|
ಪ್ರಯಾಗರಾಜ – ಈ ವರ್ಷದ ಮಹಾ ಕುಂಭ ಮೇಳಕ್ಕೆ 40 ಕೋಟಿ ಭಕ್ತರು ಬರುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಪೊಲೀಸರು ಸಂಪೂರ್ಣ ಕುಂಭ ಮೇಳದ ಭದ್ರತೆಗೆ ಟೊಂಕ ಕಟ್ಟಿ ನಿಂತಿದೆ. ಮಹಾಕುಂಭ ಮೇಳ ನಿಮಿತ್ತ ಪೊಲೀಸರು 7 ಹಂತದ ಭದ್ರತಾ ವ್ಯವಸ್ಥೆಯನ್ನು ಮಾಡಿದ್ದು, ಸುಮಾರು 10 ಸಾವಿರ ಪೊಲೀಸ್ ಪಡೆಗಳನ್ನು ನಿಯೋಜಿಸಿದ್ದಾರೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ 13 ತಾತ್ಕಾಲಿಕ ಪೊಲೀಸ್ ಠಾಣೆ ಹಾಗೂ 23 ಪೊಲೀಸ್ ಚೌಕಿಗಳನ್ನು ಸ್ಥಾಪಿಸಲಾಗಿದೆ. ಇದರೊಂದಿಗೆ ಅರೆಸೇನಾ ಪಡೆಗಳು, ಸಶಸ್ತ್ರ ಪೊಲೀಸ್ ಪಡೆಗಳು, ಬಾಂಬ್ ಪತ್ತೆ ಮತ್ತು ವಿಲೇವಾರಿ ದಳಗಳು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಇತ್ಯಾದಿಗಳ ತಂಡಗಳನ್ನು ಸಹ ನೇಮಿಸಲಾಗಿದೆ. ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು, ವಿಮಾನ ನಿಲ್ದಾಣಗಳಿಂದ ಕುಂಭ ಕ್ಷೇತ್ರಕ್ಕೆ ಬರುವ ಭಕ್ತರಿಗೆ ವಿಶೇಷ ಪೊಲೀಸ್ ಭದ್ರತಾ ವ್ಯವಸ್ಥೆ ಇರಲಿದೆ.
ಪೊಲೀಸ್ ವ್ಯವಸ್ಥೆ ಹೀಗಿರಲಿದೆ !
ಝೋನ್ (ವಿಭಾಗ) 8, ಸೆಕ್ಟರ್ 18, ತಾತ್ಕಾಲಿಕ ಪೊಲೀಸ್ ಠಾಣೆಗಳು 13, ಖಾಯಂ ಪೊಲೀಸ್ ಠಾಣೆಗಳು 44, ತಾತ್ಕಾಲಿಕ ಪೊಲೀಸ್ ಚೌಕಿಗಳು 23, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ 21 ತುಕಡಿಗಳು, ಮೀಸಲು ಪಡೆಗಳು 2, ಪ್ರಾಂತೀಯ ಸಶಸ್ತ್ರ ಪಡೆಯ 5 ತುಕಡಿಗಳು, ರಾಷ್ಟ್ರೀಯ ವಿಪತ್ತು ಸ್ಪಂದನೆಯ ದಳದ 4 ಪಡೆಗಳು, ಎಎಸ್ ಚೆಕ್ 12 ಪಡೆಗಳು ಮತ್ತು ಬಾಂಬ್ ಪತ್ತೆ ಮತ್ತು ವಿಲೇವಾರಿ ದಳಗಳ 4 ಪಡೆಗಳು ಹೀಗೆ ಈ ವ್ಯವಸ್ಥೆ ಹೊಂದಿರುತ್ತದೆ.