ಉತ್ತರಪ್ರದೇಶದಲ್ಲಿನ ‘ಸುಲ್ತಾನಪುರ’ ಜಿಲ್ಲೆಯ ಹೆಸರನ್ನು ಬದಲಿಸಿ ‘ಕುಶ ಭವನಪುರ’ ಮಾಡುವಂತೆ ಪ್ರಸ್ತಾಪ

ಕೇಂದ್ರ ಸರಕಾರವೇ ದೇಶದಲ್ಲಿನ ಗುಲಾಮಗಿರಿಯ ಸಂಕೇತವಾಗಿರುವ ಎಲ್ಲಾ ಹೆಸರುಗಳನ್ನು ಬದಲಿಸುವ ಆದೇಶ ಹೊರಡಿಸಬೇಕು, ಎಂಬುದೇ ಹಿಂದೂಗಳ ಅಪೇಕ್ಷೆ ! – ಸಂಪಾದಕರು 

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶ ಕಂದಾಯ ಮಂಡಳಿಯ ವತಿಯಿಂದ ರಾಜ್ಯದ ಸುಲ್ತಾನಪುರ ಜಿಲ್ಲೆಯ ಹೆಸರನ್ನು ಬದಲಿಸಿ ಶ್ರೀರಾಮರ ಪುತ್ರ ಕುಶ ಇವರ ಹೆಸರಿನಲ್ಲಿ ‘ಕುಶ ಭವನಪುರ’ ಎಂದು ಬದಲಿಸಬೇಕು ಎಂಬ ಪ್ರಸ್ತಾಪವನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ. ಇದರ ಬಗ್ಗೆ ಮಂತ್ರಿಮಂಡಲದ ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ. 13 ನೆಯ ಶತಮಾನದಲ್ಲಿ ಈ ಜಿಲ್ಲೆಯ ಹೆಸರು ‘ಕುಶ ಪವನಪುರ’ ಆಗಿತ್ತು. ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣದ ನಂತರ ಇದರ ಹೆಸರನ್ನು ‘ಸುಲ್ತಾನಪುರ’ ಎಂದು ಮಾಡಲಾಯಿತು. (ಸ್ವಾತಂತ್ರ್ಯದ 74 ವರ್ಷದ ನಂತರ ಗುಲಾಮಗಿರಿಯ ಸಂಕೇತವಾಗಿರುವ ಹೆಸರನ್ನು ಯಾಕೆ ಬದಲಾಯಿಸಲಿಲ್ಲ, ಎಂದು ಈ ವರೆಗಿನ ಆಡಳಿತಗಾರರು ಉತ್ತರಿಸಬೇಕು ! – ಸಂಪಾದಕರು)