‘ಹಿಂದೂ’ ಎಂದು ಹೇಳಿಕೊಂಡು ಮುಸಲ್ಮಾನ ವ್ಯಕ್ತಿಯಿಂದ ಹಿಂದೂ ವಿಧವೆ ಮಹಿಳೆಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಲೈಂಗಿಕ ದೌರ್ಜನ್ಯ

‘ಈ ಹಿಂದೂ ಮಹಿಳೆಯ ಹಣೆಯ ಮೇಲೆ ಕುಂಕುಮ ಹಚ್ಚಿದ; ಅಂದರೆ ಆಕೆಯೊಂದಿಗೆ ವಿವಾಹವಾಗಿದೆ’, ಎಂದು ಭ್ರಮೆಗೊಳಪಡಿಸಲು ಈ ಮತಾಂಧ ಯುವಕನಿಂದ ಪ್ರಯತ್ನವಾಗುತ್ತಿತ್ತು. ಅನಂತರ ಆತ ಆಕೆಯ ಮೇಲೆ ಮತಾಂತರವಾಗಲು ಒತ್ತಡವನ್ನು ಹಾಕಿದ. ಆಕೆಯ ಲೈಂಗಿಕ ಅತ್ಯಾಚಾರವನ್ನೂ ಮಾಡಿದ.

‘ಗಂಗಾಜಲ’ದಿಂದ ಕೊರೊನಾ ಸೋಂಕಿಗೆ ಉಪಚರಿಸಲು ಮಾನ್ಯತೆ ನೀಡಿರಿ!- ಅಲಹಾಬಾದ ಉಚ್ಚ ನ್ಯಾಯಾಲಯದಲ್ಲಿ ಮನವಿ.

ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನ್ಯೂರೋಲಜಿ ವಿಭಾಗದ ಪ್ರಾಧ್ಯಾಪಕ ವಿಜಯ ನಾಥ ಮಿಶ್ರಾ ಇವರು ಮಾತನಾಡುತ್ತಾ, ವರ್ಷ ೧೮೯೬ ರಲ್ಲಿ ಕಾಲರಾ ಮಹಾಮಾರಿಯ ಸಮಯದಲ್ಲಿ ಡಾ. ಹ್ಯಾಕಿಂಗ ಇವರು ಒಂದು ಸಂಶೋಧನೆಯನ್ನು ನಡೆಸಿದ್ದರು. ಅದರಲ್ಲಿ ಗಂಗಾನದಿಯ ನೀರನ್ನು ಕುಡಿಯುವ ಜನರಿಗೆ ಕಾಲರಾ ಬರುವುದಿಲ್ಲ ಎಂದು ಕಂಡು ಬಂದಿತ್ತು.

ಅನುಕಂಪದ ತತ್ತ್ವದ ಆಧಾರದ ಮೇಲೆ ನೌಕರಿ ನೀಡಲು ಸಂಬಂಧಪಟ್ಟ ವ್ಯಕ್ತಿ ಅಪ್ರಾಪ್ತನಾಗಿದ್ದರೆ ಆತ ದೊಡ್ಡವನಾಗುವ ತನಕ ಕಾಯುವ ಅವಶ್ಯಕತೆ ಇಲ್ಲ !

ನೌಕರರು ತೀರಿಕೊಂಡಾಗ ಅವರ ಕುಟುಂಬವು ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ ಮತ್ತು ಅದೇ ಅನುಕಂಪದ ಏಕೈಕ ಆಧಾರವಾಗಿದೆ, ಎಂದು ಅಲಾಹಾಬಾದ ಉಚ್ಚ ನ್ಯಾಯಾಲಯದ ಲಖನೌ ಖಂಡಪೀಠವು ಒಂದು ಅರ್ಜಿಯ ಆಲಿಕೆಯನ್ನು ನಡೆಸುತ್ತಿರುವಾಗ ಈ ತೀರ್ಪನ್ನು ನೀಡಿದೆ.

ಭಾರತೀಯ ನಕಾಶೆಯಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖಅನ್ನು ಬೇರ್ಪಡಿಸಿದ ಟ್ವಿಟರ್‌ ವಿರುದ್ಧ ದೂರು ದಾಖಲು

ಭಾರತದ ನಕಾಶೆಯಿಂದ ಜಮ್ಮು-ಕಾಶ್ಮೀರ ಮತ್ತು ಲಡಾಖನ್ನು ಬೇರ್ಪಡಿಸಿದ ಟ್ವಿಟರ್‌ ವಿರುದ್ಧ ಸ್ಥಳೀಯ ಬಜರಂಗ ದಳದ ನಾಯಕರು ಪೊಲೀಸರಲ್ಲಿ ದೂರನ್ನು ನೀಡಿದ ನಂತರ ಟ್ವಿಟರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮನೀಷ ಮಾಹೇಶ್ವರಿಯವರ ಮೇಲೆ ದೂರು ದಾಖಲಿಸಲಾಗಿದೆ.

ಮೆರಠ(ಉತ್ತರಪ್ರದೇಶ)ನಲ್ಲಿ ಓರ್ವ ಸಾಧುವನ್ನು ಕಲ್ಲಿನಿಂದ ಜಜ್ಜಿ ಹತ್ಯೆ

ಉತ್ತರಪ್ರದೇಶದಲ್ಲಿ ನಿರಂತರವಾಗಿ ಸಾಧು, ಮಹಂತ ಮುಂತಾದವರ ಹತ್ಯೆಯಾಗುತ್ತಿರುವ ಅನೇಕ ಘಟನೆಗಳು ನಡೆಯುತ್ತಿವೆ. ಇದನ್ನು ತಡೆಯಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ರಾಷ್ಟ್ರಪತಿಯ ರೈಲಿನ ಕಾರಣ ಸಂಚಾರ-ಸಾರಿಗೆಯನ್ನು ನಿಲ್ಲಿಸಿದ್ದರಿಂದ ಆಸ್ಪತ್ರೆಗೆ ತಲುಪಲು ಆಗದೇ ಅನಾರೋಗ್ಯ ಮಹಿಳೆಯ ಮೃತ್ಯು

ಈ ಮಾಹಿತಿಯು ಇಲ್ಲಿಯ ಪ್ರವಾಸಿ ಮಂದಿರದಲ್ಲಿ ತಂಗಿದ್ದ ರಾಷ್ಟ್ರಪತಿಯವರ ಪತ್ನಿಗೆ ತಿಳಿದನಂತರ ಅವರು ಅದನ್ನು ರಾಷ್ಟ್ರಪತಿಗೆ ತಿಳಿಸಿದರು. ಇದಕ್ಕೆ ರಾಷ್ಟ್ರಪತಿಯು ಕಾನಪುರದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಆಯುಕ್ತರನ್ನು ಕೂಡಲೇ ಮಿಶ್ರಾ ಇವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವಾನ ತಿಳಿಸಲು ಹೇಳಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಪೊಲೀಸ್ ಅಧಿಕಾರಿ ಸಹಿತ ೪ ಸಂಹಾರಿ ನಿರೀಕ್ಷಕರನ್ನು ಅಮಾನತುಗೊಳಿಸಲಾಗಿದೆ.

ಮೂರನೇ ಮದುವೆಗಾಗಿ ಪ್ರಯತ್ನಿಸುತ್ತಿದ್ದ ೭೭ ವರ್ಷದ ಮೌಲ್ವಿಯಾಗಿರುವ ಪತಿಯನ್ನು ಹತ್ಯೆಗೈದ ಪತ್ನಿ !

ಲ್ಲಿಯ ಶಿಕಾರಪುರ ಗ್ರಾಮದಲ್ಲಿ ೭೭ ವರ್ಷದ ಓರ್ವ ಮೌಲ್ವಿ(ಇಸ್ಲಾಂ ಧರ್ಮದ ನಾಯಕ)ಯು ಮೂರನೇ ಮದುವೆಗಾಗಿ ಪ್ರಯತ್ನಿಸುತ್ತಿದ್ದ. ಇದಕ್ಕೆ ಆಕ್ರೋಶಗೊಂಡ ಮೊದಲನೇ ಹೆಂಡತಿಯು ಮೌಲ್ವಿಯು ಮಲಗಿರುವಾಗ ಆತನ ಮರ್ಮಾಂಗಕ್ಕೆ ಚಾಕುವಿನಿಂದ ಹಲ್ಲೆ ಮಾಡಿ ಗಂಭೀರವಾಗಿ ಗಾಯಗೊಳಿಸಿದುದರಿಂದ ಆತ ಸಾವನ್ನಪ್ಪಿರುವ ಘಟನೆಯು ನಡೆದಿದೆ.

ಮತಾಂಧ ಯುವಕನು ತಾನು ‘ಹಿಂದೂ’ ಎಂದು ಪರಿಚಯಿಸಿಕೊಂಡು ವಿವಾಹ ವಿಚ್ಛೇದಿತ ಹಿಂದೂ ಮಹಿಳೆಯೊಂದಿಗೆ ವಿವಾಹವಾದ ಬಳಿಕ ಮತಾಂತರಕ್ಕೆ ಒತ್ತಾಯ!

ಇಂತಹ ಘಟನೆಗಳನ್ನು ತಡೆಯಲು ತ್ವರಿತ ಗತಿಯ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಜರುಗಿಸಿ ಮತಾಂಧರಿಗೆ ಆಜನ್ಮ ಕಾರಾಗೃಹದಂತಹ ಕಠಿಣ ಶಿಕ್ಷೆಯಾಗುವಂತೆ ಕೇಂದ್ರ ಸರಕಾರವು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.

ಶ್ರೀಕೃಷ್ಣಜನ್ಮಭೂಮಿಯ ಮೇಲೆ ಕಟ್ಟಿರುವ ಮಸೀದಿಗೆ ಮಥುರಾದಲ್ಲಿ ಒಂದುವರೆ ಪಟ್ಟು ಹೆಚ್ಚು ಪರ್ಯಾಯ ಭೂಮಿ ನೀಡುವುದಾಗಿ ಹಿಂದೂಗಳಿಂದ ಪ್ರಸ್ತಾಪ !

ಶ್ರೀಕೃಷ್ಣಜನ್ಮಭೂಮಿಯ ೧೩.೩೭ ಎಕರೆ ಭೂಮಿಯ ಮೇಲಿನ ಮಸೀದಿಗೆ ಪರ್ಯಾಯ ಸ್ಥಳವನ್ನು ನೀಡಲು ನಾವು ಸಿದ್ಧರಿದ್ದೇವೆ, ಎಂಬ ಪ್ರಸಾಪವನ್ನು ಅರ್ಜಿದಾರ ಮತ್ತು ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ಆಂದೋಲನ ಸಮಿತಿಯ ಅಧ್ಯಕ್ಷ ಮಹೇಂದ್ರ ಪ್ರತಾಪ ಸಿಂಹ ಇವರು ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ.

ಮೈನ್‍ಪುರಿ (ಉತ್ತರಪ್ರದೇಶ)ಯಲ್ಲಿ ೨ ದ್ವಿಚಕ್ರ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ೧ ಕ್ವಿಂಟಾಲ್ ಗೋಮಾಂಸ ಜಪ್ತಿ

ಇಲ್ಲಿನ ಗ್ರಾಮಸ್ಥರು ಕುರಿ ಕಳ್ಳರನ್ನು ಹುಡುಕುತ್ತಿರುವಾಗ ೨ ದ್ವಿಚಕ್ರವಾಹನದಲ್ಲಿ ಬರುತ್ತಿರುವವರನ್ನು ತಡೆದರು ಆಗ ವಾಹನ ಚಾಲಕರು ವಾಹನವನ್ನು ಬಿಟ್ಟು ಪರಾರಿಯಾದರು. ಈ ದ್ವಿಚಕ್ರವಾಹನದಲ್ಲಿದ್ದ ಗೋಣಿ ಚೀಲದಲ್ಲಿ ಗೋಮಾಂಸ ಇರುವುದು ಕಂಡುಬಂತು.