ಅಮೇರಿಕಾ ಕೇಂದ್ರಿತವಾಗಿರುವ ಪ್ರಪಂಚ ಇತಿಹಾಸದ ತೆರೆಮರೆಗೆ ಸೇರಲಿದೆ – ರಷ್ಯಾ

ಮಾಸ್ಕೋ – ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಪಾಶ್ಚಾತ್ಯ ದೇಶದ ವಿಚಾರಸರಣಿಯಲ್ಲಿ ಸ್ವಾರ್ಥ ಅಡಗಿರುತ್ತದೆ. ಆದ್ದರಿಂದ ಪಾಶ್ಚಾತ್ಯ ದೇಶಗಳಲ್ಲಿ ಇಬ್ಬರ ನಡುವಿನ ಸಂಬಂಧಗಳು ಕೆಡಬಹುದು ಮತ್ತು ಬೇಗನೆ ಅಮೇರಿಕಾ ಕೇಂದ್ರಿತ ಪ್ರಪಂಚ ಇತಿಹಾಸದ ತೆರೆಮರೆಗೆ ಸೇರಲಿದೆ ಎಂಬ ಎಚ್ಚರಿಕೆ ರಷ್ಯಾದ ಮಾಜಿ ರಾಷ್ಟ್ರಾಧ್ಯಕ್ಷ ದಿಮಿತ್ರಿ ಮೆದವೆದೇವ ನೀಡಿದರು. ಮೆದವೆದೇವ ಇವರು ೨೦೦೮ ರಿಂದ ೨೦೧೩ ಕಾಲಾವಧಿಯಲ್ಲಿ ರಷ್ಯಾ ಅಧ್ಯಕ್ಷರಾಗಿದ್ದರು. ಪ್ರಸ್ತುತ ಅವರು ರಷ್ಯಾ ದ ರಕ್ಷಣಾ ಪರಿಷತ್ತಿನ ಉಪಾಧ್ಯಕ್ಷರಾಗಿದ್ದಾರೆ. ಅಮೆರಿಕಾ ಕೇಂದ್ರಿತ ಪ್ರಪಂಚ ಅಸ್ತಂಗತದ ನಂತರ ಒಂದು ಹೊಸ ಜಾಗತಿಕ ಸಂರಕ್ಷಣಾತ್ಮಕ ವ್ಯವಸ್ಥೆಯ ಉದಯವಾಗುವುದು, ಎಂಬ ಭವಿಷ್ಯ ಮೆದವೆದೇವ ನುಡಿದಿದ್ದಾರೆ.

ಭವಿಷ್ಯದಲ್ಲಿ ಪ್ರಪಂಚಕ್ಕೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು !

ಮೆದವೆದೇವ ಮಾತು ಮುಂದುವರಿಸಿ,

೧. ಉಕ್ರೇನ್ ವಿರುದ್ದ ಯುದ್ಧ ಘೋಷಿಸಿ ಅದರ ಮೇಲೆ ಕಾರ್ಯಾಚರಣೆ ಕೈಗೊಂಡಿರುವ ರಷ್ಯಾ ವಿರುದ್ದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಾಶಕ್ತಿಗಳು ಅನೇಕ ನಿರ್ಬಂಧಗಳು ಹೇರಿದ್ದಾರೆ. ಇದರಿಂದ ಪ್ರಪಂಚದ ಒಟ್ಟಾರೆ ಸ್ವರೂಪ ಬದಲಾಗಿದೆ.

೨. ರಷ್ಯಾ ಮೇಲೆ ಹೇರಲಾಗಿರುವ ನಿರ್ಬಂಧ ಕೇವಲ ರಷ್ಯಾಕ್ಕಷ್ಟೇ ಅಲ್ಲದೆ, ಅದನ್ನು ಹೇರುವ ರಾಷ್ಟ್ರದ ಜೊತೆಗೆ ಸಂಪೂರ್ಣ ಪ್ರಪಂಚಕ್ಕೆ ಘಾತಕವಾಗಿದೆ.

೩. ವಿವಿಧ ಉತ್ಪಾದನೆಗಳ ಜಾಗತಿಕ ಸರಪಣಿ ತತ್ತರಿಸಿದೆ, ವ್ಯಾಪಾರ ಮತ್ತು ಸಂಚಾರಗಳಲ್ಲಿ ಅಡೆತಡೆಗಳು ಬರುತ್ತಿವೆ.

೪. ಅನೇಕ ಪಾಶ್ಚಾತ್ಯ ವಿಮಾನ ಕಂಪನಿಗಳ ಮೇಲೆಯೂ ಈಗ ರಷ್ಯಾದ ವಾಯು ಕ್ಷೇತ್ರ ಉಪಯೋಗಿಸುವುದರ ಮೇಲೆ ನಿಷೇಧ ಇರುವುದರಿಂದ ಅವರಿಗೂ ವಿವಿಧ ಸಮಸ್ಯೆಗಳು ಎದುರಿಸಬೇಕಾಗುತ್ತಿದೆ.

೫. ಅನೇಕ ದೇಶಗಳಲ್ಲಿ ವಿದ್ಯುತ್ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ, ಈ ಸಂಕಷ್ಟಗಳು ಹೆಚ್ಚು ಭಯಾನಕವಾಗಿವೆ.

೬. ಅಂತಾರಾಷ್ಟ್ರೀಯ ಸ್ತರದಲ್ಲಿ ಆಹಾರದ ಕೊರತೆ ನಿರ್ಮಾಣವಾಗಿ ಕೆಲವು ರಾಷ್ಟ್ರಗಳ ಮೇಲೆ ಬರಗಾಲದ ಪರಿಸ್ಥಿತಿ ಬರಬಹುದು.

೭. ರಾಷ್ಟ್ರೀಯ ಹಣದುಬ್ಬರ, ಭಯಂಕರವಾದ ಬೆಲೆ ಏರಿಕೆ ಮತ್ತು ಖಾಸಗಿ ವಸ್ತುಗಳಿಗೆ ಸಿಗುತ್ತಿರುವ ಕಾನೂನಿನ ಸಂರಕ್ಷಣೆ ನಾಶವಾಗಿರುವುದರಿಂದ ಅನೇಕ ದೇಶ ಅಥವಾ ಖಂಡಗಳು ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.

೮. ಯಾವ ಕ್ಷೇತ್ರದಲ್ಲಿ ಸಂಘರ್ಷದ ಮೇಲೆ ಅನೇಕ ದಶಕಗಳಿಂದ ಶಾಶ್ವತವಾದ ಪರಿಹಾರ ಕಂಡು ಹಿಡಿಯಲಾಗಿಲ್ಲ, ಅಂತಹ ಕ್ಷೇತ್ರಿಯ ಸಂಘರ್ಷಗಳು ಹೆಚ್ಚುತ್ತವೆ. ಪಾಶ್ಚಾತ್ಯ ಶಕ್ತಿಗಳ ಸಂಪೂರ್ಣ ಗಮನವು ರಷ್ಯಾ ಮೇಳಿರುವುದರಿಂದ ಇಂತಹ ಕ್ಷೇತ್ರಗಳಲ್ಲಿ ಭಯೋತ್ಪಾದಕರ ತೊಂದರೆ ಹೆಚ್ಚುವ ಸಾಧ್ಯತೆ ಇದೆ.

೯. ರಷ್ಯಾ ಯುಕ್ರೇನ್ ಸಂಘರ್ಷದ ಮೇಲೆ ಪರಿಹಾರ ಕಂಡುಹಿಡಿಯುವಲ್ಲಿ ವಿಫಲವಾಗಿರುವುದರಿಂದ ಅನೇಕ ಅಂತಾರಾಷ್ಟ್ರೀಯ ಸಂಸ್ಥೆಗಳ ನಾಶವಾಗಬಹುದು. ಯುರೋಪಿಯನ್ ಪರಿಷತ್ತು ಅದರಲ್ಲಿನ ಒಂದಾಗಿದೆ ಎಂದು, ಮೆದವೆದೇವ ಹೇಳಿದರು.