ಹಸುವಿನ ಸಗಣಿ ರಫ್ತು ಮಾಡಿ ಒಂದೇ ವರ್ಷದಲ್ಲಿ ೩೮೬ ಕೋಟಿ ರೂಪಾಯಿ ಗಳಿಸಿದ ಭಾರತ !

ನವ ದೆಹಲಿ – ಭಾರತೀಯ ಹಸುವಿನ ಸಗಣಿಗೆ ವಿದೇಶದಲ್ಲಿ ಬಹಳ ಬೇಡಿಕೆ ಇದೆ. ಸಗಣಿಯ ರಫ್ತಿನಿಂದ ೨೦೨೩-೨೦೨೪ ಈ ಆರ್ಥಿಕ ವರ್ಷದಲ್ಲಿ ಭಾರತಕ್ಕೆ ೩೮೬ ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಲಭ್ಯವಾಗಿದೆ. ‘ಎಕ್ಝಮಪೇಡಿಯ’ ಈ ವಸ್ತುಗಳ ಆಮದು-ರಫ್ತಿಗೆ ಸಂಬಂಧಿತ ವಿಷಯದ ಅಧ್ಯಯನ ನಡೆಸುವ ಕಂಪನಿಯಿಂದ ಇದರ ಸಂದರ್ಭದಲ್ಲಿ ಒಂದು ವರದಿ ಪ್ರಸಾರ ಮಾಡಿದೆ. ಭಾರತೀಯ ಹಸುವಿನ ಸಗಣಿ ಹೊಲಗಳಿಗಾಗಿ ಸಂಜೀವಿನಿಯಾಗಿದೆ, ಎಂದು ವಿದೇಶದಲ್ಲಿನ ಅನೇಕ ರೈತರು ನಂಬಿದ್ದಾರೆ. ಮಾಲ್ಡಿವ್, ಚೀನಾ, ನೇಪಾಳ, ಸಿಂಗಪುರ, ಆಸ್ಟ್ರೇಲಿಯಾ, ಕುವೈತ್, ಸಂಯುಕ್ತ ಅರಬ ಅಮರಾತ್, ಅಮೇರಿಕಾ, ಬ್ರೆಜಿಲ್, ಅರ್ಜೆಂಟಿನ ಮುಂತಾದ ದೇಶಗಳಲ್ಲಿ ಭಾರತೀಯ ಹಸುವಿನ ಸಗಣಿ ಅಥವಾ ಅದರ ಪದಾರ್ಥಗಳಿಗೆ ಎಲ್ಲಕ್ಕಿಂತ ಹೆಚ್ಚು ಬೇಡಿಕೆ ಇದೆ.

೧. ೩೮೬ ಕೋಟಿ ರೂಪಾಯಿಗಳಲ್ಲಿ ಸುಮಾರು ೧೨೫ ಕೋಟಿ ರೂಪಾಯಿ ಮೌಲ್ಯದ ಸಗಣಿ ವಿದೇಶಕ್ಕೆ ರಫ್ತು ಮಾಡಲಾಗಿದೆ.

೨. ಹಸುವಿನ ಸಗಣಿಯಿಂದ ತಯಾರಾಗಿರುವ ೧೭೩ ಕೋಟಿ ರೂಪಾಯಿ ಮೌಲ್ಯದ ಗೊಬ್ಬರ ಕೂಡ ರಫ್ತು ಮಾಡಲಾಗಿದೆ.

೩. ಹಸುವಿನ ಸಗಣಿ ಇರುವ ‘ಕಂಪೋಸ್ಟ ಗೊಬ್ಬರ’ ಕೂಡ ವರ್ಷದಲ್ಲಿ ೮೮ ಕೋಟಿ ರೂಪಾಯಿ ಅಷ್ಟು ರಫ್ತು ಮಾಡಲಾಗಿದೆ.