Moradabad Hindu Temple Reopens : ಮುರಾದಾಬಾದ್ (ಉತ್ತರ ಪ್ರದೇಶ) : ಸರಕಾರದಿಂದ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ೪೪ ವರ್ಷಗಳಿಂದ ಮುಚ್ಚಿದ್ದ ಶಿವನ ದೇವಸ್ಥಾನದ ಜೀರ್ಣೋದ್ಧಾರ !

೧೯೮೦ ರ ಗಲಭೆಯ ನಂತರ ದೇವಸ್ಥಾನ ಮುಚ್ಚಲಾಗಿತ್ತು !

ಮುರಾದಾಬಾದ್ (ಉತ್ತರ ಪ್ರದೇಶ) – ಇಲ್ಲಿ ಮುಸಲ್ಮಾನ ಬಾಹುಳ್ಯ ಪ್ರದೇಶದಲ್ಲಿ ಪತ್ತೆಯಾದ ಗೌರೀಶಂಕರ ದೇವಸ್ಥಾನದ ಜೀರ್ಣೋದ್ಧಾರವನ್ನು ಸರಕಾರ ಕೈಗೆತ್ತಿಕೊಂಡಿದೆ. ಈ ದೇವಸ್ಥಾನ ಸುಮಾರು ೪೪ ವರ್ಷಗಳಿಂದ ಮುಚ್ಚಲಾಗಿತ್ತು. ಈ ದೇವಸ್ಥಾನದಲ್ಲಿ ಭಗವಾನ್ ಶಿವನ ಮೂರ್ತಿ ಇದೆ. ಇಲ್ಲಿ ೧೯೮೦ ರಲ್ಲಿ ನಡೆದಿರುವ ಗಲಭೆಯ ನಂತರ ದೇವಸ್ಥಾನ ಮುಚ್ಚಲಾಗಿತ್ತು. ಈ ಗಲಬೆಯಲ್ಲಿ ದೇವಸ್ಥಾನದ ಅರ್ಚಕರನ್ನು ಮತಾಂಧ ಮುಸಲ್ಮಾನರು ಹತಗೊಳಿಸಿ ಸುಟ್ಟು ಹಾಕಿದ್ದರು. ಈ ಗಲಭೆಯಲ್ಲಿ ೮೩ ಜನರು ಸಾವನ್ನಪ್ಪಿದ್ದರು.

೧. ಈ ಅರ್ಚಕರ ಮೊಮ್ಮಗ ಸೇವಾರಾಮ ಇವರು ಈ ದೇವಸ್ಥಾನದ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಅದರಲ್ಲಿ, ಈ ದೇವಸ್ಥಾನ ಅವರ ಮುತ್ತಜ್ಜ ಭೀಮಸೇನ ಇವರು ಕಟ್ಟಿದ್ದರು ಮತ್ತು ಅದರ ನಂತರ ಅವರ ಸ್ವಂತ ಕುಟುಂಬ ಇದರ ಪೂಜೆ ಮಾಡುತ್ತಿದ್ದರು. ೧೯೮೦ ರ ಗಲಭೆಯ ನಂತರ ದೇವಸ್ಥಾನ ಮುಚ್ಚಲಾಯಿತು ಮತ್ತು ಪ್ರವೇಶದ್ವಾರದ ಮುಂದೆ ಗೋಡೆ ಕಟ್ಟಲಾಯಿತು. ಅಲ್ಲಿ ಈಗ ಜನರು ಹೋಗುತ್ತಿಲ್ಲ’, ಎಂದು ಹೇಳಿದ್ದಾರೆ.

೨. ಅವರು ಈ ದೇವಸ್ಥಾನ ತೆರೆಯಲು ಆಗ್ರಹಿಸಿ ಸ್ಥಳೀಯರ ಜೊತೆಗೆ ಪ್ರತಿಭಟನೆ ಕೂಡ ನಡೆಸಿದ್ದರು. ಅದರ ನಂತರ ಮುರಾದಾಬಾದ್ ಮಹಾನಗರಪಾಲಿಕೆ ಮತ್ತು ಸರಕಾರಿ ತಂಡ ದೇವಸ್ಥಾನದ ಸ್ಥಳಕ್ಕೆ ತಲುಪಿ ದೇವಸ್ಥಾನದ ಮುಂದೆ ಕಟ್ಟಿರುವ ಗೋಡೆ ಕೆಡವಿದರು ಮತ್ತು ದೇವಸ್ಥಾನದಲ್ಲಿ ಹಾಕಿದ್ದ ಮಣ್ಣನ್ನು ಹೊರ ತೆಗೆದರು. ಅದರ ನಂತರ ಇಲ್ಲಿ ಶ್ರೀ ಹನುಮಂತನ ಮೂರ್ತಿ ಹಾಗೂ ಶಿವಲಿಂಗ ಕಂಡು ಬಂದಿದೆ. ಸರಕಾರ ಈಗ ದೇವಸ್ಥಾನದ ಜೀರ್ಣೋದ್ಧಾರ ಮಾಡುತ್ತಿದೆ. ಇಲ್ಲಿ ಬೇಗನೆ ಕೆಲಸ ಆರಂಭವಾಗುವುದು.

೩. ಈ ಸಂದರ್ಭದಲ್ಲಿನ ಸಮೀಕ್ಷೆಯ ವರದಿಯನ್ನು ಯೋಗಿ ಆದಿತ್ಯನಾಥ ಸರಕಾರ ಕಳೆದ ವರ್ಷ ಬಹಿರಂಗಪಡಿಸಿತ್ತು. ಅದರ ಮೊದಲು ಗಲಭೆಯ ವರದಿ ಗೌಪ್ಯವಾಗಿ ಇಡಲಾಗಿತ್ತು ಕಾರಣ ಅದರಿಂದ ನಿಜವಾದ ಅಪರಾಧಿಯ ಗುರುತು ಪತ್ತೆ ಆಗಬಹುದಾಗಿತ್ತು. ಮುಸ್ಲಿಮ್ ಲೀಗ್ ನ ನಾಯಕ ಶಮೀಮ್ ಅಹಮದ್ ಮತ್ತು ಹಮೀದ್ ಹುಸೇನ್ ಮತ್ತು ಅವರ ಬೆಂಬಲಿಗರು ಈ ಗಲಭೆ ನಡೆಸಿದ್ದರು. ಅವರಿಗೆ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಲೀಗ್ ಪುನರುಜ್ಜೀತ ಗೊಳಿಸುವುದಿತ್ತು, ಆ ಕಾಲದಲ್ಲಿ ಕಾಂಗ್ರೆಸ್ ಹಾಫಿಜ್ ಮಹಮ್ಮದ್ ಸಿದ್ದಿಕಿ ಇವನ ನೇತೃತ್ವದಲ್ಲಿ ಕೆಲಸ ಮಾಡುತ್ತಿತ್ತು.

೪. ಈ ಹಿಂಸಾಚಾರದಲ್ಲಿ ಮುಸ್ಲಿಂ ಲೀಗಗೆ ಜಮೀತ್ ಉಲೇಮ-ಎ-ಹಿಂದ ಮತ್ತು ತಬಲಿಗ-ಎ-ಇಸ್ಲಾಂ ಇವುಗಳಂತಹ ಇಸ್ಲಾಮಿ ಸಂಘಟನೆಯಿಂದ ನಿಧಿ ದೊರೆಯುತ್ತಿತ್ತು. ಗಲಭೆಯ ಮೊದಲು ೩ ತಿಂಗಳು ಅನೇಕ ಹಿಂಸಾತ್ಮಕ ಘಟನೆಗಳು ಘಟಿಸಿದ್ದವು. ಹೆಚ್ಚುತ್ತಿರುವ ಬಿಗುವಿನ ವಾತಾವರಣದ ಲಾಭ ಪಡೆಯುತ್ತಾ ಮುಸ್ಲಿಂ ಲೀಗ್ ಮತ್ತು ಕಾಂಗ್ರೆಸ್ ನ ನಾಯಕರು ಆಗಸ್ಟ್ ೧೩, ೧೯೮೦ ಈದ ದಿನದಂದು ಒಂದು ವದಂತಿಗಳ ಮೂಲಕ ಗಲಭೆ ನಡೆಸಿದರು.

ಸಂಪಾದಕೀಯ ನಿಲುವು

ಹಿಂದುಗಳ ದೇವಸ್ಥಾನಗಳು ಎಲ್ಲಿ ಮತ್ತು ಯಾರಿಂದ ಮುಚ್ಚಲಾಗಿತ್ತು, ಇದನ್ನು ಗಮನಿಸಿದರೆ ಭಾರತದಲ್ಲಿ ಮುಸಲ್ಮಾನರಲ್ಲ, ಹಿಂದುಗಳೇ ಅಸುರಕ್ಷಿತವಾಗಿದ್ದಾರೆ, ಇದು ಅರಿವಿಗೆ ಬರುತ್ತಿದೆ ! ಇಂತಹ ಘಟನೆ ಮತ್ತೆ ಘಟಿಸಬಾರದು, ಅದಕ್ಕಾಗಿ ಹಿಂದುಗಳು ಸಂಘಟಿತ ಮತ್ತು ಜಾಗರೂಕರಾಗುವುದರ ಜೊತೆಗೆ ಹಿಂದುತ್ವನಿಷ್ಠ ಸರಕಾರವು ಮುಸಲ್ಮಾನರಿಗೆ ಕಡಿವಾಣ ಹಾಕುವುದು ಆವಶ್ಯಕವಾಗಿದೆ !