ಹಮಾಸ್ ಭಯೋತ್ಪಾದಕರು ರಾಕ್ಷಸರಾಗಿದ್ದು ಅವರಿಗಿಂತ ಅಲ್-ಖೈದಾ ಒಳ್ಳೆಯದು ! – ಅಮೇರಿಕಾ ಅಧ್ಯಕ್ಷ ಜೋ ಬೈಡನ್

ವಾಷಿಂಗ್ಟನ್ (ಅಮೆರಿಕಾ) – ಅಷ್ಟರಮಟ್ಟಿಗೆ ಈ ಜನರು (ಹಮಾಸ್ ಭಯೋತ್ಪಾದಕರು) ರಾಕ್ಷಸರಾಗಿದ್ದಾರೆಂದರೇ ಹಮಾಸ್ ಮುಂದೆ ಅಲ್ ಖೈದಾ ಈಗ ಪವಿತ್ರವೆನಿಸತೊಡಗಿದೆ. ಎನ್ನುವ ಶಬ್ದಗಳಲ್ಲಿ ಅಮೇರಿಕಾದ ರಾಷ್ಟ್ರಾಧ್ಯಕ್ಷ ಜೋ ಬೈಡೆನ್ ಅವರು ಹಮಾಸ್ ಅನ್ನು ಕಟುವಾಗಿ ಟೀಕಿಸಿದರು. “ಹಮಾಸ್‌ನ ದಾಳಿಯ ಬಗ್ಗೆ ನಮಗೆ ಸಿಗುತ್ತಿರುವ ಮಾಹಿತಿಯು ಅತ್ಯಂತ ಭಯಾನಕವಾಗಿದ್ದು, ಬೆಚ್ಚಿ ಬೀಳಿಸುವಂತಹದ್ದಿದೆ’ ಎಂದು ಬೈಡನ್ ಹೇಳಿದರು. ಅವರು ಫಿಲಡೆಲ್ಫಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದರು.

ಬೈಡನ ತಮ್ಮ ಮಾತು ಮುಂದುವರಿಸಿ, ಗಾಝಾ ಪಟ್ಟಿಯ ಮಾನವೀಯ ಬಿಕ್ಕಟ್ಟುಗಳ ಕಡೆಗೆ ಗಮನಹರಿಸುವುದು ನಮ್ಮ ಆದ್ಯತೆಯಾಗಿದೆ. ಈ ವಿಷಯದಲ್ಲಿ ಇಸ್ರೇಲ್, ಈಜಿಪ್ಟ್, ಜೋರ್ಡಾನ್ ಮತ್ತು ಅರಬ್ ದೇಶಗಳೊಂದಿಗೆ ಚರ್ಚಿಸುತ್ತಿದ್ದೇವೆ. ಬಹಳಷ್ಟು ಪ್ಯಾಲೇಸ್ಟಿನಿಯನ್ ನಾಗರಿಕರು ಹಮಾಸ್ ಅನ್ನು ಬೆಂಬಲಿಸುವುದಿಲ್ಲ ಎಂದು ನಮಗೆ ತಿಳಿದಿದೆ. ಇಸ್ರೇಲ್‌ನಲ್ಲಿ ಹಮಾಸ್ ದಾಳಿಗೆ ಬಲಿಯಾಗಿರುವ ಮತ್ತು ಒತ್ತೆಯಾಳಾಗಿರುವ ನಾಗರಿಕರ ಕುಟುಂಬದವರೊಂದಿಗೆ ನಾವು ಚರ್ಚಿಸಿದ್ದೇವೆ. ಅವರಿಗೆ ಎಲ್ಲ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದೇವೆ. ಹಮಾಸ್ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆಗಾಗಿ ನಾವು ಹಗಲಿರುಳು ಪ್ರಯತ್ತಿಸುತ್ತಿದ್ದೇವೆ ಎಂದು ಹೇಳಿದರು.