ಉತ್ತರಪ್ರದೇಶದಲ್ಲಿ ಮತಾಂತರದ ಪ್ರಕರಣದಲ್ಲಿ ಬಂಧಿಸಲಾಗಿರುವ ಎಂಟು ಜನ ಮತಾಂಧರ ಮೇಲೆ ಭಾರತದ ವಿರುದ್ಧ ಯುದ್ಧ ಸಾರಿರುವ ಆರೋಪ

ಇಂತಹವರಿಗೆ ಗಲ್ಲು ಶಿಕ್ಷೆಯಾಗಲು ಉತ್ತರಪ್ರದೇಶ ಸರಕಾರವು ಪ್ರಯತ್ನಿಸಬೇಕು ! – ಸಂಪಾದಕರು

ಲಕ್ಷ್ಮಣಪುರಿ (ಉತ್ತರಪ್ರದೇಶ) – ರಾಜ್ಯದ ಮತಾಂತರ ಪ್ರಕರಣದಲ್ಲಿ ಬಂಧಿಸಿರುವ ಎಂಟು ಜನ ಮತಾಂಧರ ಮೇಲೆ ಭಾರತ ವಿರುದ್ಧ ಯುದ್ಧ ಸಾರಿರುವ ಆರೋಪ ಹೊರಿಸಲಾಗಿದೆ. ಈ ಮತಾಂಧರನ್ನು ಭಯೋತ್ಪಾದನೆ ನಿಗ್ರಹ ದಳವು ಬಂಧಿಸಿದೆ. ಮಹಮ್ಮದ ಉಮರ ಗೌತಮ, ಮುಫ್ತಿ ಕಾಜಿ ಜಹಾಗೀರ ಆಲಮ ಕಾಸಮಿ, ಸಲಾಹುದ್ದೀನ ಜೇನುದ್ದೀನ ಶೇಖ, ಇರ್ಫಾನ್ ಶೇಖ ಅಲಿಯಾಸ್ ಇರ್ಫಾನ್ ಖಾನ್, ಡಾ. ಫರಾಜ, ಎಡಂ, ಅರಸಲನ ಮತ್ತು ಕೌಸರ್ ಆಲಂ ಎಂಬುದು ಈ ಮತಾಂಧರ ಹೆಸರುಗಳಾಗಿವೆ. ಜೂನ ತಿಂಗಳಲ್ಲಿ ಮಹಮ್ಮದ್ ಉಮರ ಗೌತಮ ಮತ್ತು ಮುಫ್ತಿ ಕಾಜಿ ಜಹಾಗೀರ ಆಲಂ ಕಾಸ್ಮಿ, ಈ ಮೌಲ್ವಿಗಳನ್ನು (ಇಸ್ಲಾಮೀ ಧಾರ್ಮಿಕ ನಾಯಕರು) ದೆಹಲಿಯಲ್ಲಿ ಬಂಧಿಸಲಾಗಿತ್ತು. ಸಾವಿರಾರು ಜನರ ಮತಾಂತರದಲ್ಲಿ ಅವರ ಕೈವಾಡವಿರುವುದು ಮತ್ತು ಇದೊಂದು ದೊಡ್ಡ ಜಾಲವಾಗಿದೆ ಎಂಬ ಮಾಹಿತಿಯು ಭಯೋತ್ಪಾದನಾ ನಿಗ್ರಹ ದಳದ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.