ಇಸ್ರೋದಿಂದ ‘ಸ್ಪೆಡೆಕ್ಸ್’ ಅಭಿಯಾನ; ಜನವರಿ ೭ ರಂದು ಬಾಹ್ಯಾಕಾಶದಲ್ಲಿ ೨ ಯಾನ ಪರಸ್ಪರ ಜೋಡಣೆಯಾಗುವುದು !

ಅಭಿಯಾನದಲ್ಲಿ ಯಶಸ್ಸು ಸಿಕ್ಕರೇ ಭಾರತ ಹೀಗೆ ಮಾಡುವ ಜಗತ್ತಿನ ನಾಲ್ಕನೆಯ ದೇಶವಾಗಲಿದೆ !

ಶ್ರೀಹರಿಕೋಟ (ಆಂಧ್ರಪ್ರದೇಶ) – ಇಲ್ಲಿಯ ಉಪಗ್ರಹ ಉಡಾವಣಾ ಕೇಂದ್ರದಿಂದ ಡಿಸೆಂಬರ್ ೩೦ ರ ರಾತ್ರಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ (ಇಸ್ರೋದಿಂದ) ‘ಸ್ಪೇಡೆಕ್ಸ್’ ಎಂದರೆ ‘ಬಾಹ್ಯಾಕಾಶ ಡಾಕಿಂಗ್ ಪ್ರಯೋಗ ಅಭಿಯಾನ’ ಪ್ರಕ್ಷೇಪಿತ ಮಾಡಲಾಯಿತು. ಇದರಲ್ಲಿ ‘ಸಿ.ಎಸ್.ಎಲ್.ವಿ.- ಸಿ ೬೦’ ರಾಕೆಟ್ ನ ಸಹಾಯದಿಂದ ಪೃಥ್ವಿಯಿಂದ ೪೭೦ ಕಿಲೋಮೀಟರ್ ದೂರದ ಬಾಹ್ಯಾಕಾಶದಲ್ಲಿ ೨ ಯಾನಗಳು ಪರಸ್ಪರ ಜೋಡಣೆ ಆಗುವುದು.

ಜನವರಿ ೭, ೨೦೨೫ ರಂದು ಈ ೨ ಯಾನ ಜೋಡಣೆ ಆಗುವುದು. ಅಭಿಯಾನ ಯಶಸ್ವಿಯಾದರೆ ರಷ್ಯಾ, ಅಮೇರಿಕಾ ಮತ್ತು ಚೀನಾದ ನಂತರ ಭಾರತ ನಾಲ್ಕನೇ ದೇಶವಾಗುವುದು. ಈ ಅಭಿಯಾನನಿನ ಯಶಸ್ಸಿನ ಮೇಲೆ ಭಾರತದ ‘ಚಂದ್ರಯಾನ ೪’ ಅಭಿಯಾನ ಅವಲಂಬಿಸಿದೆ. ಈ ಅಭಿಯಾನದಲ್ಲಿ ಚಂದ್ರನ ಮಣ್ಣಿನ ನಮೂನೆಗಳು ಪೃಥ್ವಿಗೆ ತರಲಾಗುವುದು. ಈ ಅಭಿಯಾನ ೨೦೨೮ ರಲ್ಲಿ ಆರಂಭವಾಗಬಹುದು.