JMB Terrorist Imprisoned 7 years: ವರ್ಧಮಾನ ಮತ್ತು ಬೋಧಗಯಾ ಬಾಂಬ್ ಸ್ಫೋಟ್ ಪ್ರಕರಣ ಬಾಂಗ್ಲಾದೇಶಿ ಭಯೋತ್ಪಾದಕನಿಗೆ ೭ ವರ್ಷದ ಶಿಕ್ಷೆ !

ಬೆಂಗಳೂರು – ಬೋಧಗಯಾ ಮತ್ತು ವರ್ಧಮಾನ ಬಾಂಬ್ ಸ್ಪೋಟದ ಪ್ರಕರಣದಲ್ಲಿ ಬಾಂಗ್ಲಾದೇಶಿ ಭಯೋತ್ಪಾದಕ ಜಾಹಿದುಲ ಇಸ್ಲಾಂ ಅಲಿಯಾಸ್ ಕೌಸರ್ ಇವನನ್ನು ಕರ್ನಾಟಕ ನ್ಯಾಯಾಲಯವು ತಪ್ಪಿತಸ್ಥನೆಂದು ಹೇಳಿ ೭ ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಹಾಗೂ ದರೋಡೆ, ಷಡ್ಯಂತ್ರ ರಚಿಸುವುದು ಮತ್ತು ಮದ್ದು ಗುಂಡು ಖರೀದಿಗೆ ಸಂಬಂಧಪಟ್ಟ ಪ್ರಕರಣಕ್ಕೆ ೫೭ ಸಾವಿರ ರೂಪಾಯಿ ದಂಡ ಕೂಡ ವಿಧಿಸಿದೆ. ಕೌಸರ್ ಬಾಂಗ್ಲಾದೇಶದಲ್ಲಿ ಬಾಂಬ್ ಸ್ಪೋಟ್ ನಡೆಸಿ ಭಾರತದಲ್ಲಿ ನುಸುಳಿದ್ದನು.

ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯವು ೨೦೧೪ ರಲ್ಲಿ ಬಂಗಾಳದ ವರ್ಧಮಾನ ಬಾಂಬ್ ಸ್ಫೋಟ ಮತ್ತು ೨೦೧೮ ರಲ್ಲಿ ಬಿಹಾರದ ಬೋಧಗಯಾ ಬಾಂಬ್ ಸ್ಪೋಟ ಪ್ರಕರಣದಲ್ಲಿ ‘ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ-ಭಾರತ’ದ ಚಟುವಟಿಕೆಗೆ ಪ್ರೋತ್ಸಾಹ ನೀಡಿರುವ ಕುರಿತು ಕೌಸರ್ ಗೆ ಈ ಶಿಕ್ಷೆ ವಿಧಿಸಲಾಗಿದೆ. ಕೌಸರ್ ಭಾರತದಲ್ಲಿ ‘ಜಮಾತ್-ಉಲ್-ಮುಜಾಹಿದಿನ್ ಬಾಂಗ್ಲಾದೇಶ-ಭಾರತ’ ದ ನೇತೃತ್ವ ವಹಿಸಿದ್ದನು.

೧. ಈ ಪ್ರಕರಣದಲ್ಲಿ ಒಟ್ಟು ೧೧ ಆರೋಪಿಗಳನ್ನು ತಪ್ಪಿತಸ್ಥರೆಂದು ಹೇಳಲಾಗಿದೆ. ಅಕ್ಟೋಬರ್ ೨೦೧೪ ರಂದು ವರ್ಧಮಾನ ಬಾಂಬ್ ಸ್ಫೋಟದ ನಂತರ ಜಾಹಿದುಲ್ ಇಸ್ಲಾಂ ಮತ್ತು ಅವನ ಸಹಚರರು ಬೆಂಗಳೂರಿಗೆ ಓಡಿ ಬಂದಿದ್ದರು. ಅದರ ನಂತರ ಜನವರಿ ೨೦೧೮ ರಲ್ಲಿ ಬೋಧಗಯಾದಲ್ಲಿ ಅವರನ್ನು ಬಂಧಿಸಲಾಗಿತ್ತು.

೨. ೨೦೧೮ ರಲ್ಲಿ ನಿಧಿ ಸಂಗ್ರಹ ಮಾಡುವ ಷಡ್ಯಂತ್ರದ ಒಂದು ಭಾಗ ಎಂದು ಅವನು ಬೆಂಗಳೂರಿನಲ್ಲಿ ೪ ದರೋಡೆ ನಡೆಸಿದ್ದನು ಮತ್ತು ಲೂಟಿ ಮಾಡಿರುವ ಹಣದಿಂದ ಮದ್ದು ಗುಂಡು ಖರೀದಿ ಮತ್ತು ಭಯೋತ್ಪಾದಕ ಚಟುವಟಿಕೆ ನಡೆಸುವುದಕ್ಕಾಗಿ ಉಪಯೋಗ ಮಾಡಿದ್ದನು.

ಸಂಪಾದಕೀಯ ನಿಲುವು

ಭಯೋತ್ಪಾದಕ ಚಟುವಟಿಕೆಯಲ್ಲಿ ಸಹಭಾಗಿ ಆಗುವದಕ್ಕಾಗಿ ಬಾಂಗ್ಲಾದೇಶ ನುಸುಳುಕೋರರು ಭಾರತಕ್ಕೆ ಬರುತ್ತಾರೆ, ಈ ಉದಾಹರಣೆಯಿಂದ ಇದು ಮತ್ತೊಮ್ಮೆ ಗಮನಕ್ಕೆ ಬಂದಿದೆ. ಆದ್ದರಿಂದ ಪ್ರತಿಯೊಬ್ಬ ಬಾಂಗ್ಲಾದೇಶಿ ನುಸುಳುಕೋರರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಜನರು ಸರಕಾರದ ಮೇಲೆ ಒತ್ತಡ ಹೇರಬೇಕು.