Taliban Captures Pakistan Army Area : ಪಾಕಿಸ್ತಾನದ ಖೈಬರ್ ಪಖ್ತುಂಖ್ವಾದಲ್ಲಿನ ಸೇನಾ ನೆಲೆಯನ್ನು ವಶಪಡಿಸಿಕೊಂಡ ತಾಲಿಬಾನ್

ಇಸ್ಲಾಮಾಬಾದ (ಪಾಕಿಸ್ತಾನ) – ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಪ್ರಾರಂಭವಾಗಿದ್ದು, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಈ ಸಂಘಟನೆಯು ಪಾಕಿಸ್ತಾನದ ಖೈಬರ್ ಪಖ್ತುಂತ್ವಾದ ಬಜೌರ್ ಜಿಲ್ಲೆಯ ಸಾಲಾರಜಯಿ ಪ್ರದೇಶದಲ್ಲಿ ಪಾಕಿಸ್ತಾನದ ಸೇನಾ ನೆಲೆಯ ಮೇಲೆ ನಿಯಂತ್ರಣ ಸಾಧಿಸಿದೆ.  ಈ ಸಂದರ್ಭದ ವಿಡಿಯೋವನ್ನು ಟಿಟಿಪಿ ಪ್ರಸಾರ ಮಾಡಿದೆ. ವಿಶೇಷವೆಂದರೆ, ಈ ವರದಿಯನ್ನು ಪಾಕಿಸ್ತಾನವೂ ದೃಢಪಡಿಸಿದೆ.

ಪಾಕಿಸ್ತಾನಿ ಮಾಧ್ಯಮಗಳು ಹಿರಿಯ ರಕ್ಷಣಾ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸುತ್ತಾ, ಸೇನಾ ನೆಲೆಯನ್ನು ಟಿಟಿಪಿ ದಾಳಿಗೂ ಮುನ್ನ ತೆರವುಗೊಳಿಸಲಾಗಿತ್ತು.  ಇಲ್ಲಿನ ಯೋಧರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು’, ಎಂದು ವರದಿ ಮಾಡಿವೆ. ಅದೇ ರೀತಿ ಉತ್ತರ ಮತ್ತು ದಕ್ಷಿಣ ವಜೀರಿಸ್ತಾನದ ಕೆಲವು ಸೇನಾ ನೆಲೆಗಳನ್ನು ತೆರವುಗೊಳಿಸಲಾಗಿದ್ದು, ಯೋಧರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.