ಮುರಾದಾಬಾದ್ (ಉತ್ತರ ಪ್ರದೇಶ) ನಲ್ಲಿ ಸಮೂಹದಿಂದ ಗೋಹಂತಕನಿಗೆ ಥಳಿತ

ಚಿಕಿತ್ಸೆ ನಡೆಯುತ್ತಿರುವಾಗ ಸಾವು

ಮುರಾದಾಬಾದ್ (ಉತ್ತರಪ್ರದೇಶ) – ಇಲ್ಲಿ ಸಮೂಹವೊಂದು ಗೋಹತ್ಯೆ ಮಾಡುತ್ತಿದ್ದ ಯುವಕನನ್ನು ಹಿಡಿದು ಥಳಿಸಿದ್ದರಿಂದ ಅವನ ಚಿಕಿತ್ಸೆಯ ವೇಳೆ ಸಾವಾಗಿದೆ. ಡಿಸೆಂಬರ್ 30 ರಂದು ಮುಂಜಾನೆ ಮಾಢೊಳಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಂಡಿ ಸಮಿತಿಯಲ್ಲಿ ಈ ಘಟನೆ ನಡೆದಿದೆ. ಮೃತನ ಹೆಸರು ಶಾಹಿದಿನ್ ಎನ್ನಲಾಗಿದೆ. ಆತ ಅಸ್ಲತ್‌ಪುರ ನಿವಾಸಿಯಾಗಿದ್ದನು. ಇಡೀ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಈ ಪ್ರಕರಣದಲ್ಲಿ ಪೊಲೀಸರು ಅಪರಾಧ ದಾಖಲಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋದ ಆಧಾರದಿಂದ ಜನರನ್ನು ಗುರುತಿಸಲಾಗುತ್ತಿದೆ.

1. ಮಂಡಿ ಸಮಿತಿಯ ಪರಿಸರದಲ್ಲಿ ಕೆಲವರು ಗೋಹತ್ಯೆ ಮಾಡುತ್ತಿರುವ ಮಾಹಿತಿ ಸುತ್ತಮುತ್ತಲಿರುವವರಿಗೆ ತಿಳಿಯಿತು. ಹೀಗಾಗಿ ಆ ಪರಿಸರದಲ್ಲಿನ ನಾಗರಿಕರ ದಟ್ಟಣೆ ಆಯಿತು. ಗೋಹತ್ಯೆ ಮಾಡುತ್ತಿದ್ದ 4 ಜನರಲ್ಲಿ 3 ಜನರು ಓಡಿಹೋದರು, ಆದರೆ ಶಾಹಿದಿನ್ ಗುಂಪಿನಲ್ಲಿ ಸಿಕ್ಕಿಬಿದ್ದನು. ಸಮೂಹದಿಂದ ಅವನಿಗೆ ಧರ್ಮದೇಟು ನೀಡಿದರು. ಈ ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಅಲ್ಲಿಗೆ ಆಗಮಿಸಿ ಶಾಹಿದಿನ್‌ನನ್ನು ಗುಂಪಿನ ಹಿಡಿತದಿಂದ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.

2. ಸ್ಥಳೀಯ ಜನರು, ಈ ಹಿಂದೆಯೂ ಮಂಡಿ ಸಮಿತಿಯ ಪರಿಸರದಲ್ಲಿ ಗೋಹತ್ಯೆ ಪ್ರಕರಣಗಳು ನಡೆದಿವೆ. ಗೋಹತ್ಯೆ ಆಗುತ್ತಿರುವುದನ್ನು ನೋಡಿದ ಗುಂಪಿನ ಸಹನೆ ತಪ್ಪಿದೆ’, ಎಂದಿದ್ದಾರೆ.

ಸಂಪಾದಕೀಯ ನಿಲುವು

ಗೋಹತ್ಯೆಯ ಬಗ್ಗೆ ಜನರಲ್ಲಿ ಎಷ್ಟು ಆಕ್ರೋಶವಿದೆ, ಇದು ಇದರಿಂದ ಗಮನಕ್ಕೆ ಬರುತ್ತದೆ. ಈ ಪ್ರಕರಣದಲ್ಲಿ ಪೊಲೀಸರು ಮತ್ತು ಆಡಳಿತ ಹೆಚ್ಚು ಜಾಗರೂಕತೆಯಿಂದ ಇದ್ದು ಗೋಹತ್ಯೆ ತಡೆಯಲು ಪ್ರಯತ್ನಿಸುವುದು ಅವಶ್ಯಕ ಇದೆ !