ಮಣಿಪುರ ಹಿಂಸಾಚಾರ ಮುಖ್ಯಮಂತ್ರಿ ಬಿರೇನ್ ಸಿಂಗ್ ಇವರಿಂದ ಕ್ಷಮೆಯಾಚನೆ !

ಕಳೆದ 2 ವರ್ಷಗಳಲ್ಲಿ 200 ಕ್ಕೂ ಹೆಚ್ಚು ಸಾವು

ಇಂಫಾಲ (ಮಣಿಪುರ) – ಮಣಿಪುರದಲ್ಲಿ ಸಂಪೂರ್ಣ ವರ್ಷ ದುರದೃಷ್ಟಕರವಾಗಿತ್ತು. ಅನೇಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡರು. ಅನೇಕರು ತಮ್ಮ ಮನೆಗಳನ್ನು ತೊರೆದರು. ಈ ಬಗ್ಗೆ ನನಗೆ ಬಹಳ ದುಃಖವಾಗಿದೆ. ನನಗೆ ಕ್ಷಮೆ ಕೇಳುವುದಿದೆ. ಮೇ 3, 2023 ರಿಂದ ಇಲ್ಲಿಯವರೆಗೆ ಏನು ನಡೆದಿದೆ ಆ ಬಗ್ಗೆ ನಾನು ರಾಜ್ಯದ ಜನರಲ್ಲಿ ಕ್ಷಮೆಯಾಚಿಸುತ್ತೇನೆ. ನನ್ನನ್ನು ನಿಜವಾಗಿಯೂ ಕ್ಷಮಿಸಿರಿ ಎಂದು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಜನರಲ್ಲಿ ಕ್ಷಮೆ ಕೇಳಿದರು. ಅವರು ಇಲ್ಲಿನ ಸಚಿವಾಲಯದಲ್ಲಿ ಪ್ರಸಾರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು. ಮೇ 3, 2023 ರಿಂದ ಮಣಿಪುರದಲ್ಲಿ ಕ್ರೈಸ್ತ ಕುಕಿ ಭಯೋತ್ಪಾದಕರು ಮತ್ತು ಹಿಂದೂ ಮೈತೇಯಿ ನಡುವೆ ಹಿಂಸಾಚಾರ ನಡೆಯುತ್ತಿದೆ.

ಮುಖ್ಯಮಂತ್ರಿ ಸಿಂಗ್ ಮಾತನಾಡಿ, ಕಳೆದ 2 ವರ್ಷಗಳಲ್ಲಿ ಸುಮಾರು 200 ಮಂದಿ ಸಾವನ್ನಪ್ಪಿದ್ದಾರೆ. 625 ಆರೋಪಿಗಳನ್ನು ಬಂಧಿಸಲಾಗಿದೆ. ಸ್ಫೋಟಕ ಸೇರಿದಂತೆ ಸುಮಾರು 5 ಸಾವಿರದ 600 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಮಸ್ಯೆಯನ್ನು ನಿಭಾಯಿಸುವಲ್ಲಿಯೂ ಯಶಸ್ವಿಯಾಗಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಯಾವುದೇ ಹಿಂಸಾಚಾರದ ಘಟನೆ ನಡೆದಿಲ್ಲ. ಅಲ್ಲಲ್ಲಿ ಪ್ರತಿಭಟನೆಗಳನ್ನು ಹೊರತುಪಡಿಸಿದರೆ ಜನ ಬೀದಿಗಿಳಿಯಲಿಲ್ಲ. ಸರಕಾರಿ ಕಚೇರಿಗಳು ದಿನನಿತ್ಯ ತೆರೆಯುತ್ತಿದ್ದು, ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ’, ಎಂದು ಹೇಳಿದರು.