ಭಾರತ ಅಮೇರಿಕಾದ ರಷ್ಯಾ ವಿರೋಧಿ ನಿಲುವಿಗೆ ಜಗ್ಗಲಿಲ್ಲ !- ರಷ್ಯಾ ಟುಡೇ

`ರಷ್ಯಾ ಟುಡೇ’ ಈ ರಷ್ಯಾ ಸರಕಾರದ ಮುಖವಾಣಿಯಲ್ಲಿ ವಿಶೇಷ ಲೇಖನದ ಮೂಲಕ ಭಾರತದ ಶ್ಲಾಘನೆ !

ಮಾಸ್ಕೋ (ರಷ್ಯಾ) – ವಿಶ್ವಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ರಷ್ಯಾದ ಉಕ್ರೇನ್‍ನಲ್ಲಿನ ಸೈನ್ಯ ಕಾರ್ಯಾಚರಣೆಯ ವಿರೋಧ ವ್ಯಕ್ತಪಡಿಸುವ ಪಾಶ್ಚಿಮಾತ್ಯ ದೇಶಗಳ ಠರಾವಿನ ಮತದಾನಕ್ಕೆ ಭಾರತ ಭಾಗವಹಿಸದೆ ತಟಸ್ಥವಾಗಿ ಉಳಿಯಿತು. ಈ ಬಗ್ಗೆ ರಷ್ಯಾ ಸರಕಾರದ ಮುಖವಾಣಿ `ರಷ್ಯಾ ಟುಡೇ’ಯು ಭಾರತವನ್ನು ಶ್ಲಾಘಿಸಿದ ವಿಶೇಷ ಲೇಖನ ಪ್ರಕಾಶಿಸಿದೆ. `ರಷ್ಯಾ ಮತ್ತು ಉಕ್ರೇನ್ ಇವರಲ್ಲಿ ಯುದ್ಧ ಆರಂಭವಾಗಿ ಒಂದು ತಿಂಗಳ ಕಳೆಯಿತು ಮತ್ತು ಭಾರತದ ಮೇಲೆ ಪಾಶ್ಚಿಮಾತ್ಯ ದೇಶಗಳು ವಿಶೇಷವಾಗಿ ಅಮೆರಿಕಾದಿಂದ ರಷ್ಯಾದ ವಿರುದ್ಧದ ನಿಲುವು ತಾಳುವಂತೆ ಒತ್ತಡ ತರಲಾಗಿದ್ದರೂ, ಭಾರತ ಅದಕ್ಕೆ ಜಗ್ಗಲಿಲ್ಲ. ಭಾರತ ಮತ್ತು ರಷ್ಯಾ ಇವರಲ್ಲಿನ ಸಂಬಂಧದ ಮೇಲೆ ವಿಶೇಷ ವಿಪರೀತ ಪರಿಣಾಮ ಆಗುವುದಿಲ್ಲ’, ಎಂದು ಈ ಲೇಖನದಲ್ಲಿ ಹೇಳಲಾಗಿದೆ.

`ಭಾರತದ ದೃಷ್ಟಿಕೋನದಿಂದ `ಉಕ್ರೇನ್ ಸಂಕಟ’ ಮತ್ತು ಒಂದೆಡೆ ರಷ್ಯಾದ ಜೊತೆಗೆ ಮತ್ತು ಇನ್ನೊಂದು ಕಡೆಗೆ ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆಗಿನ ಸಂಬಂಧ !’ ಈ ಶೀರ್ಷಿಕೆ ಅಡಿಯಲ್ಲಿ `ವೈಶಿಷ್ಟ್ಯಪೂರ್ಣ’ ಈ ಭಾಗದಲ್ಲಿ ಈ ಲೇಖನ `ರಷ್ಯಾ ಟುಡೇ’ಯು ಪ್ರಕಾಶಿಸಿದೆ.

ಈ ಲೇಖನದಲ್ಲಿ,

1. ಭಾರತವು ಉಕ್ರೇನ್‍ನಲ್ಲಿನ ತನ್ನ ಸಾವಿರಾರು ನಾಗರಿಕರನ್ನು ಸುಖಕರವಾಗಿ ಹೊರತೆಗೆಯಲು ರಷ್ಯಾ ಸರಕಾರ ಮತ್ತು ರಷ್ಯಾ ಸೈನ್ಯ ಇವರ ಜೊತೆಗೆ ಯಾವ ಸಮನ್ವಯ ನಡೆಸಿದರು, ಅದು ವೈಶಿಷ್ಟಪೂರ್ಣವಾಗಿತ್ತು. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಇವರ ಹೇಳಿಕೆ ಉಲ್ಲೇಖಿಸುತ್ತಾ, `ಭಾರತಕ್ಕೆ ಈ ಯುದ್ಧದ ಬಗ್ಗೆ ವಿಶೇಷ ಕೊಡು ಕೊಳ್ಳುವುದು ಇರದೆ ಅವರಿಗೆ ಅವರ ನಾಗರೀಕರ ಜೀವ ಹೆಚ್ಚು ಮಹತ್ವದ್ದೆನಿಸಿತು’, ಎಂದು ಈ ಲೇಖನದಲ್ಲಿ ನಮೂದಿಸಲಾಗಿದೆ.

2. ರಷ್ಯಾದ ಚೀನಾದ ಮೇಲೆ ಹೆಚ್ಚುತ್ತಿರುವ ಪರಾವಲಂಬ ದೂರಗೊಳಿಸಲು ಭಾರತ ಪ್ರಯತ್ನ ಮಾಡಲು ಇದೆ ಯೋಗ್ಯ ಸಮಯವಾಗಿದೆ. ಭಾರತವು ಈ ದೃಷ್ಟಿಕೋನದಿಂದ ನಿರ್ಣಾಯಕ ಪಾತ್ರ ವಹಿಸಿ ಹೊಸ ಉದ್ಯೋಗದ ನಿರ್ಮಾಣ ಮಾಡುವುದು, ರಷ್ಯಾ ಮತ್ತು ಭಾರತ ಇವರ ಜಂಟಿ ಪ್ರಕಲ್ಪ ಆರಂಭಿಸುವುದು ಮತ್ತು ಬಂಡವಾಳ ಹೂಡಿಕೆ ಹೆಚ್ಚಿಸುವುದು, ಇದಕ್ಕಾಗಿ ಪ್ರಯತ್ನ ಮಾಡಬೇಕು. ಆಗ ಉಭಯ ದೇಶಗಳಲ್ಲಿನ ಸಂಬಂಧ ಹೆಚ್ಚು ಸುದೃಢವಾಗುತ್ತದೆ.

3. ಪ್ರಸ್ತುತ ರಷ್ಯಾಗೆ ಪಾಶ್ಚಾತ್ಯ ಶಕ್ತಿಗಳ ತುಲನೆಯಲ್ಲಿ ಜಗತ್ತಿನ ಇತರ ದೇಶಗಳ ಜೊತೆಗೆ ಸ್ನೇಹ ಸಂಬಂಧ ಪ್ರಸ್ತಾಪಿತ ಮಾಡಬೇಕಾಗಬಹುದು. ಪೂರ್ವದ ದೇಶಗಳಲ್ಲಿನ ಹೆಚ್ಚು ಉತ್ತಮ ಸಂಬಂಧ ನಿರ್ಮಾಣ ಮಾಡುವುದರ ಲಾಭ ಪಡೆಯಲು ಭಾರತವು ರಶಿಯಾ ಜೊತೆಗೆ ಇರುವುದು ಅವಶ್ಯಕವಾಗಿದೆ.

4. ಪ್ರಸ್ತುತ ಪರಿಸ್ಥಿತಿಯಲ್ಲಿ ಮುಂದೆ ಏನು ಆಗಬಹುದು ?, ಇದು ರಷ್ಯಾಗೂ ತಿಳಿದಿಲ್ಲ; ಆದರೆ ಭಾರತವು ವಿಶ್ವಸಂಸ್ಥೆಯಲ್ಲಿ ಯಾವ (ರಷ್ಯಾಗೆ ಪೂರಕ) ಪಾತ್ರವಹಿಸಿದೆ, ಅದಕ್ಕೆ ರಷ್ಯಾ ಸಮಾಧಾನ ಪಟ್ಟುಕೊಳ್ಳಬೇಕು. ವಿಶ್ವ ಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಏರು-ಪೇರುಗಳನ್ನು ನೋಡುತ್ತಾ ರಷ್ಯಾ ಮತ್ತು ಭಾರತ ಇವರಲ್ಲಿ ಈಗ ದ್ವಿಪಕ್ಷೀಯ ಸಂಬಂಧದ ಕಡೆಗೆ ಬೇರೆ ದೃಷ್ಟಿಯಿಂದ ನೋಡುವುದು ಅವಶ್ಯಕವಾಗಿದೆ. ಉಭಯ ದೇಶಗಳ ನೇತೃತ್ವದ ಇಚ್ಛಾಶಕ್ತಿ ಮತ್ತು ಎರಡೂ ಕಡೆಯ ಔದ್ಯೋಗಿಕ ಪ್ರೋತ್ಸಾಹಕ ಕಾರ್ಯ ಇದರ ಮೇಲೆ ಭವಿಷ್ಯ ಅವಲಂಬಿತವಾಗಿದೆ, ಎಂದು ಈ ಲೇಖನದ ಕೊನೆಯಲ್ಲಿ ಹೇಳಲಾಗಿದೆ.