ಸ್ವಿಡನನಲ್ಲಿ ಕುರಾನ ಸುಟ್ಟಿದ ಘಟನೆಯ ಬಳಿಕ ನಿರಾಶ್ರಿತ ಮತಾಂಧರಿಂದ ಹಿಂಸಾಚಾರ

  • ಅನೇಕ ಪೊಲೀಸರಿಗೆ ಗಾಯ

  • ಪೊಲೀಸರ ವಾಹನಗಳನ್ನು ಸುಟ್ಟರು

ಸ್ಟಾಕಹೋಮ (ಸ್ವಿಡನ) – ಸ್ವಿಡನನಲ್ಲಿ ಹಲವು ನಗರಗಳಲ್ಲಿ ನಿರಾಶ್ರಿತರಾಗಿರುವ ಮತಾಂಧರು ಹಾಗೂ ಡೆನ್ಮಾರ್ಕನಲ್ಲಿ ಇಸ್ಲಾಮ ವಿರೋಧಿ ಪಕ್ಷವಾಗಿರುವ ‘ಸ್ಟ್ರಾಮ ಕುರ್ಸ’ನ ಕಾರ್ಯಕರ್ತರ ನಡುವೆ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯಿತು. ‘ಸ್ಟ್ರಾಮ ಕುರ್ಸ’ ಪಕ್ಷವು ಕುರಾನನ ಪ್ರತಿಯನ್ನು ಸುಟ್ಟ ಬಳಿಕ ಈ ಹಿಂಸಚಾರ ನಡೆಯಿತು. ಇದರಲ್ಲಿ ಹಲವು ವಾಹನಗಳನ್ನು ಸುಡಲಾಯಿತು ಹಾಗೂ ಕಲ್ಲುತೂರಾಟ ನಡೆಸಲಾಯಿತು. ಇದರಲ್ಲಿ ಕೆಲವು ಪೊಲೀಸರು ಗಾಯಗೊಂಡಿದ್ದಾರೆ. ಆ ಸಮಯದಲ್ಲಿ ಮತಾಂಧರು ‘ಅಲ್ಲಾಹೂ ಅಕಬರ’ನ (‘ಅಲ್ಲಾ ಮಹಾನ ಆಗಿದ್ದಾರೆ’) ಎಂಬ ಘೋಷಣೆ ನೀಡಿದರು. ದೇಶದಲ್ಲಿನ ನಾರಕೋಪಿಂಗ, ರಿಂಕೀಬೀ, ಸ್ಟಾಕಹೋಮ, ಒರೆಬ್ರೋ ಸೇರಿದಂತೆ ಹಲವು ನಗರಗಳಲ್ಲಿ ಈ ಹಿಂಸಾಚಾರ ನಡೆಯಿತು.

೧. ಒರೆಬ್ರೋದಲ್ಲಿ ಪೊಲೀಸರ ೪ ವಾಹನಗಳನ್ನು ಸುಡಲಾಯಿತು. ಅಲ್ಲಿ ೪ ಪೊಲೀಸರು ಹಾಗೂ ಒಬ್ಬ ನಾಗರಿಕನು ಗಾಯಗೊಂಡನು. ಇಲ್ಲಿ ಮತಾಂಧರು ಪೊಲೀಸರ ಒಂದು ವಾಹನವನ್ನು ಓಡಿಸಿಕೊಂಡು ಹೋದರು.

೨. ಈ ಹಿಂಸಾಚಾರದ ಕುರಿತು ಪ್ರಧಾನಿ ಮ್ಯಾಗ್ಡೆಲೆನಾ ಆಂಡರಸನರವರು, ಈ ಹಿಂಸಾಚಾರವನ್ನು ನಾನು ಖಂಢಿಸುತ್ತೇನೆ. ಈ ಹಿಂಸಾಚಾರದಲ್ಲಿ ಅನೇಕ ಪೊಲೀಸರು ಗಾಯಗೊಂಡಿದ್ದಾರೆ.

೩. ಡೆನ್ಮಾರ್ಕ ದೇಶದಲ್ಲಿ ‘ಸ್ಟ್ರಾಮ ಕುರ್ಸ’ ಪಕ್ಷದ ಅಧ್ಯಕ್ಷ ರಾಸಮಸ ಪಲುದಾನರವರು ‘ಸ್ವಿಡನನ ಲಿಂಕೊಪಿಂಗ ನಗರದಲ್ಲಿ ಮುಸಲ್ಮಾನಬಹುಸಂಖ್ಯಾತ ಪ್ರದೇಶದಲ್ಲಿ ಕುರಾನ ಸುಡಲಾಗುವುದು’, ಎಂದು ಘೋಷಿಸಿದ್ದರು. ಅದರಂತೆ ಅವರು ಅಲ್ಲಿ ಕುರಾನ ಅನ್ನು ಸುಟ್ಟರು. ಪೊಲೀಸರು ಕೂಡ ಅದಕ್ಕೆ ಅನುಮತಿ ನೀಡಿದ್ದರು. ಅದನ್ನು ಸುಟ್ಟ ಬಳಿಕ ೨೦೦ ಕ್ಕೂ ಹೆಚ್ಚು ಮತಾಂಧರು ಸಂಘಟಿತರಾಗಿ ಅದನ್ನು ವಿರೋಧಿಸಿದ್ದರು.

೨೦೨೦ ರಲ್ಲಿಯೂ ಸ್ವಿಡನನಲ್ಲಿ ಕುರಾನ ಸುಟ್ಟದ್ದರಿಂದ ಗಲಭೆ ನಡೆದಿತ್ತು !

ಈ ಮೊದಲು ಆಗಸ್ಟ ೨೦೨೦ ರಲ್ಲಿ ಸ್ವಿಡನನಲ್ಲಿ ಮಾಲ್ಮೋ ನಗರದಲ್ಲಿ ‘ಸ್ಟ್ರಾಮ ಕುರ್ಸ’ ಪಕ್ಷವು ಕುರಾನ ಸುಟ್ಟದ್ದರಿಂದ ಅಲ್ಲಿ ಗಲಭೆ ನಡೆದಿತ್ತು. ಪೊಲೀಸರು ರಾಸಮಸ ಪಲುದಾನರವರನ್ನು ಸ್ವಿಡನಗೆ ಪ್ರವೇಶಿಸಿದ್ದರಿಂದ ಅವರನ್ನು ಬಂಧಿಸಿದ್ದರು. ಆದ್ದರಿಂದ ಆಕ್ರೋಶಗೊಂಡ ಅವರ ಬೆಂಬಲಿಗರು ಕುರಾನ ಅನ್ನು ಸುಟ್ಟಿದ್ದರು.