ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಆನ್‌ಲೈನ್ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ’ ಶಿಬಿರ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಧಾರವಾಡ ಜಿಲ್ಲೆಯಲ್ಲಿ ‘ಆನ್‌ಲೈನ್ ಮೂಲಕ ಧರ್ಮಪ್ರೇಮಿಗಳಿಗೆ ಮತ್ತು ಹಿಂದುತ್ವನಿಷ್ಠರಿಗೆ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯ ಕು. ಶಿಲ್ಪಾ ಗೌಡರ ಶಿಬಿರದ ಸೂತ್ರ ಸಂಚಲನೆಯನ್ನು ಮಾಡಿದರು.

ಮಡಿಕೇರಿಯಲ್ಲಿ ಯುವತಿಯ ಹೆಸರಿನಲ್ಲಿ ಫೇಸ್‍ಬುಕ್‍ನಿಂದ ಓರ್ವ ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ ಮತಾಂಧನಿಗೆ ಥಳಿತ !

ಮಡಿಕೇರಿ ಸಮೀಪದ ಹಾಕತ್ತೂರಿನ ಅಶ್ರಫ್ ಎಂಬ ಯುವಕ ಕಳೆದ ೧೫ ದಿನಗಳಿಂದ ಯುವತಿಯ ಹೆಸರಿನಿಂದ ಒಬ್ಬ ಮಹಿಳೆಯೊಂದಿಗೆ ಅಶ್ಲೀಲ ಸಂಭಾಷಣೆ(ಚಾಟಿಂಗ್) ಮಾಡುತ್ತಿದ್ದ. ತನ್ನ ಹೆಸರು ‘ಅರುಣಾ’ ಎಂದು ಹೇಳಿಕೊಂಡಿದ್ದ ಮತಾಂಧನನ್ನು ಉಪಾಯದಿಂದ ಮಡಿಕೇರಿಗೆ ಕರೆಸಲಾಯಿತು. ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಯುವಕನನ್ನು ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಲಾಗಿದೆ.

ಬೆಂಗಳೂರಿನ ಗಲಭೆಕೋರರಿಗೆ ಕರ್ನಾಟಕ ಉಚ್ಚನ್ಯಾಯಾಲಯದಿಂದ ಜಾಮೀನು

ಕಳೆದ ವರ್ಷ ಆಗಸ್ಟ್‍ನಲ್ಲಿ ನಗರದ ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಪ್ರದೇಶದಲ್ಲಿ ಮತಾಂಧರು ನಡೆಸಿದ ಗಲಭೆಗೆ ಸಂಬಂಧಿಸಿದಂತೆ ಬಂಧಿತರಾದ ಗಲಭೆಕೋರರಿಗೆ ಕರ್ನಾಟಕ ಉಚ್ಚನ್ಯಾಯಾಲಯವು ಜಾಮೀನು ನೀಡಿದೆ. ಚಾರ್ಜ್‍ಶೀಟ್‍ಅನ್ನು ಸಲ್ಲಿಸಲು ವಿಳಂಬ ಮಾಡಿದ್ದಕ್ಕಾಗಿ ಗಲಭೆಕೋರರಿಗೆ ನ್ಯಾಯಾಲಯವು ಜಾಮೀನು ನೀಡಿತು.

ಹಣ ಮತ್ತು ರಾಜಕೀಯ ಬೆಂಬಲದಿಂದ ಅತ್ಯಾಚಾರದ ಆರೋಪ ಹೊತ್ತಿದ್ದ ಮಾಜಿ ಬಿಷಪ್ ಫ್ರಾಂಕೊ ಮುಲಕ್ಕಲ್ ಕಾನೂನುಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದ !

ಅತ್ಯಾಚಾರದ ಆರೋಪವಿರುವ ಮಾಜಿ ಬಿಶಪ್ ಫ್ರಾಂಕೊ ಮುಲಕ್ಕಲ್ ಅವರು ಹಣ ಮತ್ತು ರಾಜಕೀಯ ಬೆಂಬಲವಿದ್ದ ಕಾರಣ ಕಾನೂನುಕ್ರಮದಿಂದ ತಪ್ಪಿಸಿಕೊಳ್ಳುತ್ತಿದ್ದರು. ಆತನಿಂದ ಆಗಿದ್ದ ಅತ್ಯಾಚಾರದ ಆರೋಪಗಳು ಹೊರಬಿದ್ದ ನಂತರವೂ ಅವರನ್ನು ಬಂಧಿಸಲಾಗಿಲ್ಲ ಎಂದು ಕರ್ನಾಟಕ ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮೈಕೆಲ್ ಫ್ರಾನ್ಸಿಸ್ ಸಾಲಢಾಣಾ ಅವರು ಹೇಳಿದ್ದಾರೆ.

ತಬಲಿಗಿ ಜಮಾತ ಪ್ರಕರಣದಲ್ಲಿ ೩ ವಾರ್ತಾ ವಾಹಿನಿಗಳಿಗೆ ದಂಡ ಮತ್ತು ವೀಕ್ಷಕರಲ್ಲಿ ಕ್ಷಮೆಯಾಚಿಸಲು ‘ನ್ಯೂಸ್ ಬ್ರಾಡ್ ಕಾಸ್ಟಿಂಗ್ ಸ್ಟ್ಯಾಂಡಡ್ರ್ಸ್ ಆಥಾರಿಟಿ’ಯ ಆದೇಶ

ಈ ಸಂದರ್ಭದಲ್ಲಿ ಎನ್.ಬಿ.ಎಸ್.ಎ.ಯು ಒಂದು ವಾರ್ತಾ ವಾಹಿನಿಗೆ ೧ ಲಕ್ಷ ರೂಪಾಯಿ ಮತ್ತು ಇನ್ನೊಂದು ಪ್ರಾದೇಶಿಕ ವಾರ್ತಾ ವಾಹಿನಿಗೆ ೫೦ ಸಾವಿರ ರೂಪಾಯಿ ದಂಡದ ಜೊತೆಗೆ, ಜೂನ್ ೨೩ ರಂದು ರಾತ್ರಿ ೯ ಗಂಟೆಗೆ ಪ್ರಸಾರವಾಗಲಿರುವ ಸುದ್ದಿಪತ್ರದ ಮೊದಲು ಪ್ರೇಕ್ಷಕರಲ್ಲಿ ಕ್ಷಮೆಯಾಚಿಸುವಂತೆ ವಾರ್ತಾವಾಹಿನಿಗೆ ಸೂಚನೆ ನೀಡಿದೆ.

ಹಿಂದೂ ದೇವಾಲಯಗಳ ಪರಂಪರೆಯಲ್ಲಿ ಹಸ್ತಕ್ಷೇಪ ಮಾಡಲು ತಮಿಳುನಾಡಿನ ಸ್ಟಾಲಿನ್ ಸರಕಾರಕ್ಕೆ ಯಾವುದೇ ಅಧಿಕಾರವಿಲ್ಲ ! – ನ್ಯಾಯವಾದಿ ಸೀತಾರಾಮ ಕಲಿಂಗಾ

ಭಾರತದ ಇತಿಹಾಸದಲ್ಲಿ, ರಾಜರು ಮತ್ತು ಮಹಾರಾಜರು ದೇವಾಲಯಗಳನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡು ನಡೆಸುತ್ತಿರಲಿಲ್ಲ, ಆದರೆ ದೇವಾಲಯಗಳಿಗೆ ಭೂಮಿ ಮತ್ತು ಹಣವನ್ನು ದಾನ ಮಾಡುತ್ತಿದ್ದರು. ಆ ಸಮಯದಲ್ಲಿ ದೇವಾಲಯಗಳ ನಿರ್ವಹಣೆಯನ್ನು ಭಕ್ತರು ನೋಡಿಕೊಳ್ಳುತ್ತಿದ್ದರು

ಯುವ ಸಾಧಕರು ಪ್ರತಿಯೊಂದು ಕೃತಿಯನ್ನು ಸಾಧನೆ ಮತ್ತು ಧರ್ಮಾಚರಣೆ ಎಂದು ಮಾಡಲು ಪ್ರಯತ್ನಿಸಬೇಕು ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಮುಂಬರುವ ಭೀಕರ ಆಪತ್ಕಾಲವನ್ನು ಎದುರಿಸಲು ನಾವು ನಮ್ಮ ಸಾಧನೆಯ ವೇಗವನ್ನು ಹೆಚ್ಚಿಸಿ ಗುರುಕೃಪೆಯನ್ನು ಸಂಪಾದಿಸಬೇಕು. ಇಂದು ಎಷ್ಟೋ ಮಕ್ಕಳು ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ನಮ್ಮಲ್ಲಿರುವ ಕೌಶಲ್ಯದ ಉಪಯೋಗವನ್ನು ಸಾಧನೆಗಾಗಿ ನೀಡಬೇಕು.

ಕೈಯಲ್ಲಿ ಖಡ್ಗವನ್ನು ಹಿಡಿದು ಸುತ್ತಾಡುತ್ತಿದ್ದ ಮನೋರೋಗಿ ರಾಯ್ ಡಿಸೋಜ಼ ಪೊಲೀಸರ ಥಳಿತದಿಂದ ಸಾವು !

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಪೊಲೀಸರ ಥಳಿತದಿಂದ ರಾಯ್ ಡಿಸೋಜ಼ (ವಯಸ್ಸು ೫೦) ಈ ಮನೋರೋಗಿಯು ಮೃತಪಟ್ಟಿದ್ದಾರೆ. ಈ ಪ್ರಕರಣದಲ್ಲಿ ೮ ಪೊಲೀಸರನ್ನು ಕೂಡಲೇ ಅಮಾನತುಗೊಳಿಸುವಂತೆ ದಕ್ಷಿಣ ಪೊಲೀಸ್ ಅಧಿಕಾರಿ ಪ್ರವೀಣ ಮಧುಕರ ಪವಾರರು ಆದೇಶಿಸಿದ್ದಾರೆ.

ಉಡುಪಿಯಲ್ಲಿ ಮತಾಂಧರು ನೆರೆಮನೆಯ ಹಿಂದೂವಿನ ಹಸುವನ್ನು ಕದ್ದು ಹತ್ಯೆ !

ಇಲ್ಲಿಯ ಇಬ್ರಾಹಿಂ ಎಂಬ ಹೆಸರಿನ ವ್ಯಕ್ತಿಯು ಪಕ್ಕದ ಯಮನ ಗಂಗಾಧರನ ಹಸುವನ್ನು ಕದ್ದು ತನ್ನ ಮನೆಯಲ್ಲಿಯೇ ಹತ್ಯೆ ಮಾಡಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಘಟನೆಯು ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗಿದೆ.