ನಾಗಪುರದ ಶ್ರೀ ಸಿದ್ಧಾರೂಢ ಶಿವ ಮಂದಿರದ ಶ್ರೀ ಶಿವಶಂಕರ ಸ್ವಾಮೀಜಿಯವರಿಂದ ರಾಮನಾಥಿಯಲ್ಲಿನ ಸನಾತನ ಆಶ್ರಮಕ್ಕೆ ಸದ್ಭಾವನೆ ಭೇಟಿ

ಶ್ರೀ ಶಿವಶಂಕರ ಸ್ವಾಮೀಜಿ (ಬಲಗಡೆ) ಅವರ ಸತ್ಕಾರ ಮಾಡುತ್ತಿರುವ ಶ್ರೀ. ಯೋಗೇಶ ಜಲತಾರೆ

ರಾಮನಾಥಿ (ಗೋವಾ) – ನಾಗಪುರದ ಶ್ರೀ ಸಿದ್ಧಾರೂಢ ಶಿವ ಮಂದಿರದ ಶ್ರೀ ಶಿವಶಂಕರ ಸ್ವಾಮೀಜಿಯವರು ಮತ್ತು ಅವರ ಭಕ್ತರು ಡಿಸೆಂಬರ್ 29 ರಂದು ಇಲ್ಲಿನ ರಾಮನಾಥಿಯ ಸನಾತನ ಆಶ್ರಮಕ್ಕೆ ಭೇಟಿ ನೀಡಿದರು. ಈ ವೇಳೆ ಅವರನ್ನು ಸನಾತನ ಸಾಧಕರಾದ ಶ್ರೀ. ರೋಹಿತ ಸಾಳುಂಖೆ ಅವರು ಆಶ್ರಮದಲ್ಲಿ ನಡೆಯುತ್ತಿರುವ ರಾಷ್ಟ್ರ ಮತ್ತು ಧರ್ಮದ ಕಾರ್ಯಗಳು ಹಾಗೂ ಆಧ್ಯಾತ್ಮಿಕ ಸಂಶೋಧನೆಯ ಕಾರ್ಯದ ಮಾಹಿತಿಯನ್ನು ನೀಡಿದರು. ತದನಂತರ ಶ್ರೀ ಶಿವಶಂಕರ ಸ್ವಾಮೀಜಿ ಅವರನ್ನು ಸನಾತನ ಪ್ರಭಾತ ದಿನಪತ್ರಿಕೆಯ ಸಮೂಹ ಸಂಪಾದಕರಾದ ಶ್ರೀ. ಯೋಗೀಶ ಜಲತಾರೆ ಅವರು ಮಾಲಾರ್ಪಣೆ ಮಾಡಿ ಶಾಲು ಹೊದಿಸಿ, ಶ್ರೀಫಲ ನೀಡಿ ಉಡುಗೊರೆ ನೀಡಿ ಗೌರವಿಸಿದರು. ಆಶ್ರಮದಲ್ಲಿರುವ ಸಾಧಕರು ಸ್ವಭಾವ ದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯ ಭಾಗವಾಗಿ ಫಲಕದ ಮೇಲೆ ತಮ್ಮ ತಪ್ಪುಗಳನ್ನು ಬರೆಯುತ್ತಾರೆ, ಇದನ್ನು ನೋಡಿ ಅವರು ಸಾಧಕರನ್ನು ಹೊಗಳಿದರು.

ಶ್ರೀ ಶಿವಶಂಕರ ಸ್ವಾಮೀಜಿ ಮತ್ತು ಅವರ ಭಕ್ತರಿಗೆ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಬಗ್ಗೆ ಮಾಹಿತಿ ನೀಡುತ್ತಿರುವ ಶ್ರೀ. ರೋಹಿತ ಸಾಳುಂಖೆ

ಸನಾತನ ಆಶ್ರಮವನ್ನು ನೋಡಿದ ಬಳಿಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಸ್ವಾಮೀಜಿಯವರು, ಸನಾತನ ಆಶ್ರಮವನ್ನು ನೋಡಿ ತುಂಬಾ ಸಂತೋಷವಾಯಿತು. ಆಶ್ರಮದಲ್ಲಿ ಸಾತ್ವಿಕತೆ ಮತ್ತು ಶಾಂತಿಯನ್ನು ಅನುಭವಿಸಿದೆನು. ಸಾಧಕರ ಸಾಧನೆ ಮತ್ತು ಸೇವೆ ವಿಶೇಷವಾಗಿದೆ. ಇಂತಹ ಆಶ್ರಮಗಳು ಪ್ರತಿ ಜಿಲ್ಲೆಯಲ್ಲೂ ಇರಬೇಕು’, ಎಂದು ಹೇಳಿದರು.