ಖಲಿಸ್ತಾನ್ ಬೆಂಬಲಿಗರಿಂದ ಅಮೆರಿಕ ಮತ್ತು ಬ್ರಿಟನ್‌ನಲ್ಲಿ ಭಾರತ ವಿರೋಧಿ ಪ್ರತಿಭಟನೆ

ಲಂಡನ್ (ಬ್ರಿಟನ್) – ಖಲಿಸ್ತಾನ್ ಬೆಂಬಲಿತ ಸಿಖ್ಖರು ವಿದೇಶಗಳಲ್ಲಿ ಭಾರತ ವಿರೋಧಿ ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ‘ಸಿಖ್ ಫಾರ್ ಜಸ್ಟಿಸ್’ ಈ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯು ವಿವಿಧ ದೇಶಗಳಲ್ಲಿ ‘ಕಿಲ್ ಮೋದಿ ಪಾಲಿಟಿಕ್ಸ್’ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಡಿಸೆಂಬರ್ 28 ರಂದು ವಾಷಿಂಗ್ಟನ್‌ನಲ್ಲಿ ಇಂತಹದೊಂದು ಪ್ರತಿಭಟನೆ ನಡೆಯಿತು. ಆನಂತರ, ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನರ ಕಚೇರಿಯ ಹೊರಗೆ ಕೂಡ ಇದೇ ರೀತಿಯ ಪ್ರತಿಭಟನೆ ಮಾಡಲಾಯಿತು.

1. ಹೈಕಮಿಷನರ್ ಕಚೇರಿಯ ಹೊರಗೆ ಜಮಾಯಿಸಿದ ಖಲಿಸ್ತಾನ್ ಬೆಂಬಲಿಗರು ಖಲಿಸ್ತಾನ್ ರಾಷ್ಟ್ರಕ್ಕೆ ಆಗ್ರಹಿಸಿದ್ದಾರೆ. ಈ ಬೇಡಿಕೆ ಸಲ್ಲಿಸುವಾಗ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಯ ನಂತರ ಹೈಕಮಿಷನರ್ ಕಚೇರಿಯ ಹೊರಗೆ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.

2. ಕೆನಡಾದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್‌ಸಿಂಗ್ ನಿಜ್ಜರ್ ನ ಹತ್ಯೆಯಾದ ನಂತರ, ಖಲಿಸ್ತಾನ್ ಬೆಂಬಲಿಗರಿಂದ ವಿದೇಶದಲ್ಲಿರುವ ಭಾರತೀಯ ಹೈಕಮಿಷನರ್ ಕಚೇರಿಯ ಧ್ವಂಸಗೊಳಿಸುವಿಕೆ ಮತ್ತು ಹಿಂದೂ ದೇವಾಲಯಗಳನ್ನು ಅಪವಿತ್ರಗೊಳಿಸುವ ಹೀಗೆ ಅನೇಕ ರೀತಿಯ ಘಟನೆಗಳು ನಡೆಯುತ್ತಿವೆ.