ರಷ್ಯಾ ಮಾಡಿದ ಆಕ್ರಮಣದಲ್ಲಿ ಉಕ್ರೇನಿನ ಪ್ರಸೂತಿಗೃಹವು ಧ್ವಂಸವಾಗಿದೆ !

೧೭ ಜನರು ಗಾಯಗೊಂಡಿದ್ದಾರೆ
ಅನೇಕ ಜನರು ಅವಶೇಷಗಳ ಕೆಳಗೆ ಸಿಲುಕಿದ್ದರು

ಉಕ್ರೇನ ‘ನಾಟೊ’ದ ಸದಸ್ಯತ್ವದ ಹಟ ಬಿಡಲಿದೆ !

ನಾವು ಇನ್ನುಮುಂದೆ ‘ನಾಟೊ’ (ನಾರ್ಥ ಆಟಲ್ಯಾಂಟಿಕ ಟ್ಟೀಟಿ ಆರ್ಗನಾಯಝೇಶನ) ಸಂಘಟನೆಯ ಸದಸ್ಯತ್ವದ ಹಟವನ್ನು ಬಿಟ್ಟು ಬಿಡುವೆವು, ಎಂದು ಉಕ್ರೇನನ ಅಧ್ಯಕ್ಷರಾದ ವ್ಲೊದಿಮಿರ ಝೆಲೆಂಸ್ಕೀಯವರು ಆಶ್ವಾಸನೆ ನೀಡಿದ್ದಾರೆ.

ರಷ್ಯಾದೊಂದಿಗೆ ಹೋರಾಡಲು ಉಕ್ರೇನ್‌ನ ಸೈನ್ಯಕ್ಕೆ ಸೇರಿದ ಭಾರತೀಯ ಯುವಕ !

ರಷ್ಯಾವು ಉಕ್ರೇನ್‌ನ ಮೇಲೆ ನಡೆಸಿದ ದಾಳಿಗೆ ೧೩ ದಿನಗಳಾಗಿದೆ. ಈ ಯುದ್ಧದಲ್ಲಿ ಉಕ್ರೇನಗೆ ಸಹಾಯ ಮಾಡಲು ವಿದೇಶದಿಂದ ಯುವಕರು ಬರುತ್ತಿದ್ದಾರೆ. ಅದರಲ್ಲಿ ಓರ್ವ ಭಾರತೀಯ ಯುವಕನೂ ಸಹಭಾಗವಿದೆ, ಎಂದು ‘ದ ಕೀವ ಇಂಡಿಪೆಂಡೆಂಟ’ ಎಂಬ ವಾರ್ತಾವಾಹಿನಿಯು ಮಾಹಿತಿ ನೀಡಿದೆ.

ಯುದ್ಧ ಗೆಲ್ಲುವವರೆಗೆ ನಾನು ರಾಜಧಾನಿ ಕೀವನಲ್ಲಿಯೇ ಇರುವೆನು !

ನಾನು ರಾಜಧಾನಿ ಕೀವ್‌ವಲ್ಲಿಯೇ ಇದ್ದೇನೆ ಹಾಗೂ ಯಾರಿಗೂ ಹೆದರುವುದಿಲ್ಲ. ನಾನು ಯಾವುದೇ ಶಿಬಿರದಲ್ಲಿ ಅಡಗಿಕೊಂಡಿಲ್ಲ. ಈ ಯುದ್ಧ ಗೆಲ್ಲುವವರೆಗೆ ನಾನು ರಾಜಧಾನಿ ಕೀವ್‌ನಲ್ಲಿಯೇ ಉಳಿದುಕೊಳ್ಳುವೆನು, ಎಂದು ಉಕ್ರೇನಿನ ರಾಷ್ಟ್ರಾಧ್ಯಕ್ಷ ವ್ಲೋದಿಮಿರ ಝೆಲೆಂಸ್ಕಿಯವರು ವಿಡಿಯೋ ಸಂದೇಶದ ಮೂಲಕ ಹೇಳಿದ್ದಾರೆ.

ರಷ್ಯಾದಿಂದ ೨೦೦ ಕ್ಕೂ ಹೆಚ್ಚು ಶಾಲೆಗಳು ಮತ್ತು ೧ ಸಾವಿರ ೫೦೦ ಜನರು ವಾಸಿಸುವ ಕಟ್ಟಡಗಳ ನಾಶ !

ರಷ್ಯಾ ಕ್ಷಿಪಣಿಯಿಂದ ಉಕ್ರೇನ್ ರಾಜಧಾನಿ ಕಿವ ಹತ್ತಿರ ಝಾಯಟೊಮಿರನಲ್ಲಿನ ಒಂದು ಶಾಲೆ ಧ್ವಂಸಮಾಡಿದೆ. ಎಲ್ಲಾ ಶೈಕ್ಷಣಿಕ ಸಂಸ್ಥೆ ಮುಚ್ಚಿರುವುದರಿಂದ ಜೀವಹಾನಿ ನಡೆದಿಲ್ಲ.

ಉಕ್ರೇನನ ಮೇಲೆ ಯುದ್ಧ ಹೇರಲಾಗಿದೆ ! – ಪೊಪ

ವ್ಯಾಟಿಕನ ಸಿಟಿ – ಉಕ್ರೇನನ ಮೇಲೆ ಯುದ್ಧ ಹೇರಲಾಗಿದೆ. ಅಲ್ಲಿ ರಕ್ತ ಹಾಗೂ ಕಣ್ಣೀರಿನ ನದಿಯೇ ಹರಿಯುತ್ತಿದೆ. ಇದು ಯುದ್ಧವೇ ಆಗಿದ್ದು ಅದರಲ್ಲಿ ಸಾವು ಹಾಗೂ ವಿಧ್ವಂಸವಾಗುತ್ತಿದೆ, ಎಂದು ಕ್ರೈಸ್ತರ ಸರ್ವೋಚ್ಚ ಧರ್ಮಗುರು ಪೊಪ ಫ್ರಾನ್ಸಿಸರವರು ಪ್ರತಿಪಾದಿಸಿದರು. ವ್ಯಾಟಿಕನ ಸಿಟಿಯಲ್ಲಿನ ಸೇಂಟ ಪೀಟರ್ಸ ಚೌಕದಲ್ಲಿ ಸಾಪ್ತಾಹಿಕ ಮೇಳದಲ್ಲಿ ಉಪಸ್ಥಿತರಿಗೆ ಮಾರ್ಗದರ್ಶನ ಮಾಡುತ್ತಿರುವಾಗ ಅವರು ಹೇಳಿದರು. ಈ ಸಮಯದಲ್ಲಿ ಅವರು ಎಲ್ಲರನ್ನೂ ಕೂಡ ಶಾಂತಿಯ ಹಾಗೂ ನಾಗರಿಕರಿಗೆ ಸುರಕ್ಷಿತ ಜೀವನ ನಡೆಸಲು ಮಾರ್ಗ ಲಭ್ಯ ಮಾಡಿಕೊಡುವಂತೆ ಕರೆ ನೀಡಿದರು. … Read more

ಯುದ್ಧದಿಂದಾಗಿ ಜಾಗತಿಕ ಆಹಾರದ ಕೊರತೆ ಮತ್ತು ಧಾನ್ಯಗಳ ಬೆಲೆ ಏರಿಕೆಯಾಗಬಹುದು !

ರಷ್ಯಾ-ಉಕ್ರೇನ ಯುದ್ಧದಿಂದಾಗಿ ಜಾಗತಿಕ ಮಟ್ಟದಲ್ಲಿ ಆಹಾರದ ಕೊರತೆ ನಿರ್ಮಾಣವಾಗಲಿದ್ದು ಧಾನ್ಯಗಳ ಬೆಲೆ ಏರಿಕೆಯಾಗಬಹುದು ಎಂಬ ಭಯವನ್ನು ‘ಯಾರಾ ಇಂಟರನ್ಯಾಶನಲ್‌’ ಎಂಬ ಗೊಬ್ಬರ ತಯಾರಿಸುವ ಜಾಗತಿಕ ಸಂಸ್ಥೆಯು ವ್ಯಕ್ತಪಡಿಸಿದೆ.

ರಷ್ಯಾದಿಂದ ಉಕ್ರೇನ್‌ನ ೪ ನಗರಗಳಲ್ಲಿ ಯುದ್ಧವಿರಾಮದ ಘೋಷಣೆ !

ರಷ್ಯಾ ಯುದ್ಧದ ೧೨ ನೇ ದಿನದಂದು ಉಕ್ರೇನಿನ ೪ ನಗರಗಳಲ್ಲಿ ಯುದ್ಧವಿರಾಮ ಘೋಷಿಸಿದೆ. ಈ ಯುದ್ಧವಿರಾಮ ಮಧ್ಯಾಹ್ನ ೧೨.೩೦ ರಿಂದ ಸಂಜೆ ೫.೩೦ ವರೆಗೂ ಇರುವುದು. ಈ ಸಮಯದಲ್ಲಿ ಯುದ್ಧದಲ್ಲಿ ಸಿಲುಕಿರುವ ಜನರನ್ನು ಹೊರತರಲಾಗುವುದು.

ರಷ್ಯಾ ನೀಡಿದ ಬೆದರಿಕೆಯಿಂದ ಪೊಲಂಡ ಉಕ್ರೇನ್ ದೇಶಕ್ಕೆ ಯುದ್ಧ ವಿಮಾನಗಳನ್ನು ನೀಡಲು ನಿರಾಕರಣೆ

ಪೊಲಂಡ ಉಕ್ರೇನ್‌ಗೆ ರಷ್ಯಾದ ವಿರುದ್ಧ ಹೋರಾಡಲು ಯುದ್ಧ ವಿಮಾನಗಳನ್ನು ನೀಡುವುದಾಗಿ ಘೋಷಿಸಿತ್ತು; ಆದರೆ ‘ಯಾವ ದೇಶ ಈ ಯುದ್ಧದಲ್ಲಿ ಉಕ್ರೇನ್ ದೇಶಕ್ಕೆ ಯುದ್ಧ ವಿಮಾನಗಳನ್ನು ನೀಡುವುದೋ, ಅವರನ್ನೂ ಸಹ ಯುದ್ಧದಲ್ಲಿ ಸೇರಿಸಲಾಗುವುದು’, ಎಂದು ರಷ್ಯಾದ ಅಧ್ಯಕ್ಷ ಪುತಿನ್ ಇವರು ಎಚ್ಚರಿಕೆ ನೀಡಿದ ಬಳಿಕ ಪೊಲಂಡ ತಮ್ಮ ಘೋಷಣೆಯನ್ನು ಹಿಂಪಡೆದಿದೆ.

ರಶಿಯಾದ ಮೇಲೆ ಹೇರಿರುವ ನಿರ್ಬಂಧ ಯುದ್ಧದ ಘೋಷಣೆಯಂತಿದೆ

ಪಾಶ್ಚಿಮಾತ್ಯ ದೇಶಗಳಿಂದ ಅವರ ದೇಶದ ಮೇಲೆ ಹೇರಲಾಗಿರುವ ನಿರ್ಬಂಧವು ಯುದ್ಧದ ಘೋಷಣೆಯಂತಿದೆ ಎಂದು ರಶಿಯಾ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುತಿನ್ ಹೇಳಿದ್ದಾರೆ. ಅವರು ಒಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.