ದಾವುದಿ ಬೋಹರಾ ಮುಸಲ್ಮಾನ ಸಮಾಜದಿಂದ ಮಕ್ಕಳ ಮೊಬೈಲ್ ಬಳಕೆಯ ಮೇಲೆ ನಿಷೇಧ !

ಮುಂಬಯಿ – ಮೊಬೈಲ್ ಅತಿ ಬಳಕೆಯಿಂದ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿರುವ ಚರ್ಚೆ ಸತತ ಕೇಳಲು ಸಿಗುತ್ತದೆ. ಇದರ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರ ಮತ್ತು ಮಾನಸೋಪಚಾರ ತಜ್ಞರಿಂದ ಮೇಲಿಂದ ಮೇಲೆ ಜಾಗೃತಿ ಮೂಡಿಸಲಾಗುತ್ತದೆ. ಮಕ್ಕಳ ಮೊಬೈಲ್ ಬಳಕೆಯಿಂದಾಗುವ ದುಷ್ಪರಿಣಾಮಕ್ಕೆ ಕಡಿವಾಣ ಹಾಕಲು ದಾವುದೀ ಬೋಹರಾ ಮುಸಲ್ಮಾನ ಸಮಾಜದವರು ೧೫ ವರ್ಷದ ಕೆಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧಿಸಿದೆ. ಇದರ ಸಂದರ್ಭದಲ್ಲಿ ಜನಜಾಗೃತಿ ಮಾಡುವುದಕ್ಕಾಗಿ ಕಾರ್ಯಶಾಲೆಗಳು ಮತ್ತು ಸಭೆಗಳು ನಡೆಸಲಾಗುತ್ತಿದೆ. ಹೀಗೆ ಇತ್ತೀಚಿಗೆ ಪ್ರಸಿದ್ಧವಾಗಿರುವ ಒಂದು ವಾರ್ತೆಯಲ್ಲಿ ಹೇಳಲಾಗಿದೆ.

ಮಕ್ಕಳು ಓದುವುದು, ಮೈದಾನದಲ್ಲಿ ಆಡುವುದು ಮತ್ತು ಕುಟುಂಬದಲ್ಲಿ ಹೆಚ್ಚೆಚ್ಚು ಸಮಯ ಕಳೆಯಲು ಅವಕಾಶ ದೊರೆಯಲು ಮತ್ತು ಅದರಿಂದ ಅವರ ಮಾನಸಿಕ ವಿಕಾಸವಾಗುವುದು, ಇದು ಇದರ ಹಿಂದಿನ ಉದ್ದೇಶವಾಗಿದೆ, ಎಂದು ಈ ಸಮಾಜವು ಸ್ಪಷ್ಟಪಡಿಸಿದೆ. ಮೊಬೈಲ್ ಬಳಕೆ ಕಡಿಮೆ ಮಾಡುವ ಸಂದರ್ಭದಲ್ಲಿನ ನಿಷೇಧ ೧೫ ವರ್ಷದ ಕೆಳಗಿನ ಮಕ್ಕಳಿಗಾಗಿ ಜಾರಿ ಇರುವುದು; ಕಾರಣ ಈ ವಯಸ್ಸಿನಲ್ಲಿ ಮಕ್ಕಳಿಗೆ ಯೋಗ್ಯ ಯಾವುದು ಅಥವಾ ಅಯೋಗ್ಯ ಯಾವುದು ಇದರ ಕಲ್ಪನೆ ಇರುವುದಿಲ್ಲ, ಎಂದು ಈ ವಾರ್ತೆಯಲ್ಲಿ ನಮೂದಿಸಲಾಗಿದೆ.

ಸಂಪಾದಕೀಯ ನಿಲುವು

ಚಿಕ್ಕ ಮಕ್ಕಳಿಂದ ಮೊಬೈಲ್ ಹೆಚ್ಚು ಬಳಕೆಯ ಕುರಿತು ನಿಷೇಧ ಹೇರುವುದಕ್ಕಾಗಿ ಸರಕಾರ ಕ್ರಮ ಕೈಗೊಳ್ಳಬೇಕೆಂದು ಜಾಗರೂಕ ನಾಗರಿಕರಿಗೆ ಅನಿಸುತ್ತದೆ !