ಮಾರಿಯುಪೋಲ (ಉಕ್ರೇನ) ನಲ್ಲಿ ಉದ್ಯಾನಗಳು, ಮೈದಾನಗಳು ಮತ್ತು ಮನೆಯ ಅಂಗಳಗಳಲ್ಲಿ ಮೃತದೇಹಗಳನ್ನು ಹೂಳಲಾಗುತ್ತಿದೆ !

ಕೀವ (ಯುಕ್ರೇನ) – ರಷ್ಯಾದ ಆಕ್ರಮಣದಲ್ಲಿ ಉಕ್ರೇನದಲ್ಲಿಯ ಅನೇಕ ನಗರಗಳು ಧ್ವಂಸಗೊಂಡಿವೆ. ಉಕ್ರೇನ್‌ನ ಮಾರಿಯುಪೋಲನಲ್ಲಿ ಶವಗಳನ್ನು ಸ್ಮಶಾನಕ್ಕೆ ಸಾಗಿಸಲು ಕಷ್ಟವಾಗುತ್ತಿರುವುದರಿಂದ ಮೃತದೇಹಗಳನ್ನು ಉದ್ಯಾನಗಳು, ಆಟದ ಮೈದಾನಗಳು ಮತ್ತು ಮನೆಯ ಅಂಗಳಗಳಲ್ಲಿ ಹೂಳಲಾಗುತ್ತಿದೆ. ರಷ್ಯಾದ ಆಕ್ರಮಣದಿಂದಾಗಿ ಸಂವಹನ ವ್ಯತಯಗೊಂಡಿರುವದರಿಂದ ಇತರ ದೇಶಗಳಲ್ಲಿ ವಾಸಿಸುವ ಜನರು ಉಕ್ರೇನನಲ್ಲಿರುವ ತಮ್ಮ ಸಂಬಂಧಿಕರ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಉಕ್ರೇನನಲ್ಲಿ ಕೆಲಸ ಮಾಡುವ ಜನರು ಸಾವನ್ನಪ್ಪಿದವರ ಮತ್ತು ದೇಶವನ್ನು ತೊರೆದವರ ಹೆಸರುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸುತ್ತಿದ್ದಾರೆ. ಮೃತಪಟ್ಟವರ ಅನೇಕ ಸಂಬಂಧಿಕರು ಸಮಾಧಿಯ ಛಾಯಾಚಿತ್ರಗಳ ಮೂಲಕ ತಮ್ಮ ಸಂಬಂಧಿಕರ ಬಗ್ಗೆ ಮಾಹಿತಿಯನ್ನು ಪಡೆಯಬೇಕಾಗುತ್ತಿದೆ. ಪೋಲೆಂಡನಲ್ಲಿ ನಿರಾಶ್ರಿತರಾಗಿರುವ ಓಲೆನಾ ಮಕಾಯಳಿಗೆ ಅವಳ ಸಹೋದರನ ಸಾವಿನ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಿಂದ ತಿಳಿಯಿತು.

ಮಾರಿಯುಪೋಲನಲ್ಲಿರುವ ಹೆಚ್ಚಿನ ಜನರು ಹೊರಬರುವ ಇಚ್ಛೆ ಇದೆ. ಆದರೆ ಸಹಾಯವಿಲ್ಲದೆ ಹೊರಬರಲು ಸಾಧ್ಯವಾಗುತ್ತಿಲ್ಲ; ಕಾರಣ ವಾಹನ ಚಲಾಯಿಸಲು ಚಾಲಕ ಲಭ್ಯವಿಲ್ಲ. ಸ್ಥಳಾಂತರಕ್ಕಾಗಿ ಸಹಾಯ ಮಾಡುವ ಸಂಸ್ಥೆಯು ೧೦೦ ವಾಹನ ಚಾಲಕರಿಗೆ ಸಹಾಯ ಮಡುವದಕ್ಕಾಗಿ ಮನವಿ ಮಾಡಲಾಗಿತ್ತು. ಆದರೆ ವಾಸ್ತವದಲ್ಲಿ ಕೇವಲ ೩೦ ಚಾಲಕರು ಮಾತ್ರ ಅವರಿಗೆ ಲಭ್ಯವಾದರು.