ಇಮ್ರಾನ್ ಖಾನ್ ಇವರ ಪಕ್ಷದ ಕಾರ್ಯಕರ್ತರಿಂದ ದಾಳಿ
ಲಂಡನ್ (ಬ್ರಿಟನ್) – ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಲಂಡನ್‍ನಲ್ಲಿನ ಕಚೇರಿಯ ಮೇಲೆ ಮತ್ತೊಮ್ಮೆ ದಾಳಿ ನಡೆದಿದೆ. 2 ದಿನಗಳ ಮೊದಲು ಅವರ ಕಚೇರಿಯ ಮೇಲೆ ಹಾಗೂ ಅವರ ಮೇಲೆ ದಾಳಿ ನಡೆದಿತ್ತು. ಈಗ 15 ರಿಂದ 20 ಜನರಿಂದ ಈ ದಾಳಿ ನಡೆಸಿರುವ ಸುದ್ಧಿ ಇದೆ. ಈ ಸಮಯದಲ್ಲಿ ದಾಳಿಖೋರರು ಮತ್ತು ಶರೀಫ್ ಇವರ ಕಚೇರಿಯ ಜನರಗಳ ನಡುವೆ ಹೊಡೆದಾಟ ನಡೆದಿದೆ. ಇದರಲ್ಲಿ ಕೆಲವು ಜನರು ಗಾಯಗೊಂಡಿರುವುದಾಗಿ ಹೇಳಲಾಗುತ್ತಿದೆ. ದಾಳಿ ಮಾಡುವವರು ಯಾವ ವಾಹನದಲ್ಲಿ ಬಂದಿದ್ದರು ಅದರ ಮೇಲೆ ಪಾಕಿಸ್ತಾನದ ಆಡಳಿತಾರೂಢ ಎಂದರೆ ಪ್ರಧಾನಿ ಇಮ್ರಾನ್ ಖಾನ್ ಇವರ `ಪಾಕಿಸ್ತಾನ ತೆಹರಿಕ-ಏ-ಇಂಸಾಫ್ (ಪಿಟಿಐ) ಈ ಪಕ್ಷದ ಬಾವುಟ ಇತ್ತು.
#BREAKING | Pakistan former PM and Pakistan Muslim League-Nawaz supremo Nawaz Sharif’s office attacked in London amid constitutional crisis; 3 persons wounded, 4 arrested
Tune in here for details – https://t.co/nbRYmryTQD pic.twitter.com/DEp8J3dUem
— Republic (@republic) April 4, 2022
ಪಾಕಿಸ್ತಾನದ `ಜಿಯೋ ನ್ಯೂಸ್’ನ ಓರ್ವ ಪತ್ರಕರ್ತನು ಲಂಡನ್‍ನಲ್ಲಿ ನವಾಜ್ ಶರೀಫ್ ಇವರ ಮೇಲೆ ದಾಳಿ ನಡೆದಿರುವ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ದಾಳಿ ಮಾಡುವವರಲ್ಲಿ ಕೆಲವು ಜನರು `ಸಾಯಿಸಿರಿ… ಸಾಯಿಸಿರಿ’ ಎಂದು ಕಿರುಚುತ್ತಿರುವುದು ಕಾಣಿಸುತ್ತಿದೆ.