ಮಥುರೆಯ ಶ್ರೀಕೃಷ್ಣ ಜನ್ಮಸ್ಥಾಳದ ಸುತ್ತಲಿನ 10 ಚದರ ಕಿಲೋಮೀಟರ ಪರಿಧಿಯ ಜಾಗಕ್ಕೆ ‘ತೀರ್ಥಕ್ಷೇತ್ರ’ ಎಂದು ಘೋಷಣೆ !

ಮಾಂಸ ಮತ್ತು ಮದ್ಯ ಮಾರಾಟಕ್ಕೆ ನಿಷೇಧ

ಮಥುರ(ಉತ್ತರ ಪ್ರದೇಶ) – ಉತ್ತರಪ್ರದೇಶ ಸರಕಾರವು ಇಲ್ಲಿಯ ಶ್ರೀಕೃಷ್ಣಜನ್ಮಸ್ಥಳದ 10 ಚದರ ಕಿಲೋಮೀಟರ್ ಪರಿಧಿಯನ್ನು ‘ತೀರ್ಥಕ್ಷೇತ್ರ’ ಎಂದು ಘೋಷಿಸಿದೆ. ಈ ಪ್ರದೇಶದಲ್ಲಿ 22 ನಗರಪಾಲಿಕೆ ಒಳಗೊಂಡಿರುವ ಕ್ಷೇತ್ರಗಳಿವೆ. ಅವು ‘ತೀರ್ಥಕ್ಷೇತ್ರ’ ಎಂದು ಘೋಷಿಸಲಾಗಿದೆ. ಆದ್ದರಿಂದ ಈ ಸ್ಥಳಗಳಲ್ಲಿ ಇನ್ನು ಮಾಂಸ ಮತ್ತು ಮದ್ಯ ಮಾರಾಟದ ಮೇಲೆ ನಿಷೇಧ ಹೇರಲಾಗಿದೆ.