ಮಾಲ್ಡೀವ್‌ನ ವಿರೋಧಿ ಪಕ್ಷದ ಸಂಸದರು ಸರಕಾರವನ್ನು ಉರುಳಿಸಲು ಭಾರತಕ್ಕೆ 60 ಲಕ್ಷ ಅಮೇರಿಕನ್ ಡಾಲರ ಕೇಳಿದ್ದರು
ಮಾಲೆ (ಮಾಲ್ಡೀವ್ಸ್) – ಮಾಲ್ಡೀವ್ಸ್‌ನಲ್ಲಿ ಭಾರತ ವಿರೋಧಿ ಅಭಿಯಾನ ನಡೆಸಿ ಅಧಿಕಾರಕ್ಕೆ ಬಂದ ಅಧ್ಯಕ್ಷ ಮಹಮ್ಮದ್ ಮುಯಿಜ್ಜು ಅವರ ಸರಕಾರವನ್ನು ಭಾರತವೇ ಉಳಿಸಿದೆ ಎಂಬ ಸುದ್ದಿಯನ್ನು ಅಮೇರಿಕದ ‘ವಾಷಿಂಗ್ಟನ್ ಪೋಸ್ಟ್’ ಪ್ರಕಟಿಸಿದೆ. ಈ ವರದಿಯ ಪ್ರಕಾರ, ಮಾಲ್ಡೀವಿಯನ್ ಅಧ್ಯಕ್ಷ ಮಹಮ್ಮದ್ ಮುಯಿಜ್ಜು ಅವರ ಮೇಲೆ ಮಹಾಭಿಯೋಗ ಪ್ರಸ್ತಾವನೆ ತರುವ ಸಂಚಿನ ಭಾಗವಾಗಿ ಪ್ರತಿಪಕ್ಷ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಕ್ಷದ ನಾಯಕರು 2024 ರ ಜನವರಿಯಲ್ಲಿ ಭಾರತದ ಬಳಿ 60 ಲಕ್ಷ ಅಮೇರಿಕನ್ ಡಾಲರ್ (51 ಕೋಟಿ 36 ಸಾವಿರ ರೂಪಾಯಿಗಳು) ಕೋರಿದ್ದರು; ಆದರೆ ಭಾರತ ಈ ಬೇಡಿಕೆಯನ್ನು ತಿರಸ್ಕರಿಸಿತ್ತು. ಜನವರಿ 2024 ರಲ್ಲಿ, ಆಡಳಿತ ಪಕ್ಷದ ಕೆಲವು ಸಂಸದರು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದಾಗ ಭಾರತ-ಮಾಲ್ಡೀವ್ಸ್ ಸಂಬಂಧಗಳು ಹದಗೆಟ್ಟವು.
1. ವಾಷಿಂಗ್ಟನ್ ಪೋಸ್ಟ್ ತನ್ನ ವರದಿಯಲ್ಲಿ ‘ಡೆಮಾಕ್ರಟಿಕ್ ರಿನ್ಯೂವಲ್ ಇನಿಶಿಯೇಟಿವ್’ ಎಂಬ ಆಂತರಿಕ ದಾಖಲೆಯನ್ನು ಆಧರಿಸಿ, ಮಾಲ್ಡೀವಿಯನ್ ಸಂಸತ್ತಿನ 40 ಸದಸ್ಯರಿಗೆ ಲಂಚ ನೀಡುವ ವಿವರವಾದ ಯೋಜನೆಯನ್ನು ಬಹಿರಂಗಪಡಿಸಲಾಗಿದೆ ಎಂದು ಹೇಳಿದೆ. ಮುಯಿಜ್ಜು ಅವರ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಸಂಸದರು ಅವರ ಸರಕಾರವನ್ನು ಉರುಳಿಸಲು ಸಂಚು ರೂಪಿಸಿದ್ದರು. ಮುಯಿಜ್ಜು ದೋಷಾರೋಪಣೆಗೆ ಅಗತ್ಯವಾದ ಮತಗಳನ್ನು ಪಡೆಯಲು ಭಾರತದಿಂದ ಹಣವನ್ನು ಕೋರಿದ್ದರು.
2. ‘ವಾಷಿಂಗ್ಟನ್ ಪೋಸ್ಟ್’, ತನಗೆ ಸಿಕ್ಕಿದ ದಾಖಲೆಗಳಲ್ಲಿ ಹಲವಾರು ಹಿರಿಯ ಮಿಲಿಟರಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಲಂಚ ನೀಡುವ ಮತ್ತು ದೇಶದ ಮೂರು ದೊಡ್ಡ ಕ್ರಿಮಿನಲ್ ಗುಂಪುಗಳ ಸಹಾಯವನ್ನು ಪಡೆಯಲು ಯೋಜನೆ ಒಳಗೊಂಡಿತ್ತು. ಇದೆಲ್ಲವನ್ನೂ ಮಹಮ್ಮದ್ ಮುಯಿಜ್ಜೂ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಮಾಡಲಾಗಿತ್ತು. ಭಾರತಕ್ಕೆ 8 ಕೋಟಿ 70 ಲಕ್ಷ ರೂಫಿಯಾ (ಮಾಲ್ಡೀವ್ಸ್ ಕರೆನ್ಸಿ. 60 ಲಕ್ಷ ಅಮೇರಿಕನ್ ಡಾಲರ್) ವಿವಿಧ ಪಕ್ಷಗಳಿಗೆ ಪಾವತಿಸಲು ಕೋರುವವರಿದ್ದರು. ಜನವರಿ 2024 ರ ಹೊತ್ತಿಗೆ, ಭಾರತದ ಗುಪ್ತಚರ ಸಂಸ್ಥೆ ‘ರಾ’ (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಅಧಿಕಾರಿಗಳು ಮಹಮ್ಮದ ಮುಯಿಜ್ಜುವನ್ನು ತೆಗೆದುಹಾಕುವ ಸಾಧ್ಯತೆಯನ್ನು ಪರಿಶೀಲಿಸಲು ಮಾಲ್ಡೀವ್‌ನ ವಿರೋಧಿ ಪಕ್ಷದ ನಾಯಕರೊಂದಿಗೆ ರಹಸ್ಯ ಮಾತುಕತೆಗಳನ್ನು ಪ್ರಾರಂಭಿಸಿದ್ದರು. ಆದರೆ, ಈ ಯೋಜನೆ ಕಾರ್ಯರೂಪಕ್ಕೆ ಬರಲೇ ಇಲ್ಲ.
3. ಮತ್ತೊಂದೆಡೆ ಈ ಸುದ್ದಿಯನ್ನು ಭಾರತದ ಪರ ಮಾಲ್ಡೀವ್ಸ್‌ನ ಮಾಜಿ ಅಧ್ಯಕ್ಷ ಮಹಮ್ಮದ ನಶೀದ ಟೀಕಿಸಿದ್ದಾರೆ. ಈ ಷಡ್ಯಂತ್ರದ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದೂ ಅವರು ಹೇಳಿದ್ದಾರೆ. ಭಾರತ ಯಾವಾಗಲೂ ಮಾಲ್ಡೀವ್ಸ್ ಪ್ರಜಾಪ್ರಭುತ್ವವನ್ನು ಬೆಂಬಲಿಸಿದೆ ಎಂದು ಮಹಮ್ಮದ ನಶೀದ ಹೇಳಿದ್ದಾರೆ.