Indian Fishermen Release : ಬಾಂಗ್ಲಾದೇಶವು 95 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಿದೆ !

ಢಾಕಾ (ಬಾಂಗ್ಲಾದೇಶ) – ಎರಡೂವರೆ ತಿಂಗಳ ಹಿಂದೆ ಬಾಂಗ್ಲಾದೇಶ ಕರಾವಳಿ ಕಾವಲು ಪಡೆಯು ಬಾಂಗ್ಲಾದೇಶದ ದಕ್ಷಿಣ 24 ಪರಗಣ ಜಿಲ್ಲೆಯ ಕಾಕದ್ವೀಪ್‌ನಿಂದ ಬಾಂಗ್ಲಾದೇಶದ ಗಡಿಯಲ್ಲಿ ನುಗ್ಗಿದ್ದ 95 ಭಾರತೀಯ ಮೀನುಗಾರರನ್ನು ಬಂಧಿಸಿತ್ತು. ಇದೀಗ ಭಾರತದ ಎಚ್ಚರಿಕೆಯ ನಂತರ ಬಾಂಗ್ಲಾದೇಶದ ಮಹಮ್ಮದ ಯೂನಸ ಸರಕಾರ ಈ ಎಲ್ಲ ಮೀನುಗಾರರನ್ನು ಜೈಲಿನಿಂದ ಬಿಡುಗಡೆ ಮಾಡಲು ನಿರ್ಧರಿಸಿದೆ.  ಬಾಂಗ್ಲಾದೇಶ ಸರಕಾರವು ಮೀನುಗಾರರಿಂದ ವಶಪಡಿಸಿಕೊಂಡ 6 ದೋಣಿಗಳನ್ನು ಕೂಡ ಹಿಂದಿರುಗಿಸಲು ನಿರ್ಧರಿಸಿದೆ.