ಜನವರಿಯ ಮೊದಲ ವಾರದಲ್ಲಿ ಮಹಾಕುಂಭ ಮೇಳದ ಸಿದ್ಧತೆ ಪೂರ್ಣಗೊಳ್ಳುವುದು ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಕುಂಭಕ್ಷೇತ್ರದಲ್ಲಿ ೭ ಸಾವಿರ ಸಂಸ್ಥೆಗಳ ಆಗಮನ

ಗಂಗಾಪೂಜೆ ಮಾಡುತ್ತಿರುವಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಪ್ರಯಾಗರಾಜ (ಉತ್ತರಪ್ರದೇಶ) – ಜನವರಿಯ ಮೊದಲ ವಾರದಲ್ಲಿ ಮಹಾಕುಂಭ ಮೇಳದ ಎಲ್ಲಾ ಸಿದ್ಧತೆ ಪೂರ್ಣಗೊಳ್ಳುವುದು, ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರು ವಿಶ್ವಾಸ ವ್ಯಕ್ತಪಡಿಸಿದರು. ಅವರು ಇಲ್ಲಿ ಮಹಾಕುಂಭ ಮೇಳದ ಸಿದ್ಧತೆಯ ವರದಿ ಪಡೆಯಲು ಡಿಸೆಂಬರ್ ೩೧ ರಂದು ಪ್ರಯಾಗರಾಜದ ಸಂಗಮ ಕ್ಷೇತ್ರಕ್ಕೆ ಬಂದಿದ್ದರು. ಅದರ ನಂತರ ಅವರು ಪತ್ರಕರ್ತರ ಜೊತೆಗೆ ಮಾತನಾಡುತ್ತಿದ್ದರು.

ಮುಖ್ಯಮಂತ್ರಿಗಳು ಮಾತು ಮುಂದುವರೆಸುತ್ತಾ, ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ ಪ್ರಯಾಗರಾಜದಲ್ಲಿ ೨೦೦ ಕ್ಕೂ ಹೆಚ್ಚಿನ ಸಣ್ಣಪುಟ್ಟ ರಸ್ತೆಗಳ ಅಗಲೀಕರಣ ಮಾಡಲಾಗಿದೆ. ೧೪ ಸೇತುವೆಗಳಲ್ಲಿ ೧೩ ಸೇತುವೆಗಳು ಪೂರ್ಣಗೊಂಡಿವೆ. ೫ ಸಾವಿರ ಎಕರೆ ಜಾಗದಲ್ಲಿ ವಾಹನದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ನದಿಯಿಂದ ಹೋಗಿ ಬರಲು ಈ ವರ್ಷ ೩೦ ‘ಪಂಟೂನ ಸೇತುವೆ’ ಕಟ್ಟಲಾಗಿದ್ದು ಅದರಲ್ಲಿನ ೨೮ ಸೇತುವೆಗಳು ಸಿದ್ಧವಾಗಿದೆ. ಉಳಿದಿರುವ ೨ ಸೇತುವೆಗಳು ೩-೪ ದಿನಗಳಲ್ಲಿ ಕಟ್ಟಿ ಸಿದ್ದಗೋಳ್ಳುವುದು. ಸ್ನಾನಕ್ಕಾಗಿ ೧೨ ಕಿಲೋಮೀಟರ್ ಪರಿಸರದಲ್ಲಿ ತಾತ್ಕಾಲಿಕ ಘಟ್ಟಗಳು ಕಟ್ಟಲಾಗಿದೆ. ಅರೈಲ ಇಲ್ಲಿ ಶಾಶ್ವತ ಘಟ್ಟಗಳ ಕಾರ್ಯ ಬರುವ ೨-೩ ದಿನದಲ್ಲಿ ಪೂರ್ಣವಾಗುವುದು. ‘ಚಕರ್ಡ ಪ್ಲೇಟ್’ (ಮರಳಿನಲ್ಲಿ ವಾಹನಗಳು ಜಾರಬಾರದು ಅಥವಾ ಪಾದಚಾರಿಗಳಿಗೆ ಮರಳಿನಲ್ಲಿ ನಡೆಯಲು ಸಾಧ್ಯವಾಗಬೇಕು, ಅದಕ್ಕಾಗಿ ಅಳವಡಿಸಿರುವ ದೊಡ್ಡ ದೊಡ್ಡ ಕಬ್ಬಿಣದ ಪಟ್ಟಿಗಳು) ಅಳವಡಿಸಲಾಗಿವೆ. ಇದರ ಜೊತೆಗೆ ಅಲ್ಲಲ್ಲಿಯೇ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಕುಂಭ ಕ್ಷೇತ್ರಕ್ಕೆ ಇಲ್ಲಿಯವರೆಗೆ ೭ ಸಾವಿರ ಸಂಸ್ಥೆಗಳು ಬಂದಿವೆ. ಸುಮಾರು ಒಂದುವರೆ ಲಕ್ಷ ಟೆಂಟ್ ಗಳು ನಿರ್ಮಿಸಲಾಗಿವೆ.

ಬಡೆ ಹನುಮಾನ್ (ಲೇಟೆ ಹುವೆ ಹನುಮಾನ) ಇವರ ಪೂಜೆ ಮಾಡುವಾಗ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ

ಸಂತರು ಮತ್ತು ಭಕ್ತರ ಮೇಲೆ ಸರಕಾರದಿಂದ ಪುಷ್ಪವೃಷ್ಠಿ !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತು ಮುಂದುವರೆಸುತ್ತಾ, ಮಹಾಕುಂಭ ಮೇಳದ ಬಗ್ಗೆ ಜನರಲ್ಲಿ ಉತ್ಸಾಹವಿದೆ. ಜನವರಿಯ ಮೊದಲ ವಾರದಲ್ಲಿ ಸಂಪೂರ್ಣ ಸಿದ್ಧತೆ ಪೂರ್ಣಗೊಳ್ಳುವುದು. ಪೌಷ ಪೂರ್ಣಿಮೆ ಎಂದರೆ ಜನವರಿ ೧೩, ೨೦೨೫ ರಂದು, ಮೊದಲು ಸ್ನಾನ ನೆರವೇರುವುದು. ಎರಡನೆಯ ಸ್ನಾನ ಜನವರಿ ೧೪, ಹಾಗೂ ಮೂರನೆಯ ಸ್ನಾನ ಮೌನಿ ಅಮಾವಾಸ್ಯೆ, ಎಂದರೆ ಜನವರಿ ೨೯ ರಂದು ನಡೆಯುವುದು. ಅದರ ನಂತರ ಫೆಬ್ರುವರಿ ೩, ೧೨ ಮತ್ತು ೨೬ ರಂದು ಕೂಡ ಪ್ರಮುಖ ಸ್ನಾನ ಇರುವುದು. ಜನವರಿ ೨೯ ರ ಸ್ನಾನದ ದಿನದಂದು ಬೆಳಿಗ್ಗೆ ೬ ರಿಂದ ೮ ಕ್ಕೆ ಕೋಟಿಗಟ್ಟಲೆ ಭಕ್ತರು ಬರುವ ಅಂದಾಜು ಇದೆ. ಪ್ರಮುಖ ಸ್ನಾನದ ದಿನದಂದು ಸರಕಾರದಿಂದ ಸಂತರು ಮತ್ತು ಭಕ್ತರ ಮೇಲೆ ಪುಷ್ಪವೃಷ್ಟಿ ಮಾಡಲಾಗುವುದು’, ಎಂದು ಹೇಳಿದ್ದಾರೆ.