ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ಜುಲೈ ಮತ್ತು ಆಗಸ್ಟ್ 2024 ರಲ್ಲಿ ನಡೆದ ವಿದ್ಯಾರ್ಥಿ ಆಂದೋಲನದ ಬಗ್ಗೆ ಬಾಂಗ್ಲಾದೇಶದ ಮಧ್ಯಂತರ ಸರಕಾರವು 1972 ರ ಸಂವಿಧಾನವನ್ನು ಪ್ರಶ್ನಿಸುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ಈ ಕುರಿತು ಮಧ್ಯಂತರ ಸರಕಾರದ ಮುಖ್ಯ ಸಲಹೆಗಾರರ ಮಾಧ್ಯಮ ಸಚಿವ ಶಫಿಕುಲ್ ಆಲಂ ಇವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯದಲ್ಲಿ ಮಾಹಿತಿ ನೀಡಿದರು. ಬಾಂಗ್ಲಾದೇಶದ ಸಂವಿಧಾನವನ್ನು ಬದಲಾಯಿಸಿ ಹೊಸ ಸಂವಿಧಾನವನ್ನು ಮಾಡಬೇಕೆಂಬ ಬೇಡಿಕೆ ಇದೆ. ಆ ದೃಷ್ಟಿಯಿಂದ ಈ ಪ್ರಣಾಳಿಕೆಯನ್ನು ನೋಡಲಾಗುತ್ತಿದೆ’, ಎಂದು ಹೇಳಿದರು.
ಸರಕಾರದ ಮುಖ್ಯ ಸಲಹೆಗಾರ ಮಹಮ್ಮದ ಯೂನಸ್ ಅವರ ಅಧಿಕೃತ ನಿವಾಸದ ಹೊರಗೆ ಶಫೀಕುಲ ಆಲಂ ಅವರು ಮಾತನಾಡಿ, ವಿದ್ಯಾರ್ಥಿಗಳು, ರಾಜಕೀಯ ಪಕ್ಷಗಳು ಮತ್ತು ದಂಗೆಯಲ್ಲಿ ಭಾಗವಹಿಸಿದ್ದ ಮಿತ್ರಪಕ್ಷಗಳ ಸೂಚನೆಯ ಮೇರೆಗೆ ಪ್ರಣಾಳಿಕೆಯನ್ನು ಸಿದ್ಧ ಪಡಿಸಲಾಗುವುದು, ಸಾರ್ವಜನಿಕ ಏಕತೆ, ಸರ್ವಾಧಿಕಾರಿ ವಿರೋಧಿ ಭಾವನೆ ಮತ್ತು ರಾಜ್ಯದ ಸುಧಾರಣೆಯ ಬಯಕೆಯನ್ನು ಬಲಪಡಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’, ಎಂದು ಹೇಳಿದರು.