ಮನೋಜ ಗುಪ್ತಾ ಮುಖ್ಯಸೂತ್ರಧಾರ
ಕೋಲಕಾತಾ (ಬಂಗಾಳ) – ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರಿಗೆ ನಕಲಿ ದಾಖಲೆಗಳ ಆಧಾರದಲ್ಲಿ ಭಾರತೀಯ ಪಾಸ್‌ಪೋರ್ಟ್‌ಗಳನ್ನು ಪಡೆಯಲು ಸಹಾಯ ಮಾಡಿದ ಗ್ಯಾಂಗ್‌ನ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ‘ಟೂರ್ಸ್ ಅಂಡ್ ಟ್ರಾವೆಲ್ಸ್’ ಮೂಲಕ ಕೆಲಸ ಮಾಡುತ್ತಿತ್ತು. ಈ ಮೂಲಕ ಅವರು ಇದುವರೆಗೆ 100 ಬಾಂಗ್ಲಾದೇಶಿಯರನ್ನು ಭಾರತೀಯ ಪಾಸ್‌ಪೋರ್ಟ್‌ಗಳೊಂದಿಗೆ ವಿದೇಶಕ್ಕೆ ಕಳುಹಿಸಿದ್ದಾರೆ. ಈ ಪ್ರಕರಣದ ಪ್ರಮುಖ ಸೂತ್ರಧಾರ ಮನೋಜ ಗುಪ್ತಾ ಆಗಿದ್ದು, ಆತನನ್ನು ಬಂಧಿಸಲಾಗಿದೆ.
ಗುಪ್ತಾಗೆ ಆತನ ಗ್ಯಾಂಗ್ ಸದಸ್ಯ ಸಮರೇಶ ಮತ್ತು ಇತರ ಸಹಚರರು ಸಹಾಯ ಮಾಡುತ್ತಿದ್ದರು. ಗುಪ್ತಾನನ್ನು ಬಂಗಾಳ ಪೊಲೀಸರು ಬಂಧಿಸಿದ್ದು, ನ್ಯಾಯಾಲಯವು ಅವನನ್ನು ಜನವರಿ 10ರವರೆಗೆ ಪೊಲೀಸ್ ಕಸ್ಟಡಿ ನೀಡಿದೆ. ಈ ಹಿಂದೆ ಕೋಲಕಾತಾ ಪೊಲೀಸರು ದಕ್ಷಿಣ 24 ಪರಗಣ ಜಿಲ್ಲೆಯ ದೀಪಂಕರ ದಾಸ ಎಂಬ ವ್ಯಕ್ತಿಯನ್ನು ಬಂಧಿಸಿದ್ದರು. ಈ ಗ್ಯಾಂಗ್ ಬಾಂಗ್ಲಾದೇಶಿಯರಿಂದ 5 ರಿಂದ 10 ಸಾವಿರ ರೂಪಾಯಿ ಪಡೆದು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮಾಡಿಕೊಡುತ್ತಿದ್ದರು. ಬಳಿಕ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುತ್ತಿದ್ದರು. ನಂತರ ಅವರು ತಮ್ಮ ಪಾಸ್‌ಪೋರ್ಟ್‌ಗೆ ಸುಳ್ಳು ವಿಳಾಸದ ಆಧಾರದ ಮೇಲೆ ಅರ್ಜಿ ಸಲ್ಲಿಸುತ್ತಿದ್ದರು. ಈ ಪಾಸ್‌ಪೋರ್ಟ್‌ಗಳು ಅಂಚೆ ಮೂಲಕ ಬಂದಾಗ, ಅವುಗಳನ್ನು ವಶಪಡಿಸಿಕೊಳ್ಳಲು ಅಂಚೆ ಕಚೇರಿ ಸಿಬ್ಬಂದಿಯೊಂದಿಗೆ ಶಾಮೀಲಾಗಿ ತಮ್ಮ ವಶಕ್ಕೆ ಪಡೆಯುತ್ತಿದ್ದರು. ಈ ಎಲ್ಲಾ ಪ್ರಕ್ರಿಯೆಗಳಿಗೆ ಗ್ಯಾಂಗ್ ಬಾಂಗ್ಲಾದೇಶಿ ಪ್ರಜೆಗಳಿಂದ 5 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದರು.
ಸಂಪಾದಕೀಯ ನಿಲುವುಸರಕಾರ ಈ ಎಲ್ಲಾ ದೇಶದ್ರೋಹಿಗಳಿಗೆ ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ವಿಧಿಸಿದರೆ ಮಾತ್ರ ಇತರರ ಸದ್ಧಡಗಿಸಬಹುದು ! |