ಕುರಾನ್ ಸುಟ್ಟ ಕಾರಣಕ್ಕೆ ಸ್ವೀಡನ್ ನಲ್ಲಿ ಭುಗಿಲೆದ್ದ ಹಿಂಸಾಚಾರ ೪ನೇ ದಿನಕ್ಕೆ !

ಕುರಾನ್ ಸುಟ್ಟ ಘಟನೆಯನ್ನು ವಿರೋಧಿಸಿದ ಸೌದಿ ಅರೇಬಿಯಾ

ಸ್ವೀಡನ್ ೧ ಕೋಟಿ ಜನಸಂಖ್ಯೆಯನ್ನು ಹೊಂದಿದ್ದು ಅದರಲ್ಲಿ ಕೇವಲ ೩ ಲಕ್ಷ ಮುಸ್ಲಿಮರಿದ್ದಾರೆ. ಆದರೂ ಅವರು ದೇಶದ ಅನೇಕ ನಗರಗಳಲ್ಲಿ ಹಿಂಸಾಚಾರ ಮಾಡಿ ಜನರನ್ನು ಒತ್ತೆಯಾಳಾಗಿ ಹಿಡಿದಿಡಲು ಧೈರ್ಯ ಮಾಡುತ್ತಾರೆ, ಇದು ಇಡೀ ಜಗತ್ತಿಗೆ ಕಳವಳಕಾರಿಯಾಗಿದೆ !

ಒಂದು ಸಮೀಕ್ಷೆಯ ಪ್ರಕಾರ, ಮುಂದಿನ ಕೆಲವು ವರ್ಷಗಳಲ್ಲಿ ಸ್ಥಳೀಯ ಮುಸ್ಲಿಂ ಜನಸಂಖ್ಯೆಯು ಶೇ. ೩೦ ಕ್ಕೆ ಏರುವ ನಿರೀಕ್ಷೆಯಿದೆ. ಹಾಗೇನಾದರೂ ಆದಲ್ಲಿ ಸ್ವೀಡನ್‌ಅನ್ನು ಇಸ್ಲಾಮಿಕ್ ದೇಶವನ್ನಾಗಿಸಲು ಹಿಂಸಾತ್ಮಕ ಚಳವಳಿ ಆರಂಭಿಸಿದರೆ ಅಚ್ಚರಿಯಿಲ್ಲ !

ರಿಯಾಧ (ಸೌದಿ ಅರೇಬಿಯಾ) – ಯುರೋಪ್ ನಲ್ಲಿ ಕುರಾನ್ ಸುಟ್ಟ ಘಟನೆಯ ನಂತರ ಕಳೆದ ನಾಲ್ಕು ದಿನಗಳಿಂದ ಸ್ವೀಡನ್‌ನಲ್ಲಿ ಮುಸ್ಲಿಂ “ಶರನರ್ಥಿಗಳಿಂದ” ಹಿಂಸಾಚಾರ ನಡೆಯುತ್ತಿದೆ. ಹಲವು ನಗರಗಳಲ್ಲಿ ಹಿಂಸಾಚಾರ ಮುಂದುವರಿದಿದೆ. ಇಲ್ಲಿನ ಸ್ಟ್ರಾಮ್ ಕುರ್ಸ್ ಪಕ್ಷದ ಕಾರ್ಯಕರ್ತರು ಕುರಾನ್ ಸುಟ್ಟಿದ್ದರು. ಈ ಕುರಿತು ಪಕ್ಷದ ಅಧ್ಯಕ್ಷ ರಾಸ್ಮಸ್ ಪಾಲುದನ್ ಇದಕ್ಕೆ ಪ್ರಚೋದನೆ ನೀಡಿದ್ದರು. ಸೌದಿ ಅರೇಬಿಯಾ ಕೂಡ ಕುರಾನ್ ಸುಟ್ಟಿದ್ದನ್ನು ವಿರೋಧಿಸಿದೆ. ಸೌದಿ ಅರೇಬಿಯಾದ ವಿದೇಶಾಂಗ ಸಚಿವಾಲಯವು, ಎಲ್ಲಾ ಧರ್ಮಗಳು ಮತ್ತು ಅವರ ಧಾರ್ಮಿಕ ಪ್ರತೀಕಗಳಿಗಾಗುವ ಅವಮಾನವನ್ನು ನಿಲ್ಲಿಸಬೇಕು. ಚರ್ಚೆಯ ಮೂಲಕ ಶಾಂತಿ ನೆಲೆಸಲು ಪ್ರಯತ್ನಿಸಬೇಕು ಎಂದು ಹೇಳಿದೆ.