|
ಲಕ್ಷ್ಮಣಪುರಿ (ಉತ್ತರಪ್ರದೇಶ) – ಇಲ್ಲಿ ಡಿಸೆಂಬರ್ ೨೯ ರಂದು ಮಹಾನಗರ ಪಾಲಿಕೆಯ ತಂಡದ ಮೇಲೆ ೨೦೦ ಕ್ಕೂ ಹೆಚ್ಚಿನ ಬಾಂಗ್ಲಾದೇಶಿ ನುಸುಳುಕೋರರ ಗುಂಪಿನಿಂದ ದಾಳಿ ನಡೆಸಲಾಗಿದೆ. ತಂಡವು ಇಲ್ಲಿ ಅಕ್ರಮ ಕೈಗಾಡಿಗಳು (ತಳ್ಳುವಗಾಡಿಗಳು) ವಶಪಡಿಸಿಕೊಳ್ಳುವಾಗ ಈ ದಾಳಿ ನಡೆದಿದೆ. ಇದರಲ್ಲಿ ಮುಸಲ್ಮಾನ ಮಹಿಳೆಯರ ಸಮಾವೇಶ ಕೂಡ ಇದೆ. ದಾಳಿಯ ಜೊತೆಗೆ ತಂಡದಲ್ಲಿನ ಮಹಿಳೆಯರ ಕತ್ತಿನಲ್ಲಿನ ಚಿನ್ನದ ಸರ ಕೂಡ ಲೂಟಿ ಮಾಡಿ ಥಳಿಸಲಾಯಿತು. ಮಹಿಳಾ ಸಿಬ್ಬಂದಿಗಳನ್ನು ರಕ್ಷಿಸುವುದಕ್ಕಾಗಿ ಹೋಗಿದ್ದ ಸಿಬ್ಬಂದಿಗಳಿಗೂ ಥಳಿಸಿ ಅವರ ಮೊಬೈಲ್ ಕಸಿದುಕೊಳ್ಳಲಾಗಿದೆ. ಘಟನಾಸ್ಥಳದಲ್ಲಿ ಉಪಸ್ಥಿತ ಇರುವ ಆಹಾರ ಅಧಿಕಾರಿ ವಿಜೇತಾ ದ್ವಿವೇದಿ ಇವರ ವಾಹನ ಕೂಡ ಧ್ವಂಸ ಮಾಡಲಾಗಿದೆ. ಅವರ ವಾಹನ ಚಾಲಕನಿಗೆ ವಾಹನದಿಂದ ಹೊರ ಎಳೆದು ಸಾಯಿಸಲು ಪ್ರಯತ್ನಿಸಿದರು. ಈ ದಾಳಿ ಬಾಂಗ್ಲಾದೇಶಿ ಮುಸಲ್ಮಾನರು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಶೇರು ಮತ್ತು ನದಿಮ ಸಹಿತ ಅನೇಕರ ವಿರುದ್ಧ ದೂರುಗಳು ದಾಖಲಿಸಲಾಗಿದ್ದು ಪೊಲೀಸರು ಅವರನ್ನು ಹುಡುಕುತ್ತಿದ್ದಾರೆ.
ಲಕ್ಷ್ಮಣಪುರಿಯ ಮಹಾಪೌರ ಸುಶಮಾ ಖರಕವಾಲ ಇವರು ಪೊಲೀಸರಿಗೆ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ದಾಳಿ ನಡೆಸಿರುವ ಬಾಂಗ್ಲಾದೇಶದವರೆಂದು ಮಹಾಪೌರರು ದಾವೆ ಮಾಡಿದ್ದಾರೆ. ಇಂದಿರಾನಗರ ಪೋಲಿಸ ಠಾಣೆಯ ವ್ಯಾಪ್ತಿಯಲ್ಲಿ ಬಾಂಗ್ಲಾದೇಶಿಯರು ಅಕ್ರಮ ವಸತಿಗಳನ್ನು ನಿರ್ಮಿಸಿದ್ದರು ಎಂದು ಹೇಳಲಾಗಿದೆ. ಈ ವಸತಿಗೆ ನೀರು ಮತ್ತು ವಿದ್ಯುತ್ ಪೂರೈಕೆ ಕೂಡ ಮಾಡಲಾಗುತ್ತಿತ್ತು. ದಾಳಿಯ ನಂತರ ಮಹಾಪೌರರು ಈ ವಸತಿಯ ವಿದ್ಯುತ್ ಜೋಡಣೆ ತೆಗೆಸಿ ಬುಲ್ಡೋಜರ್ ತರಿಸಿ ೫೦ ಗುಡಿಸಿಲುಗಳನ್ನು ನೆಲೆಸಮ ಮಾಡಿಸಿದರು. (ಇದನ್ನು ಈ ಹಿಂದೆಯೇ ಏಕೆ ಮಾಡಲಿಲ್ಲ ? ದಾಳಿಯಾಗುವ ದಾರಿ ಏಕೆ ಕಾಯಬೇಕಿತ್ತು ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ ! – ಸಂಪಾದಕರು)
ಸಂಪಾದಕೀಯ ನಿಲುವುಹಿಂದೂಬಾಹುಳ್ಯ ಭಾರತದಲ್ಲಿ ಬಾಂಗ್ಲಾದೇಶಿ ಮುಸಲ್ಮಾನರು ಇಂತಹ ಧೈರ್ಯ ತೋರಿಸುತ್ತಾರೆ, ಇದು ಪೊಲೀಸರಿಗೆ ಮತ್ತು ಸರಕಾರಕ್ಕೆ ಲಜ್ಜಾಸ್ಪದ ! |