ಶ್ರೀರಾಮ ಮಂದಿರ ಸ್ಥಾಪನೆಯಾಗಿ 1 ವರ್ಷ ಪೂರ್ಣ: ಅಯೋಧ್ಯೆಯಲ್ಲಿ ಭಕ್ತರ ದಂಡು !

ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿ ಭವ್ಯವಾದ ಶ್ರೀರಾಮ ಮಂದಿರ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಪೂರ್ಣವಾಗಿದೆ. ಆ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ಅಪಾರ ಸಂಖ್ಯೆಯ ಭಕ್ತರ ಜನಜಂಗುಳಿ ಕಾಣಸಿಗುತ್ತಿದೆ. ಅದರಲ್ಲೂ ಕ್ರೈಸ್ತರ ಹೊಸ ವರ್ಷದ ಹಿನ್ನೆಲೆಯಲ್ಲಿ ಸಾಕಷ್ಟು ಜನರು ದರ್ಶನಕ್ಕೆ ಬರಲಿದ್ದಾರೆ. ಅಯೋಧ್ಯೆ ಮತ್ತು ಸುತ್ತಮುತ್ತಲಿನ ನಗರಗಳಲ್ಲಿ ವಸತಿಗಾಗಿ ಹೋಟೆಲ್‌ಗಳು ಈಗಾಗಲೇ ಭರ್ತಿಯಾಗಿವೆ. ಶ್ರೀರಾಮಜನ್ಮಭೂಮಿ ತೀರ್ಥಯಾತ್ರೆ ಟ್ರಸ್ಟ್ ಕೂಡ ದರ್ಶನದ ಗಡುವನ್ನು ವಿಸ್ತರಿಸಿದೆ. ವಿಪರೀತ ಜನಸಂದಣಿಯನ್ನು ನಿಭಾಯಿಸಲು ಉತ್ತಮ ವ್ಯವಸ್ಥೆ ಮಾಡಲಾಗಿದೆ. ಈಗ ಬೆಳಿಗ್ಗೆ 7 ರಿಂದ ರಾತ್ರಿ 10 ರವರೆಗೆ ದೇವಸ್ಥಾನದಲ್ಲಿ ದರ್ಶನವನ್ನು ಪಡೆಯಬಹುದಾಗಿದೆ.

1. ಅಯೋಧ್ಯೆಯ ಹೋಟೆಲ್ ಮಾಲೀಕರೊಬ್ಬರು, ಜನವರಿ 15ರ ವರೆಗೆ ಭಕ್ತರ ದಂಡು ಅಧಿಕವಾಗಿರುತ್ತದೆ ಎಂದು ತಿಳಿಸಿದ್ದಾರೆ.

2. ಸ್ಥಳೀಯ ಅರ್ಚಕರೊಬ್ಬರು, ಹಿಂದೂ ಹೊಸ ವರ್ಷದಂತೆ ಕ್ರೈಸ್ತರ ಹೊಸ ವರ್ಷಾಚರಣೆಯಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಹೋಗಿ ದೇವರ ಆಶೀರ್ವಾದ ಪಡೆಯುತ್ತಾರೆ ಎಂದು ತಿಳಿಸಿದರು. ಈ ವೇಳೆ ಶ್ರೀರಾಮ ಮಂದಿರ ನೋಡಲು ಸಾಕಷ್ಟು ಜನರು ಬರಲಿದ್ದಾರೆ.

3. ವಿಶೇಷವಾಗಿ ಮಂದಿರ ನ್ಯಾಸದಿಂದ ಡಿಸೆಂಬರ್ 30 ರಿಂದ ಜನವರಿ 15 ರವರೆಗೆ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ.

4. ಅಯೋಧ್ಯೆ ಪೊಲೀಸರು ದೇವಸ್ಥಾನ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಶ್ರೀರಾಮ ಮಂದಿರದಿಂದಾಗಿ ಉತ್ತರ ಪ್ರದೇಶದಲ್ಲಿ ಐತಿಹಾಸಿಕ ಜನದಟ್ಟಣೆ !

2022 ರಲ್ಲಿ, ಅಂದಾಜು 32 ಕೋಟಿ ಜನರು ಉತ್ತರ ಪ್ರದೇಶಕ್ಕೆ ಬಂದಿದ್ದರು. 2024 ರಲ್ಲಿ, ಕೇವಲ 6 ತಿಂಗಳಲ್ಲಿ 32 ಕೋಟಿಗೂ ಹೆಚ್ಚು ಜನರು ಇಲ್ಲಿಗೆ ಬಂದಿದ್ದಾರೆ. 2024ರ ಜನವರಿಯಲ್ಲಿಯೇ ಸುಮಾರು 7 ಕೋಟಿ ಜನರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ. ರಾಜ್ಯ ಸರಕಾರದ ಹೇಳಿಕೆಯಂತೆ, ಅಯೋಧ್ಯೆ ಮತ್ತು ವಾರಣಾಸಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ರಾಜ್ಯದಲ್ಲಿ ಪ್ರವಾಸೋದ್ಯಮವು ಬಹಳ ವೇಗವಾಗಿ ಬೆಳೆಯುತ್ತಿದೆ.