಮಾರು ೧ ಲಕ್ಷ ೨೨ ಸಾವಿರ ರೂಪಾಯಿ) ಬಹುಮಾನ ಘೋಷಿಸಲಾಗಿದೆ.

ಕೆನಡಾ ಪೊಲೀಸರ ಅಭಿಪ್ರಾಯ, ಅಕ್ಟೋಬರ್ ೮ ರಂದು ಕಳ್ಳ ಪಿಕರಿಂಗ್ ಇಲ್ಲಿಯ ಬೇಲಿ ಸ್ಟ್ರೇಟ್ ಪ್ರದೇಶದಲ್ಲಿನ ದೇವಸ್ಥಾನದಲ್ಲಿ ನುಗ್ಗುತ್ತಿರುವುದು ಕಂಡಿದೆ. ಅವನು ಮುಖದ ಮೇಲೆ ನೀಲಿ ಸರ್ಜಿಕಲ್ ಮಾಸ್ಕ್ ಧರಿಸಿದ್ದನು. ೫ ಅಡಿ ೯ ಇಂಚು ಎತ್ತರ ಇರುವ ಈ ಕಳ್ಳ ಕುಂಟುತ್ತ ನಡೆಯುತ್ತಿದ್ದನು. ಪೊಲೀಸರು ಘಟನಾ ಸ್ಥಳಕ್ಕೆ ತಲುಪುವವರೆಗೆ ಅವನು ಅಲ್ಲಿಂದ ಓಡಿ ಹೋಗಿದ್ದನು. ನಂತರ ಅವನು ಬ್ರಾಕ್ ರೋಡ್ ಮತ್ತು ಡರ್ಸನ್ ಸ್ಟ್ರೀಟ್ ಪ್ರದೇಶದಲ್ಲಿನ ಒಂದು ದೇವಸ್ಥಾನದಲ್ಲಿ ಧ್ವಂಸಗೊಳಿಸಿ ಒಳಗೆ ಪ್ರವೇಶ ಮಾಡಿದನು ಮತ್ತು ಕಳ್ಳತನ ಮಾಡಿದನು. ಇದರ ನಂತರ ಅವನು ಅಜಾಕ್ಸ್ ಪ್ರದೇಶದಲ್ಲಿನ ವೇಸ್ಟನಿ ರೋಡ್ ಸೌಥ ಇಲ್ಲಿಯ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ಮಾಡಿದನು.

ಸಂಪಾದಕೀಯ ನಿಲುವು

ಕೆನಡಾದ ಪೊಲೀಸರು ಖಲಿಸ್ತಾನಿಗಳ ಮೇಲೆ ಅಂತೂ ಕ್ರಮ ಕೈಗೊಳ್ಳುವುದಿಲ್ಲ; ಆದರೆ ಕಳ್ಳರನ್ನು ಕೂಡ ಬಂಧಿಸಲಾಗುವುದಿಲ್ಲ, ಇದನ್ನು ತಿಳಿದುಕೊಳ್ಳಿ !