ರಷ್ಯಾದ ಸೈನಿಕರಿಂದ ಉಕ್ರೇನಿನ ಮಹಿಳೆಯರ ಮೇಲೆ ಬಲಾತ್ಕಾರ ! – ಉಕ್ರೇನಿನ ಮಹಿಳಾ ಸಂಸದೆಯ ಆರೋಪ

ಮಾರಿಯಾ ಮೆಝೆಂಟವಾ

ಕಿವ (ಉಕ್ರೇನ) – ಉಕ್ರೇನಿನ ಮೇಲೆ ಆಕ್ರಮಣ ನಡೆಸಿರುವ ರಷ್ಯಾದ ಸೈನಿಕರು ಉಕ್ರೇನಿನ ಮಹಿಳೆಯರ ಮೇಲೆ ಬಲಾತ್ಕಾರ ನಡೆಸುವ ಜೊತೆಗೆ ಅವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ, ಎಂದು ಮಹಿಳಾ ಸಂಸದೆ ಮಾರಿಯಾ ಮೆಝೆಂಟವಾ ಇವರು ಒಂದು ವಾರ್ತಾ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ. `ನಾವು ಈ ಬಗ್ಗೆ ಶಾಂತವಾಗಿರದೆ ಧ್ವನಿ ಎತ್ತುವವರಿದ್ದೇವೆ’, ಎಂದೂ ಸಹ ಅವರು ಸ್ಪಷ್ಟಪಡಿಸಿದರು. ಮೆಝೆಂಟವಾ ಇವರು ಕಿವ ನಗರದ ಉತ್ತರದ ಕಡೆ ಇರುವ ಬ್ರೋವರಿ ಉಪನಗರದಲ್ಲಿ ಘಟನೆಯ ಬಗ್ಗೆ ಹೇಳುತ್ತಾ ಆರೋಪಿಸಿದ್ದಾರೆ. ಈ ಸ್ಥಳದಲ್ಲಿ ಒಬ್ಬ ಮಹಿಳೆಯ ಮೇಲೆ ಮಕ್ಕಳೆದುರು ಬಲಾತ್ಕಾರ ನಡೆಸಿದ್ದಾರೆ. ಪ್ರಾಕ್ಸಿಟ್ಯೂಟರ್ ಜನರಲ್ ಇರಿನಾ ವೇನೆದಿಕ್ಟೌವಾ ಇವರು, ಈ ಪ್ರಕರಣದ ವಿಚಾರಣೆಯನ್ನು ಸಂಬಂಧಿತ ವ್ಯವಸ್ಥೆಯಿಂದ ನಡೆಯುತ್ತಿದೆ. ಈ ಪ್ರಕರಣದಲ್ಲಿ ಉಕ್ರೇನಿನ ಸಂಬಂಧಿತ ರಷ್ಯಾದ ಸೈನ್ಯಾಧಿಕಾರಿ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲಾಗಿದೆ ಎಂದು ಹೇಳಿದರು.

ಮಾರಿಯಾ ಮೆಝೆಂಟವಾ ಇವರು, ಈ ರೀತಿಯ ಅನೇಕ ಘಟನೆಗಳು ನಡೆದಿದ್ದು ಅವು ದಾಖಲಿಸಲಾಗಿಲ್ಲ. ಯುದ್ಧದ ಸಮಯದಲ್ಲಿ ಈ ರೀತಿಯ ಅತ್ಯಾಚಾರಕ್ಕೆ ಅನೇಕ ಮಹಿಳೆಯರು ಬಲಿಯಾಗಿದ್ದಾರೆ. ಇದರಲ್ಲಿ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಇಂತಹ ಅನೇಕ ಪ್ರಕರಣಗಳು ಇರಬಹುದು ಎಂದು ನಮಗೆ ಅನಿಸುತ್ತದೆ ಎಂದು ಹೇಳಿದರು.